Loading..!

ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) ನೇಮಕಾತಿ 2025: 6,414 ಶಿಕ್ಷಕರ ಹುದ್ದೆಗಳ ಹಾಲ್ ಟಿಕೆಟ್ ಔಟ್! ಪರೀಕ್ಷೆಯ ದಿನಾಂಕ ಮತ್ತು ಲಿಂಕ್ ಸಂಪೂರ್ಣ ವಿವರ ಇಲ್ಲಿದೆ.
Published by: Yallamma G | Date:30 ಡಿಸೆಂಬರ್ 2025
not found

ಕೆವಿಎಸ್ ನೇಮಕಾತಿ 2026: 6,414 ಶಿಕ್ಷಕರ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟ; ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಲಿಂಕ್ ಇಲ್ಲಿದೆ!


ಹೊಸದಿಲ್ಲಿ/ಬೆಂಗಳೂರು: ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) ವತಿಯಿಂದ ಖಾಲಿ ಇರುವ ಬರೋಬ್ಬರಿ 6,414 ಪ್ರಾಥಮಿಕ ಶಿಕ್ಷಕರ (PRT) ಮತ್ತು ಶಿಕ್ಷಕೇತರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆಜನವರಿ 10 ಮತ್ತು 11 ರಂದು ಮೊದಲ ಹಂತದ ಪರೀಕ್ಷೆ ನಡೆಯಲಿದೆ.


ಪರೀಕ್ಷಾ ಪ್ರಮುಖ ವಿವರಗಳು : ಕೇಂದ್ರೀಯ ವಿದ್ಯಾಲಯಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸಿ ಡಿಸೆಂಬರ್ 26, 2025 ರವರೆಗೆ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ಅಭ್ಯರ್ಥಿಗಳು ಇದೀಗ ಪರೀಕ್ಷೆಗೆ ಸಜ್ಜಾಗಬೇಕಿದೆ.
ಒಟ್ಟು ಹುದ್ದೆಗಳು: 6,414 (ಪ್ರಾಥಮಿಕ ಶಿಕ್ಷಕರು ಮತ್ತು ಶಿಕ್ಷಕೇತರ ಹುದ್ದೆಗಳು)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಡಿಸೆಂಬರ್ 2025
ಪರೀಕ್ಷಾ ದಿನಾಂಕ: 10 ಮತ್ತು 11 ಜನವರಿ 2026
ಹಂತ: ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ


ಪರೀಕ್ಷಾ ವೇಳಾಪಟ್ಟಿ (Exam Schedule) : ಅಧಿಕೃತ ಪ್ರಕಟಣೆಯಂತೆ, ಪರೀಕ್ಷೆಗಳು 2026ರ ಜನವರಿ 10 ಮತ್ತು 11 ರಂದು ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ.
* ಜನವರಿ 10, 2026 (ಬೆಳಿಗ್ಗೆ): PRT, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಲ್ಯಾಬ್ ಅಟೆಂಡೆಂಟ್. ಪರೀಕ್ಷಾ ಸಮಯ 9.30 AM - 11.30 AM
* ಜನವರಿ 10, 2026 (ಮಧ್ಯಾಹ್ನ): MTS (ಮಲ್ಟಿ ಟಾಸ್ಕಿಂಗ್ ಸ್ಟಾಫ್), ಪರೀಕ್ಷಾ ಸಮಯ 2.30 PM - 4.30 PM
* ಜನವರಿ 11, 2026 (ಬೆಳಿಗ್ಗೆ): ಅಸಿಸ್ಟೆಂಟ್ ಕಮಿಷನರ್, ಪ್ರಾಂಶುಪಾಲರು, ಉಪ-ಪ್ರಾಂಶುಪಾಲರು, PGT, ಪರೀಕ್ಷಾ ಸಮಯ 9.30 AM - 11.30 AM
* ಜನವರಿ 11, 2026 (ಮಧ್ಯಾಹ್ನ): TGT, ಲೈಬ್ರರಿಯನ್, ಅಡ್ಮಿನಿಸ್ಟ್ರೇಟಿವ್ ಆಫೀಸರ್ ಮತ್ತು ಇತರ ಹುದ್ದೆಗಳು, ಪರೀಕ್ಷಾ ಸಮಯ 2.30 PM - 4.30 PM


ಪರೀಕ್ಷಾ ಕೇಂದ್ರ ಮತ್ತು ಪ್ರವೇಶ ಪತ್ರ (Admit Card) ಪಡೆಯುವುದು ಹೇಗೆ?
ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರದ ಮಾಹಿತಿ ಮತ್ತು ಅಧಿಕೃತ ಪ್ರವೇಶ ಪತ್ರವನ್ನು ಈ ಕೆಳಗಿನ ಹಂತಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು:

1. ಕೆಳಗೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.

