ರೈಲ್ವೆ ನೇಮಕಾತಿ ಮಂಡಳಿಗಳು ಅಧಿಸೂಚನೆ CEN 02/2018 ರ ಹಂತ-1 ಸಿಬಿಟಿ(CBT)ಗೆ ಹಾಜರಾಗಿದ್ದ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಮರುಪಾವತಿಸಲು ಆರಂಭಿಸಿವೆ, ಮರುಪಾವತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಬ್ಯಾಂಕನ ವಿವರಗಳು ಅಪೂರ್ಣವಾಗಿದ್ದು ಮರುಪಾವತಿ ಸಾಧ್ಯವಾಗಿಲ್ಲ, ಕೆಳಗಿನ ಕಾರಣದಿಂದ (ರು) ಕಾರಣದಿಂದಾಗಿ ಅನೇಕ ಅಭ್ಯರ್ಥಿಗಳಿಗೆ ಮರುಪಾವತಿ ಸಾಧ್ಯವಾಗಲಿಲ್ಲ : ಎ) ಅಭ್ಯರ್ಥಿಗಳಿಂದ ಒದಗಿಸಲಾದ ತಪ್ಪಾದ ಬ್ಯಾಂಕ್ ವಿವರಗಳು ತಪ್ಪಾದ ಖಾತೆ ಸಂಖ್ಯೆ, ಬ್ಯಾಂಕ್ ಶಾಖೆಯ ತಪ್ಪಾದ IFSC ಕೋಡ್ ಇತ್ಯಾದಿ. ಬಿ) ಹಲವು ಅಭ್ಯರ್ಥಿಗಳು ಒಂದೇ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಒದಗಿಸಿರುವುದು. ಸಿ) ಅಭ್ಯರ್ಥಿಗಳ ಖಾತೆಯ ಸಂಖ್ಯೆ ನೀಡದಿರುವದು. ಈ ಎಲ್ಲ ಕಾರಣದಿಂದಾಗಿ RRB ಗಳು ಬ್ಯಾಂಕ್ ಖಾತೆಯನ್ನು ಸರಿಪಡಿಸಲು ಒಂದು ಬಾರಿ ಅವಕಾಶವನ್ನು ನೀಡಲು ನಿರ್ಧರಿಸಿ, ದಿನಾಂಕ 22/03/2019 ರಿಂದ 28/03/2019 ವರೆಗೆ ಅಭ್ಯರ್ಥಿಗಳಿಗೆ ತಮ್ಮ ಬ್ಯಾಂಕ ಖಾತೆ ವಿವರಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿವೆ ಹಾಗಾಗಿ ಅಭ್ಯರ್ಥಿಗಳು ಸದರಿ ದಿನಾಂಕದೊಳಗಾಗಿ ತಮ್ಮ ಖಾತೆ ವಿವರಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಲಾಗಿನ್ ಆಗಿ ಅಪ್ಡೇಟ್ ಮಾಡಿಕೊಳ್ಳಬೇಕು





Comments