Loading..!

ಕೆನರಾ ಬ್ಯಾಂಕ್ ನಿಂದ ಉಚಿತ ಕಂಪ್ಯೂಟರ್ ತರಬೇತಿ ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:10 ಜೂನ್ 2024
not found

ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯು 'ಯುವಕ-ಯುವತಿಯರಿಗೆ ಮೂರು ತಿಂಗಳ ಉಚಿತ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟೇಷನ್ ತರಬೇತಿ ನೀಡಲಿದ್ದು, ಜುಲೈ ಮೊದಲ ವಾರದಿಂದ ತರಬೇತಿ ಆರಂಭವಾಗಲಿದೆ. ಅಭ್ಯರ್ಥಿಗಳು ಕನಿಷ್ಠ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು. ಪಿಯುಸಿ, ಡಿಗ್ರಿ, ಡಿಪ್ಲೊಮಾ ಹೊಂದಿದವವರಿಗೆ ಆದ್ಯತೆ ನೀಡಲಾಗುವುದು. ವಯಸ್ಸು ಕನಿಷ್ಠ 18 ರಿಂದ 27 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ/ ವರ್ಗದವರಿಗೆ ಗರಿಷ್ಟ 30 ವಯಸ್ಸು ನಿಗದಿ ಮಾಡಲಾಗಿದೆ. ತರಬೇತಿಗೆ ಸೇರಲಿರುವ ಆಸಕ್ತರು ಮಲ್ಲೇಶ್ವರಂನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಪ್ರತಿದಿನ ಬೆಳಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲಿದ್ದು, ಅರ್ಜಿ ಯನ್ನು ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಪಡೆಯಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


- ಹೆಚ್ಚಿನ ಮಾಹಿತಿಗೆ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, ಮಲ್ಲೇಶ್ವರ ಇಲ್ಲಿಗೆ ಭೇಟಿ ನೀಡಬಹುದು.ದೂರವಾಣಿ ಸಂಖ್ಯೆ- 080-23440036/23463580/9448538107.

Comments