2020–21 ರ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ಮಾರ್ಚ್ 4ರಿಂದ 19 ರವರೆಗೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು ಇದ್ದರೆ ಇಲಾಖೆಗೆ ಸಲ್ಲಿಸಲೂ ಸೂಚಿಸಲಾಗಿದೆ. ವೇಳಾಪಟ್ಟಿ: ಮಾರ್ಚ್ 04: ಇಂಗ್ಲಿಷ್, ಭೌತಶಾಸ್ತ್ರ, ಬೇಸಿಕ್ ಮ್ಯಾಥ್, ಮಾರ್ಚ್ 05: ತಮಿಳು, ತೆಲುಗು,ಮಲೆಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್, ಮಾರ್ಚ್ 06: ಉರ್ದು, ಸಂಸ್ಕೃತ, ಮಾರ್ಚ್ 07: ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮಾರ್ಚ್ 09: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ,ಗಣಿತ, ಮಾರ್ಚ್ 11: ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್, ಮಾರ್ಚ್ 12: ಬಿಜಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ, ಮಾರ್ಚ್ 13: ಭೂಗೋಳಶಾಸ್ತ್ರ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ ಮಾರ್ಚ್ 14: ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ, ಮಾರ್ಚ್ 16: ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 17: ಹಿಂದಿ, ಮಾರ್ಚ್ 18: ಕನ್ನಡ ಮತ್ತು ಮಾರ್ಚ್ 19: ಇಂಗ್ಲಿಷ್.






Comments