ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ, ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
Published by: Bhagya R K | Date:7 ಎಪ್ರಿಲ್ 2025
Image not found

ಭಾರತ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI) ನಿಂದ ಹೊಸ ನೇಮಕಾತಿಯ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ ಮತ್ತು ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


🔹 ಹುದ್ದೆಯ ಹೆಸರು :
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ – 10 ಹುದ್ದೆಗಳು  
- ಜೂನಿಯರ್ ಸ್ಟೆನೋಗ್ರಾಫರ್ – 6 ಹುದ್ದೆಗಳು  


ಒಟ್ಟು ಹುದ್ದೆಗಳು : 16  
ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ  


🔹 ವಿದ್ಯಾರ್ಹತೆ :  
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಪೂರ್ಣಗೊಳಿಸಿರಬೇಕು.


🔹 ವಯೋಮಿತಿ :  
ಅಧಿಕೃತ ಅಧಿಸೂಚನೆಯ ಪ್ರಕಾರ ಗರಿಷ್ಠ ವಯಸ್ಸು 28 ವರ್ಷ. ವಿವಿಧ ವರ್ಗಗಳಿಗೆ ವಯೋಮಿತಿ ಸಡಿಲಿಕೆಯೂ ಇದೆ:
- ಒಬಿಸಿ (NCL): 3 ವರ್ಷ
- SC/ST: 5 ವರ್ಷ
- PwBD (UR): 10 ವರ್ಷ
- PwBD (OBC): 13 ವರ್ಷ
- PwBD (SC/ST): 15 ವರ್ಷ


🔹 ವೇತನ ಶ್ರೇಣಿ :  
ಅಭ್ಯರ್ಥಿಗಳೆಗೆ ಪ್ರತಿ ತಿಂಗಳು ₹36,220 ರಿಂದ ₹47,415/- ರೂ ಗಳ ವರೆಗೆ ವೇತನವನ್ನು ನೀಡಲಾಗುತ್ತದೆ. 


🔹 ಅರ್ಜಿಶುಲ್ಕ :  
- SC/ST/PwBD/ಮಹಿಳೆಯರು/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
- ಇತರರಿಗೆ: ₹500/- (ಆನ್‌ಲೈನ್ ಮೂಲಕ ಪಾವತಿಸಬೇಕು)


🔹 ಆಯ್ಕೆ ಪ್ರಕ್ರಿಯೆ :  
ಅಭ್ಯರ್ಥಿಗಳ ಆಯ್ಕೆ ಟೈಪಿಂಗ್ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಪ್ರಾವೀಣ್ಯತೆ ಪರೀಕ್ಷೆ ಮತ್ತು ಸಂದರ್ಶನದ ಆಧಾರದಲ್ಲಿ ಮಾಡಲಾಗುತ್ತದೆ.


🔹 ಅರ್ಜಿ ಸಲ್ಲಿಸುವ ವಿಧಾನ:  
ಅಧಿಕೃತ ವೆಬ್‌ಸೈಟ್ [https://cftri.res.in/](https://cftri.res.in/) ಗೆ ಭೇಟಿ ನೀಡಿ. ಹುದ್ದೆಗಳ ವಿವರ ಪರಿಶೀಲಿಸಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಶುದ್ಧವಾಗಿ ಸಲ್ಲಿಸಿ.


📅 ಅರ್ಜಿಗಾಗಿ ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ: 07-04-2025  
- ಕೊನೆಯ ದಿನಾಂಕ: 07-05-2025
- ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07-05-2025


📢 ಈ ಅವಕಾಶವನ್ನು ಕೈ ತಪ್ಪಿಸಿಕೊಳ್ಳಬೇಡಿ ಸ್ನೇಹಿತರೇ! ಅರ್ಜಿ ಸಲ್ಲಿಸಿ, ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಗಳಿಸಿ!

Comments