Loading..!

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗ್ರೂಪ್ ಬಿ ಮತ್ತು ಸಿ ದರ್ಜೆಯ ಬ್ಯಾಕಲಾಗ್ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಮಂಡಳಿಯ ವೆಬ್ ಸೈಟ್ ನಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದೆ
| Date:11 ಸೆಪ್ಟೆಂಬರ್ 2019
not found
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗ್ರೂಪ್ ಬಿ ಮತ್ತು ಸಿ ದರ್ಜೆಯ ಬ್ಯಾಕಲಾಗ್ 26 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಮಂಡಳಿಯ ವೆಬ್ ಸೈಟ್ ನಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದೆ.
ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರು, ಪಡೆದ ಅಂಕ, ಮತ್ತಿತರ ಮಾಹಿತಿ ಒದಗಿಸಲಾಗಿದೆ.
ಸಹಾಯಕ ಎಂಜಿನಿಯರ್(ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್), ಕಿರಿಯ ಸಹಾಯಕ,ಕಿರಿಯ ಎಂಜಿನಿಯರ್,ಮಾಪನ ಓದುಗ,ದ್ವಿತೀಯ ದರ್ಜೆ ಸ್ಟೋರ್ ಕೀಪರ್ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆಯ್ಕೆ ಪಟ್ಟಿ ನೀಡಲಾಗಿದೆ.
ಈ ಆಯ್ಕೆಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು ಆಸಕ್ತರು 30 ದಿನಗಳೊಳಗಾಗಿ (ಸೆ 9 ರಿಂದ ಆರಂಭವಾಗಿ ) ಅಗತ್ಯ ದಾಖಲೆಗಳೊಂದಿಗೆ,
ಅಧ್ಯಕ್ಷರು,
ನೇಮಕ ಪ್ರಾಧಿಕಾರ,
ಜಲಮಂಡಳಿ,1 ನೇ ಮಹಡಿ,
ಕಾವೇರಿ ಭವನ, ಕೆಂಪೇಗೌಡ ರಸ್ತೆ,
ಬೆಂಗಳೂರು - 560009 ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ 080 - 22945386 ಸಂಪರ್ಕಿಸಬಹುದು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments