Loading..!

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೇಮಕಾತಿಯ ದಾಖಲೆ ಪರೀಶೀಲನೆಯ ದಿನಾಂಕ ಪ್ರಕಟ
| Date:29 ಸೆಪ್ಟೆಂಬರ್ 2019
not found
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ "ಬಿ" ಮತ್ತು "ಸಿ" ದರ್ಜೆಯ ಹುದ್ದೆಗಳ ಮೂಲ ದಾಖಲಾತಿಗಳ ಪರಿಶೀಲನೆಯ ದಿನಾಂಕವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿದೆ.
ಮಂಡಳಿಯು ಒಟ್ಟು 232 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸೆಪ್ಟೆಂಬರ್ 25,2018ರೊಳಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆಯೇ ಈಗ ಮೆರಿಟ್‌ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

ಆಯ್ಕೆಯಾದ ಅಭ್ಯರ್ಥಿಗಳು ಅಕ್ಟೋಬರ್ 24,25,30,31 ಮತ್ತು ನವೆಂಬರ್ 2 ಮತ್ತು 4,2019ರಂದು ನಡೆಯುವ ದಾಖಲೆ ಪರೀಶೀಲನೆಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕಿರುತ್ತದೆ.

ಅಭ್ಯರ್ಥಿಗಳು ಅರ್ಜಿಯಲ್ಲಿ ಸಲ್ಲಿಸಿರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಹಾಗೂ ಆನ್‌ಲೈನ್ ಮೂಲಕ ಸಲ್ಲಿಸಿರುವ ಮಾಹಿತಿಗಳಿಗೆ ಪೂರಕವಾಗಿ ದಾಖಲೆಗಳ ಮೂಲಪ್ರತಿಗಳು ಹಾಗೂ ಎರಡು ಸ್ವಯಂ ದೃಢೀಕೃತ ನೆರಳಚ್ಚು ಪ್ರತಿಗಳನ್ನು ಪರಿಶೀಲನೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ.

ಪರಿಶೀಲನೆ ಸ್ಥಳ :
ಬೆಂಗಳೂರು ಜಲಮಂಡಳಿಯ ಸಭಾಂಗಣ,
4ನೇ ಮಹಡಿ, ಕಾವೇರಿ ಭವನ,
ಕೆ.ಜಿ.ರಸ್ತೆ, ಬೆಂಗಳೂರು-560009.

ಸಮಯ : ಬೆಳಗ್ಗೆ 10.00 ರಿಂದ ಸಂಜೆ 5.15ರ ವರೆಗೆ
ನಿಮ್ಮ ದಿನನಿತ್ಯದ ಅವಶ್ಯಕತೆಯಾದ memory card ಮತ್ತು pendrive ಇತ್ಯಾದಿಗಳನ್ನೂ amazon ನಿಂದ ಖರೀದಿಸಿ

Comments