Loading..!

ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಅಕೌಂಟೆಂಟ್ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:23 ಡಿಸೆಂಬರ್ 2025
not found

                          ರಾಷ್ಟ್ರೀಯ ಆರೋಗ್ಯ ಅಭಿಯಾನ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ವಿಜಯನಗರ ಜಿಲ್ಲೆಗೆ ಮಂಜೂರಾಗಿರುವ ಒಂದು Accountant ಹುದ್ದೆಗೆ ಪ್ರತೀ ಆರ್ಥಿಕ ವರ್ಷಗಳಲ್ಲಿ ನವೀಕರಣದ ಷರತ್ತುಗಳನ್ನೊಳಗೊಂಡಂತೆ ಎನ್.ಹೆಚ್.ಎಂ ನಿಯಮಾವಳಿಗಳ ಪ್ರಕಾರ ಮೇರಿಟ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.


         ಸದರಿ ನೇರ ಗುತ್ತಿಗೆ ನೇಮಕಾತಿಯು ತಾತ್ಕಾಲಿಕವಾಗಿದ್ದು, ದಿನಾಂಕ: 31.03.2026 ಅಥವಾ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಸೀಮಿತವಾಗಿರುತ್ತದೆ. ಸದರಿ ಹುದ್ದೆಯನ್ನು ಮುಂದುವರೆಸಬೇಕಾದ್ದಲ್ಲಿ ಕಾರ್ಯಕ್ಷಮತೆಯನ್ನು ಪರಿಕ್ಷೀಸಿ, 01.04.2026 ರಂದು ಕರ್ತವ್ಯದಿಂದ ಬಿಡುಗಡೆಗೊಳಿಸಿ, 02.04.2026 ರಿಂದ 2026-27 ನೇ ಸಾಲಿಗೆ ಮುಂದುವರೆಸಲಾಗುವುದು.


ಅರ್ಹತೆ : 
1. ವ್ಯಾಪಾರ ಪದವೀಧರರು
2. ಹಣಕಾಸು ನಿರ್ವಹಣೆಯಲ್ಲಿ MBA/PGD
3. ಮಾನ್ಯತೆ ಪಡೆದ ಸಮಾಜ ಅಥವಾ ಸಂಸ್ಥೆಯಲ್ಲಿ ಲೆಕ್ಕಪರಿಶೋಧನೆಯ ಪರಿಚಿತತೆ


ಅನುಭವ:
1. ಮಾನ್ಯತೆ ಪಡೆದ ಸೊಸೈಟಿ ಅಥವಾ ಸಂಸ್ಥೆಯಲ್ಲಿ ಖಾತೆಗಳ ಡಬಲ್ ಎಂಟ್ರಿ ವ್ಯವಸ್ಥೆಯಲ್ಲಿ ಎರಡು ವರ್ಷಗಳ ಅನುಭವ.
2. ಕನಿಷ್ಠ 2 ವರ್ಷಗಳ ಕಾಲ ಲೆಕ್ಕಪತ್ರ ಸಾಫ್ಟ್‌ವೇರ್‌ನೊಂದಿಗೆ ಕೆಲಸ ಮಾಡಿದ ಅನುಭವ.


ವಯೋಮಾನ : ಅಭ್ಯರ್ಥಿಗಳು ಗರಿಷ್ಠ 45 ವರ್ಷ ವಯೋಮಿತಿ ಮೀರಿರಬಾರದು.


ವೇತನ : ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 14,698/- ವೇತನ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.


ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.


ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.


ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.


ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.


ಅರ್ಜಿ ಶುಲ್ಕ :ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಡಿಸೆಂಬರ್ 17, 2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 24, 2025 


ಸಾಮಾನ್ಯ ಸೂಚನೆ : 
=> ಒಂದೇ ಹುದ್ದೆಯಾಗಿರುವುದರಿಂದ ಮೀಸಲಾತಿ ಅನ್ವಯಿಸುವುದಿಲ್ಲ.
=> ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ಖಾಲಿ ಇರುವ ಸದರಿ ಹುದ್ದೆಯ ನೇಮಕಾತಿಗೆ ಸಲ್ಲಿಸುವ ಅರ್ಜಿಯ ಜೊತೆಗೆ ಸದರಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಪಟ್ಟ ಪೂರ್ಣ ವಿವರವನ್ನು ದಾಖಲಾತಿಗಳನ್ನು www.vijayanagara.nic.in ಈ ಜಾಲತಾಣದಲ್ಲಿರುವಂತೆ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಿದ ನಂತರ ಹೆಚ್ಚುವರಿ ದಾಖಲಾತಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
=> ಅಭ್ಯರ್ಥಿಗಳು ಭಾರತೀಯ ನಾಗರೀಕರಾಗಿರತಕ್ಕದ್ದು.
=> ಅಭ್ಯರ್ಥಿಗಳು ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ಆನ್‌ಲೈನ್ ಮೂಲಕ ಆಪಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಆನ್‌ಲೈನ್ ಮೂಲಕ ಸಲ್ಲಿಸುವ ಅರ್ಜಿಗಳಲ್ಲಿ ಅಪೂರ್ಣ ಹಾಗೂ ಅಸ್ಪಷ್ಟ ದಾಖಲೆಗಳನ್ನು ಅಥವಾ ಮಾಹಿತಿಗಳನ್ನು ನೀಡಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

Comments