DHFWS ಕಲಬುರಗಿ ನೇಮಕಾತಿ: ತಿಂಗಳಿಗೆ ₹25,000 ವರೆಗೆ ವೇತನ, ಜಿಲ್ಲಾ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕ

ಕಲಬುರಗಿ ನೇಮಕಾತಿ 2026: ವಿ.ಬಿ.ಡಿ ಮೇಲ್ವಿಚಾರಕರ (VBD Supervisors) ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಲಬುರಗಿ: ನಿರುದ್ಯೋಗಿ ಯುವಕ ಯುವತಿಯರಿಗೆ ಸುವರ್ಣಾವಕಾಶ! ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS Kalaburagi) ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಖಾಲಿ ಇರುವ 2 ವಿ.ಬಿ.ಡಿ ಮೇಲ್ವಿಚಾರಕರ (VBD Supervisor's) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯು ಸಂಪೂರ್ಣವಾಗಿ 1 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನಡೆಯಲಿದೆ.
ಈ ನೇಮಕಾತಿ ಒಪ್ಪಂದ ಆಧಾರದಲ್ಲಿ (Contract Basis) ನಡೆಯಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕಲಬುರಗಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 18-ಜನವರಿ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಯ ಕುರಿತಾದ ಸಂಪೂರ್ಣ ವಿವರಗಳು ಇಲ್ಲಿವೆ:
📌 ನೇಮಕಾತಿಯ ಪ್ರಮುಖ ವಿವರಗಳು :
ಇಲಾಖೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಬುರಗಿ
ಹುದ್ದೆಯ ಹೆಸರು: ವಿ.ಬಿ.ಡಿ ಮೇಲ್ವಿಚಾರಕರು (ಕಲಬುರಗಿ ಮತ್ತು ಚಿತ್ತಾಪುರ ತಾಲೂಕು).
ಒಟ್ಟು ಹುದ್ದೆಗಳು: 02.
ಕೆಲಸದ ಸ್ಥಳ : ಕಲಬುರಗಿ ಮತ್ತು ಚಿತ್ತಾಪುರ ತಾಲ್ಲೂಕು
ನೇಮಕಾತಿ ವಿಧಾನ: ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ.
ಅರ್ಹತೆಗಳು (Eligibility Criteria)
1. ವಿದ್ಯಾರ್ಹತೆ: ಅಭ್ಯರ್ಥಿಗಳು B.Sc (Biology) ಪದವಿ ಹೊಂದಿರಬೇಕು.
ಒಂದು ವೇಳೆ ನಿಗದಿತ ವಿದ್ಯಾರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಪಿಯುಸಿ (11th & 12th) ಯಲ್ಲಿ ವಿಜ್ಞಾನ ವಿಷಯ ಓದಿದ ಪದವೀಧರರನ್ನು ಪರಿಗಣಿಸಲಾಗುವುದು.
2. ಕಂಪ್ಯೂಟರ್ ಜ್ಞಾನ: ಕರ್ನಾಟಕ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಿಂದ ಪಡೆದ ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರ ಕಡ್ಡಾಯವಾಗಿದೆ.
3. ಚಾಲನಾ ಪರವಾನಗಿ: ಅಭ್ಯರ್ಥಿಯು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ದ್ವಿಚಕ್ರ ವಾಹನ ಚಾಲನಾ ಪರವಾನಗಿ (Two Wheeler DL) ಹೊಂದಿರಬೇಕು.
4. ಆದ್ಯತೆ: ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ
ವಯೋಮಿತಿ: ಗರಿಷ್ಠ 40 ವರ್ಷಗಳು.
ಸರಕಾರದ ನಿಯಮಾನುಸಾರ ಮೀಸಲಾತಿ ಅನ್ವಯಿಸುತ್ತದೆ.
💰 ವೇತನ ವಿವರ (Salary Details)
ಮಾಸಿಕ ವೇತನ: ₹22,000/-
ಇಂಧನ ಭತ್ಯೆ (POL): ₹3,000/-
👉 ಒಟ್ಟು: ₹25,000/- (ಸುಮಾರು)
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ಮೀಸಲಾತಿ ವಿವರ (Reservation)
ಈ ಹುದ್ದೆಗಳನ್ನು ಈ ಕೆಳಗಿನ ವರ್ಗಗಳಿಗೆ ಮೀಸಲಿಡಲಾಗಿದೆ:
* SC-A-OT-01
* GM-W-01 ಸೂಚನೆ: ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ (371J) ಮೀಸಲಾತಿಯಡಿ ಬರುತ್ತಾರೆ.