2. ನಿಮ್ಮ Application Number ಮತ್ತು Date of Birth ಅನ್ನು ನಮೂದಿಸಿ.

3. ಪರದೆಯ ಮೇಲೆ ಕಾಣುವ 'Submit' ಬಟನ್ ಒತ್ತಿರಿ.

4. ನಿಮ್ಮ ಪರೀಕ್ಷಾ ಕೇಂದ್ರದ ವಿವರಗಳು ಮತ್ತು ದಿನಾಂಕದ ಮಾಹಿತಿ ದೊರೆಯಲಿದೆ.

5. ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ಪ್ರಿಂಟ್ ತೆಗೆದುಕೊಳ್ಳಿ.


ಪ್ರವೇಶ ಪತ್ರ ಲಾಗಿನ್ ವಿವರಗಳು
=> ನಗರ ಹಂಚಿಕೆ:
ನೋಂದಾಯಿತ ಅಭ್ಯರ್ಥಿಗಳಿಗೆ ಪರೀಕ್ಷಾ ನಗರವನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ ಪರಿಶೀಲಿಸಬಹುದು: KVS City Allotment Link.

=> ಲಾಗಿನ್ ಮಾಡುವ ವಿಧಾನ: ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration No.) ಮತ್ತು ಅರ್ಜಿ ಸಲ್ಲಿಸುವಾಗ ರಚಿಸಿದ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.

=> ಗಮನಿಸಿ: ಲಾಗಿನ್ ಮಾಡುವಾಗ 'Application Number' ಅನ್ನು ಬಳಸಬಾರದು. ನೋಂದಣಿ ಸಂಖ್ಯೆಯು '2598' ಅಂಕಿಗಳಿಂದ ಪ್ರಾರಂಭವಾಗುತ್ತದೆ.

=> ಪ್ರವೇಶ ಪತ್ರ (Admit Card): ಪರೀಕ್ಷಾ ಕೇಂದ್ರದ ಸಂಪೂರ್ಣ ವಿವರಗಳನ್ನೊಳಗೊಂಡ ಪ್ರವೇಶ ಪತ್ರವು ಪರೀಕ್ಷೆಗೆ 2 ದಿನಗಳ ಮೊದಲು ಲಭ್ಯವಾಗಲಿದೆ.

=> ಬದಲಾವಣೆಗೆ ಅವಕಾಶವಿಲ್ಲ: ಯಾವುದೇ ಕಾರಣಕ್ಕೂ ಪರೀಕ್ಷಾ ನಗರವನ್ನು ಬದಲಾಯಿಸಲು ನೀಡುವ ವಿನಂತಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಈಗಾಗಲೇ ಅಧಿಸೂಚಿದ KVS ಬೋಧಕ ಮತ್ತು ಬೋಧಕೇತರ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ

ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ನೆನಪಿರಲಿ:
ಕಾಲ್ ಲೆಟರ್ (Call Letter): ಮುಖ್ಯ ಪರೀಕ್ಷೆಯ ಪ್ರವೇಶ ಪತ್ರದ ಜೊತೆಗೆ ಪೂರ್ವಭಾವಿ ಪರೀಕ್ಷೆಯ ಕಾಲ್ ಲೆಟರ್ (ಅಲ್ಲಿ ಸೀಲ್ ಹಾಕಿದ್ದರೆ) ಇಟ್ಟುಕೊಳ್ಳಿ.

ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್‌ನ ಅಸಲಿ ಪ್ರತಿ ಮತ್ತು ಒಂದು ಜೆರಾಕ್ಸ್ ಪ್ರತಿ ಇರಲಿ.

ಫೋಟೋಗಳು: ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಜೊತೆಯಲ್ಲಿಡಿ.

ಸಮಯ : ಪರೀಕ್ಷೆಗೆ ಕನಿಷ್ಠ 30 ನಿಮಿಷ ಮೊದಲು ಕೇಂದ್ರಕ್ಕೆ ಹಾಜರಾಗಿರಿ, ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಿಗೆ ಅವಕಾಶವಿಲ್ಲ

ನಿಯಮಗಳು : Call Letter ನಲ್ಲಿ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಹಾಯವಾಣಿ (Helpline)
ಅಭ್ಯರ್ಥಿಗಳಿಗೆ ಯಾವುದೇ ತಾಂತ್ರಿಕ ತೊಂದರೆಗಳಿದ್ದಲ್ಲಿ ಈ ಕೆಳಗಿನ ವಿಳಾಸ ಅಥವಾ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು:
Email-id: kvsnvs.recruitment2025@cbseshiksha.in 
Phone No: 011-24050452, 53, 56, 57, 77


ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಸುದ್ದಿಗಳಿಗಾಗಿ KPSCVaani ಓದುತ್ತಿರಿ.

KPSCvaani ಯ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ

Comments