ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ADRDE), ಆಗ್ರಾ ಘಟಕದಲ್ಲಿ ಖಾಲಿ ಇರುವ 5 ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ :
ಹುದ್ದೆಗಳ ಹೆಸರು: ಜೂನಿಯರ್ ರಿಸರ್ಚ್ ಫೆಲೋ (JRF)
ಒಟ್ಟು ಹುದ್ದೆಗಳು: 5
ನೇಮಕಾತಿ ವಿಧಾನ: ಸ್ವೀಕೃತ ಅರ್ಜಿ ಪರಿಶೀಲನೆ ಬಳಿಕ ಸಂದರ್ಶನದ ಮೂಲಕ ಆಯ್ಕೆ
ಹುದ್ದೆಗಳ ವಿವರಗಳು :
- ಮೆಕಾನಿಕಲ್ ಎಂಜಿನಿಯರಿಂಗ್ – 2 ಹುದ್ದೆಗಳು
- ಏರೋಸ್ಪೇಸ್ ಎಂಜಿನಿಯರಿಂಗ್ – 1 ಹುದ್ದೆ
- ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ – 1 ಹುದ್ದೆ
- ಟೆಕ್ಸ್ಟೈಲ್ ಎಂಜಿನಿಯರಿಂಗ್ – 1 ಹುದ್ದೆ
ಅರ್ಹತಾ ಮಾನದಂಡ:
ಗರಿಷ್ಠ 28 ವರ್ಷ (SC/ST/OBC ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ).
ಶೈಕ್ಷಣಿಕ ಅರ್ಹತೆ :
- BE/B.Tech (ಪ್ರಥಮ ದರ್ಜೆಯಲ್ಲಿ) ಮತ್ತು NET/GATE ಉತ್ತೀರ್ಣರಾಗಿರಬೇಕು ಅಥವಾ
- ME/M.Tech (ಪ್ರಥಮ ದರ್ಜೆಯಲ್ಲಿ) ಸಂಬಂಧಿತ ಶಾಖೆಯಲ್ಲಿ ಪೂರೈಸಿರಬೇಕು.
- ಎಲ್ಲಾ ವಿದ್ಯಾರ್ಹತೆಗಳು ಪ್ರಥಮ ದರ್ಜೆಯಲ್ಲಿ ಇರಬೇಕು.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹37,000/- ಸ್ಟೈಪೆಂಡ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
- ಆಸಕ್ತರು ಅಧಿಕೃತ ವೆಬ್‌ಸೈಟ್ www.drdo.gov.in ನಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿಗೊಳಿಸಬೇಕು.
- ಭರ್ತಿಗೊಳಿಸಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
Director, ADRDE Agra, DRDO, Post Box No. 51, Station Road, Agra Cantt – 282001
- ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಲಿಂಕ್: https://tinyurl.com/bdz7xdwu
ಆಯ್ಕೆ ಪ್ರಕ್ರಿಯೆ :
- ಅರ್ಜಿ ಪರಿಶೀಲನೆ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
- ಡಿಆರ್‌ಡಿಒದಲ್ಲಿ ಸಂಶೋಧನಾ ಹುದ್ದೆಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶ. ಸದುಪಯೋಗಪಡಿಸಿಕೊಳ್ಳಿ!
Comments