📢 ಆಯ್ಕೆ ಪ್ರಕ್ರಿಯೆ (Selection Process)
ಅರ್ಹತೆ ಮತ್ತು ಅನುಭವದ ಆಧಾರದಲ್ಲಿ ಮೆರಿಟ್ ಲಿಸ್ಟ್
ಅಗತ್ಯವಿದ್ದರೆ ದಾಖಲೆ ಪರಿಶೀಲನೆ
ಅಂತಿಮ ತೀರ್ಮಾನವು ಆಯ್ಕೆ ಸಮಿತಿಯದ್ದೇ ಆಗಿರುತ್ತದೆ
ಅರ್ಜಿ ಸಲ್ಲಿಸುವ ಹಂತಗಳು (Step-by-Step Process):
=> ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನ ಅಧಿಕೃತ ಲಿಂಕ್ https://sevasindhuservices.karnataka.gov.in ಗೆ ಭೇಟಿ ನೀಡಿ.
=> ದಾಖಲೆಗಳ ಸಿದ್ಧತೆ: ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಎಲ್ಲಾ ಮೂಲ ದಾಖಲೆಗಳನ್ನು (Original Documents) ಸ್ಕ್ಯಾನ್ ಮಾಡಿ ಸಿದ್ಧಪಡಿಸಿಕೊಳ್ಳಿ.
=> ಅರ್ಜಿ ಭರ್ತಿ ಮಾಡಿ: ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ ಮತ್ತು ಅನುಭವದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
=> ದಾಖಲೆಗಳ ಅಪ್‌ಲೋಡ್: ಈ ಕೆಳಗಿನ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ:
ಎಸ್.ಎಸ್.ಎಲ್.ಸಿ (SSLC), ಪಿ.ಯು.ಸಿ (PUC) ಮತ್ತು ಪದವಿ ಅಂಕಪಟ್ಟಿಗಳು.
ಜಾತಿ ಪ್ರಮಾಣ ಪತ್ರ ಮತ್ತು ಕಲ್ಯಾಣ ಕರ್ನಾಟಕ (371J) ಪ್ರಮಾಣ ಪತ್ರ.
ಗ್ರಾಮೀಣ, ಕನ್ನಡ ಮಾಧ್ಯಮ, ಯೋಜನೆ ನಿರಾಶ್ರಿತ ಅಥವಾ ಅಂಗವಿಕಲ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ).
ದ್ವಿಚಕ್ರ ವಾಹನ ಚಾಲನಾ ಪರವಾನಗಿ (Driving License) ಪ್ರಮಾಣ ಪತ್ರ.
ಅಂಗೀಕೃತ ಸಂಸ್ಥೆಯಿಂದ ಪಡೆದ ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರ.
=> ಸಲ್ಲಿಕೆ (Submit): ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಬ್‌ಮಿಟ್ ಮಾಡಿ.
=> ಸ್ವೀಕೃತಿ ಪತ್ರ (Acknowledgment): ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್‌ನಲ್ಲಿ ಜನರೇಟ್ ಆಗುವ ಸ್ವೀಕೃತಿ ಪತ್ರವನ್ನು ಪ್ರಿಂಟ್ ತೆಗೆದುಕೊಳ್ಳಿ. ಮೂಲ ದಾಖಲಾತಿ ಪರಿಶೀಲನೆಯ ಸಮಯದಲ್ಲಿ ಇದನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಅಗತ್ಯವಿರುವ ದಾಖಲೆಗಳು (Documents Required)
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ:
• ಎಸ್.ಎಸ್.ಎಲ್.ಸಿ (SSLC) ಮತ್ತು ಪಿ.ಯು.ಸಿ (PUC) ಅಂಕಪಟ್ಟಿ.
• ಪದವಿ ಅಂಕಪಟ್ಟಿಗಳು.
• ಜಾತಿ ಪ್ರಮಾಣ ಪತ್ರ ಮತ್ತು 371(J) ಪ್ರಮಾಣ ಪತ್ರ.
• ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ).
• ಅಂಗವಿಕಲ/ಯೋಜನಾ ನಿರಾಶ್ರಿತ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ).
• ದ್ವಿಚಕ್ರ ವಾಹನ ಚಾಲನಾ ಪರವಾನಗಿ (Driving License).
• ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 12.01.2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18.01.2026.
ಅರ್ಜಿ ಸಲ್ಲಿಸುವ ಲಿಂಕ್: ಸೇವಾ ಸಿಂಧು ಪೋರ್ಟಲ್.
ಪ್ರಮುಖ ಸೂಚನೆಗಳು:
- ಮುಕ್ತ ವಿಶ್ವವಿದ್ಯಾಲಯದ (Open University) ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ಅವಕಾಶವಿರುವುದಿಲ್ಲ.
- ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್ ಸ್ವೀಕೃತಿ ಪತ್ರವನ್ನು (Acknowledgment) ಮೂಲ ದಾಖಲೆಗಳ ಪರಿಶೀಲನೆಗೆ ಸಲ್ಲಿಸುವುದು ಕಡ್ಡಾಯ.
- ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ kalaburagi.nic.in ಗಮನಿಸುತ್ತಿರಿ.
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ KPSCVaani.com ಗೆ ಭೇಟಿ ನೀಡಿ.





Comments