ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಅವಕಾಶಗಳನ್ನು ಹುಡುಕುತ್ತಿರುವವರಿಗೆ ಶುಭ ಸುದ್ದಿ! 🏥 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS) ಚಿತ್ರದುರ್ಗ 2025ರ ನೇಮಕಾತಿಯನ್ನು ಘೋಷಿಸಿದ್ದು, ವಿವಿಧ ವೈದ್ಯಕೀಯ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳನ್ನು ಸುಧಾರಿಸುವ ಗುರಿ ಹೊಂದಿದೆ.
ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (KaBH1) ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 6 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೂಚಿಸಲಾಗಿರುವ ದಿನಾಂಕದಂದು ತಮ್ಮ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಕು.ಕ.ಇಲಾಖೆ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.
💼 ವೈದ್ಯಕೀಯ ಅಧಿಕಾರಿಗಳಿಗೆ ನೇಮಕಾತಿ ನಿಯಮಾನುಸಾರ ವೇತನ ಶ್ರೇಣಿಯೊಂದಿಗೆ ಈ ಹುದ್ದೆಗಳು ಚಿತ್ರದುರ್ಗ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಪರ ಅವಕಾಶವನ್ನು ನೀಡುತ್ತವೆ. ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು DHFWS ಚಿತ್ರದುರ್ಗ ನೇಮಕಾತಿ 2025ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ! 👨⚕️👩⚕️
DHFWS ಚಿತ್ರದುರ್ಗ ನೇಮಕಾತಿ 2025 ಪ್ರಮುಖ ವಿವರಗಳು :
ಖಾಲಿ ಇರುವ ಹುದ್ದೆಗಳ ವಿವರ:
ನರವಿಜ್ಞಾನಿ/ಫಿಸಿಯನ್/ವೈದ್ಯಕೀಯ ಅಧಿಕಾರಿ – 1 ಹುದ್ದೆ
ನರ್ಸ್ – 1 ಹುದ್ದೆ
ಭೌತಚಿಕಿತ್ಸಕ – 1 ಹುದ್ದೆ
ಸ್ಪೀಚ್ ಥೆರಪಿಸ್ಟ್ (ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್) – 1 ಹುದ್ದೆ
ಕ್ಲಿನಿಕಲ್ ಮನಶ್ಶಾಸ್ತ್ರಜ್ಞ – 1 ಹುದ್ದೆ
ಜಿಲ್ಲಾ ಸಂಯೋಜಕರು – 1 ಹುದ್ದೆ
ವಯೋಮಿತಿ:
ಗರಿಷ್ಠ ಮಿತಿ – 45 ರಿಂದ 60 ವರ್ಷಗಳು
ಆಯ್ಕೆ ವಿಧಾನ:
ಮೆರಿಟ್ ಪಟ್ಟಿ ಹಾಗೂ ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ನೇರ ಸಂದರ್ಶನ ನಡೆಯುವ ಸ್ಥಳ : ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಲ್ಲಾ ಅಗತ್ಯ ಶೈಕ್ಷಣಿಕ ಮೂಲ ದಾಖಲಾತಿಗಳೊಂದಿಗೆ ಮತ್ತು ಒಂದು ಸೆಟ್ ದೃಡೀಕೃತ ನಕಲು ಪ್ರತಿಗಳೊಂದಿಗೆ ಇದೇ ಜುಲೈ 30ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಸಲಾಗುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಸ್ಥಳ : ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣ, ಚಿತ್ರದುರ್ಗ.
ನೇಮಕಾತಿಯ ಪ್ರಮುಖ ದಿನಾಂಕಗಳು:
ನೇಮಕಾತಿಯ ಪ್ರಕಟಣೆಯ ದಿನಾಂಕ ದಿನಾಂಕ – ಜುಲೈ 08, 2025
ನೇರ ಸಂದರ್ಶನ ನಡೆಯುವ ದಿನಾಂಕ – ಜುಲೈ 30, 2025
ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಛೇರಿ ಚಿತ್ರದುರ್ಗ ಇಲ್ಲಿ ಕೆಲಸದ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ. ಅಥವಾ ಮೊಬೈಲ್ ಸಂಖ್ಯೆ 8971552887, 9611783297 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
To Download Official Announcement
Chitradurga District Jobs 2025
Chitradurga Government Jobs 2025
Chitradurga Job Vacancy 2025
Chitradurga Zilla Panchayat Recruitment 2025
Chitradurga Notification 2025
Comments