ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) 2025ರ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರುನಲ್ಲಿ ಇರುವ ಪ್ರಾದೇಶಿಕ ನಿರ್ದೇಶನಾಲಯದಲ್ಲಿ ಖಾಲಿ ಇರುವ ಜೂನಿಯರ್ ರಿಸರ್ಚ್ ಫೆಲೋ (JRF) ಮತ್ತು ಸೀನಿಯರ್ ರಿಸರ್ಚ್ ಫೆಲೋ (SRF) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ : 03
JRF ಹುದ್ದೆಗಳು : 02
SRF ಹುದ್ದೆಗಳು : 01
ವೇತನ ಶ್ರೇಣಿ :
ಜೂನಿಯರ್ ರಿಸರ್ಚ್ ಫೆಲೋ (JRF) : ₹37,000/-
ಸೀನಿಯರ್ ರಿಸರ್ಚ್ ಫೆಲೋ (SRF) : ₹42,000/-
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು B.E/B.Tech, M.Tech ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
ವಯೋಮಿತಿ:
JRF ಹುದ್ದೆಗಳಿಗೆ : ಅಭ್ಯರ್ಥಿಗಳು ಗರಿಷ್ಠ 30 ವರ್ಷ
SRF ಹುದ್ದೆಗಳಿಗೆ : ಅಭ್ಯರ್ಥಿಗಳು ಗರಿಷ್ಠ 32 ವರ್ಷ
SC/ST/OBC/PwD ಅಭ್ಯರ್ಥಿಗಳಿಗೆ: 5 ವರ್ಷದ ವಯೋಮಿತಿ ಸಡಿಲಿಕೆ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅಪ್ಲಿಕೇಶನ್ ಫಾರ್ಮ್ ನ್ನು ಭರ್ತಿ ಮಾಡಿ, ಸಂಬಂಧಿತ ದಾಖಲೆಗಳೊಂದಿಗೆ ಸ್ವಹಸ್ತಾಕ್ಷರಿತ ಪ್ರತಿಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
📮ವಿಳಾಸ:
ಪ್ರಾದೇಶಿಕ ನಿರ್ದೇಶಕರು,
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ,
ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು,
"ನಿಸರ್ಗ ಭವನ", ಎ-ಬ್ಲಾಕ್, 1 ಮತ್ತು 2ನೇ ಮಹಡಿ,
ತಿಮ್ಮಯ್ಯ ರಸ್ತೆ, 7ನೇ ಡಿ ಮೇನ್, ಶಿವನಗರ,
ಬೆಂಗಳೂರು – 560079
ಅಥವಾ ಅರ್ಜಿಯ ಸಾಫ್ಟ್ ಕಾಪಿಯನ್ನು ಈ ಇಮೇಲ್ ವಿಳಾಸಗಳಿಗೆ ಕಳುಹಿಸಬಹುದು:
📧 zobangalore.cpcb@nic.in
📧 anjana.cpcb@nic.in
ಅರ್ಜಿ ಸಲ್ಲಿಸುವ ವಿಧಾನ:
- CPCB ಅಧಿಸೂಚನೆಯನ್ನು ಸಂಪೂರ್ಣ ಓದಿ
- ಅಗತ್ಯ ದಾಖಲೆಗಳು (ವಯಸ್ಸು, ವಿದ್ಯಾರ್ಹತೆ, ಗುರುತಿನ ಚಿಹ್ನೆ, ಪಾಸ್‌ಪೋರ್ಟ್ ಫೋಟೋ, ರಿಸೂಮ್) ಸಿದ್ಧಪಡಿಸಿ
- ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಹಾಗೂ ಸರಿಯಾದ ರೂಪದಲ್ಲಿ ಭರ್ತಿ ಮಾಡಿ
- ಅಗತ್ಯವಿದ್ದಲ್ಲಿ ಅರ್ಜಿ ಶುಲ್ಕ ಪಾವತಿಸಿ
- ಸರಿಯಾದ ರೀತಿಯಲ್ಲಿ ಅರ್ಜಿ ಶಿಷ್ಟವಾಗಿ ಕಳುಹಿಸಿ
- ಇಮೇಲ್ ಮೂಲಕ ಸಾಫ್ಟ್ ಕಾಪಿ ಕಳುಹಿಸುವುದನ್ನೂ ಮರೆಯಬೇಡಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 05-ಆಗಸ್ಟ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-ಆಗಸ್ಟ್-2025
ಕೇಂದ್ರ ಸರ್ಕಾರದ ಅಧೀನದಲ್ಲಿ ಪರಿಸರ ರಕ್ಷಣೆಯತ್ತ ತನ್ನ ವೃತ್ತಿ ನಿರ್ಮಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಜಿ ಸಲ್ಲಿಸಿ, ನಿಮ್ಮ ಭವಿಷ್ಯಕ್ಕೆ ಹೊಸ ದಿಕ್ಕು ನೀಡಿ!
To Download Official Announcement
Neyveli Lignite Corporation Jobs 2025
Central Pollution Control Board Jobs 2025
NLC Job Notification 2025
CPCB Vacancy 2025
CPCB NLC Careers 2025
NLC CPCB Job Openings 2025
Comments