Loading..!

ಕೇಂದ್ರ ಸರ್ಕಾರದಿಂದ ಗಡಿ ಭದ್ರತಾ ಪಡೆ ಮಾಜಿ ಅಗ್ನಿವೀರರಿಗೆ ಶೇ.10 ಮೀಸಲಾತಿ ಘೋಷಣೆ
Published by: Tajabi Pathan | Date:11 ಮಾರ್ಚ್ 2023
not found

ಕೇಂದ್ರ ಸರ್ಕಾರವು ಗಡಿ ಭದ್ರತಾ ಪಡೆ (ಬಿಎಸ್ಎಫ್) ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇಕಡ 10 ಮೀಸಲಾತಿ ಕಲ್ಪಿಸುವುದಾಗಿ ಘೋಷಿಸಿದೆ. ಮೊದಲ ಬ್ಯಾಚ್ ಅಥವಾ ನಂತರದ ಬ್ಯಾಚ್ ಎಂಬ ಪರಿಗಣನೆಗಳ ಆಧಾರದಲ್ಲಿ ಗರಿಷ್ಠ ವಯೋಮಿತಿಯನ್ನು ಸಡಿಲಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಗೃಹ ಸಚಿವಾಲಯ ಮಾರ್ಚ್ 09 ರಂದು ಈ ಕುರಿತು ಮಾಹಿತಿಯನ್ನು ಹೊರಡಿಸಿದೆ. ಅಧಿಸೂಚನೆ ನೇಮಕಾತಿ ಹಾಗೂ ವಯೋಮಿತಿ ಸಡಿಲಿಕೆ ಸಂಬಂಧ ಬಿಎಸ್‌ಎಫ್ ನಿಯಮಗಳ ತಿದ್ದುಪಡಿ ಹಾಗೂ ಮೊದಲ ಬ್ಯಾಚ್‌ನ ಮಾಜಿ ಅಗ್ನಿವೀರರ ಮೇಲಿನ ಗರಿಷ್ಠ ವಯೋಮಿತಿಯನ್ನು ಐದು ವರ್ಷದವರೆಗೆ ಹಾಗೂ ನಂತರದ ಎಲ್ಲ ಬ್ಯಾಚ್‌ಗಳ ವಯೋಮಿತಿಯನ್ನು ಮೂರು ವರ್ಷ ಸಡಿಲಿಕೆ ನೀಡುವದಾಗಿ ಸರ್ಕಾರ ಪ್ರಕಟಿಸಿದೆ.

Comments