Loading..!

ಚಿಕ್ಕಬಳ್ಳಾಪುರ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ : ಜ. 23ಕ್ಕೆ ನೇರ ಸಂದರ್ಶನ - ₹70,000 ಸಂಬಳ
Published by: Yallamma G | Date:21 ಜನವರಿ 2026
not found
ವೈದ್ಯಕೀಯ ವೃತ್ತಿಯಲ್ಲಿರುವ ಕನ್ನಡಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಸೇವೆ ಸಲ್ಲಿಸಲು ಸುವರ್ಣಾವಕಾಶ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯು ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು 'ನೇರ ಸಂದರ್ಶನ' (Walk-in Interview) ಆಹ್ವಾನಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು (DHFWS Chikkaballapur) ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು ಹಾಗೂ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (GDMO) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಪ್ರಕಟಣೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಿಲ್ಲದೆ, ಕೇವಲ "ನೇರ ಸಂದರ್ಶನ"ದ (Walk-in Interview) ಮೂಲಕ ಈ ಹುದ್ದೆಗಳನ್ನು ಪಡೆಯಬಹುದಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿಕ್ಕಬಳ್ಳಾಪುರ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 23-ಜನವರಿ-2026 ರಂದು ವಾಕ್-ಇನ್-ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆಗಳ ವಿವರ : 14
ಅರಿವಳಿಕೆ ತಜ್ಞ : 3
ವಿಕಿರಣಶಾಸ್ತ್ರಜ್ಞ : 4
ಶಿಶುವೈದ್ಯ : 1
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ : 1
ಮೂಳೆಚಿಕಿತ್ಸಕ : 2
ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿ : 3

ಯಾವ ಊರಿನಲ್ಲಿ ಖಾಲಿ ಇದೆ? (Locations): ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟ, ಗುಡಿಬಂಡೆ ಮತ್ತು ಚಿಕ್ಕಬಳ್ಳಾಪುರ (ಪೆರೇಸಂದ್ರ) ತಾಲೂಕು ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಶೈಕ್ಷಣಿಕ ಅರ್ಹತೆ:
- DHFWS ಚಿಕ್ಕಬಳ್ಳಾಪುರ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ , MBBS ಅನ್ನು ಪೂರ್ಣಗೊಳಿಸಿರಬೇಕು.
- ಎಂಬಿಬಿಎಸ್ ಜೊತೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಹೊಂದಿರಬೇಕು.

ವೇತನ ಶ್ರೇಣಿ (Salary): ಸರ್ಕಾರದ ಆದೇಶದನ್ವಯ ಈ ಕೆಳಗಿನಂತೆ ವೇತನ ನೀಡಲಾಗುತ್ತದೆ:
ತಜ್ಞ ವೈದ್ಯರು: ಮಾಸಿಕ ₹70,000/-.
GDMO (ಸಾಮಾನ್ಯ ವೈದ್ಯರು): ಮಾಸಿಕ ₹60,000/-

ಈಗಾಗಲೇ ಅಧಿಸೂಚಿದ ಹುದ್ದೆಗಳ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ

ನೇರ ಸಂದರ್ಶನದ ವಿವರ (Walk-in Interview Details): ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ (Original Documents) ಕೆಳಗೆ ತಿಳಿಸಿದ ಸ್ಥಳಕ್ಕೆ ಹಾಜರಾಗಬೇಕು.
ದಿನಾಂಕ: 23 ಜನವರಿ 2026 (ಶುಕ್ರವಾರ).
ಸಮಯ: ಬೆಳಗ್ಗೆ 11:00 ಗಂಟೆಗೆ.
ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ.

ವಿಶೇಷ ಸೂಚನೆ: ಒಂದು ವೇಳೆ ಈ ದಿನಾಂಕದಂದು ಹುದ್ದೆಗಳು ಭರ್ತಿಯಾಗದಿದ್ದರೆ, ಮುಂದಿನ ಪ್ರತಿ ಸೋಮವಾರ ನೇರ ಸಂದರ್ಶನ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಯಾವುದೇ ಆನ್‌ಲೈನ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ನೇರವಾಗಿ ನಿಗದಿಪಡಿಸಿದ ದಿನಾಂಕದಂದು ಮತ್ತು ಸಮಯಕ್ಕೆ ಸರಿಯಾಗಿ ಅಗತ್ಯ ದಾಖಲೆಗಳೊಂದಿಗೆ ಮೇಲೆ ತಿಳಿಸಿದ ವಿಳಾಸದಲ್ಲಿ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಪರ್ಕ ವಿವರಗಳನ್ನು ಬಳಸಬಹುದು:
ದೂರವಾಣಿ ಸಂಖ್ಯೆ: 08156-277034 
ಇಮೇಲ್: dhochikballapur@gmail.com 
ವೆಬ್‌ಸೈಟ್: www.chikkaballapur.nic.in

Comments