Loading..!

(BMRCL) ನೇಮಕಾತಿ 2025: ಡೆಪ್ಯುಟಿ ಕಂಪನಿ ಸೆಕ್ರಟರಿ/ಅಸಿಸ್ಟೆಂಟ್ ಕಂಪನಿ ಸೆಕ್ರಟರಿ ಹುದ್ದೆಗೆ ಅರ್ಜಿ ಆಹ್ವಾನ
Published by: Bhagya R K | Date:5 ಸೆಪ್ಟೆಂಬರ್ 2025
Image not found

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) 2025 ರ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಡೆಪ್ಯುಟಿ ಕಂಪನಿ ಸೆಕ್ರಟರಿ/ಅಸಿಸ್ಟೆಂಟ್ ಕಂಪನಿ ಸೆಕ್ರಟರಿ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು ಹುದ್ದೆಗಳ ಸಂಖ್ಯೆ: 01. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-ಸೆಪ್ಟೆಂಬರ್-2025 ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಮುಖ್ಯ ವಿವರಗಳು :
ಸಂಸ್ಥೆ ಹೆಸರು: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL)
ಒಟ್ಟು ಹುದ್ದೆಗಳು: 01
ಹುದ್ದೆಯ ಹೆಸರು: ಡೆಪ್ಯುಟಿ ಕಂಪನಿ ಸೆಕ್ರಟರಿ / ಅಸಿಸ್ಟೆಂಟ್ ಕಂಪನಿ ಸೆಕ್ರಟರಿ
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ


ವೇತನ ಶ್ರೇಣಿ:
ಅಭ್ಯರ್ಥಿಗಳಿಗೆ ₹1,06,250 – ₹1,64,000 ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.


ವಯೋಮಿತಿ : 
ಡೆಪ್ಯುಟಿ ಕಂಪನಿ ಸೆಕ್ರಟರಿ : 45 ವರ್ಷ
ಅಸಿಸ್ಟೆಂಟ್ ಕಂಪನಿ ಸೆಕ್ರಟರಿ : 40 ವರ್ಷ


ಅರ್ಹತೆಗಳು:
ಅಭ್ಯರ್ಥಿಗಳು ACS, FCS, LLB, LLM, CMA, CA ಪದವಿ ಪಡೆದಿರಬೇಕು (ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ).


ಆಯ್ಕೆ ಪ್ರಕ್ರಿಯೆ:
- ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್ bmrc.co.in ನಲ್ಲಿ ಆನ್‌ಲೈನ್ ಅರ್ಜಿ ಭರ್ತಿ ಮಾಡಬೇಕು (03-09-2025ರಿಂದ 25-09-2025ರವರೆಗೆ).
- ಅರ್ಜಿ ಸಲ್ಲಿಸಿದ ನಂತರ, ಆನ್‌ಲೈನ್ ಫಾರ್ಮ್‌ನ ಪ್ರಿಂಟ್ ತೆಗೆದು, ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿಳಾಸ :
Dy. General Manager (HR), Bangalore Metro Rail Corporation Limited,
III Floor, BMTC Complex, K.H. Road,
Shanthinagar, Bengaluru – 560027
ವಿಳಾಸಕ್ಕೆ 30-09-2025ರೊಳಗೆ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 03-09-2025
- ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ: 25-09-2025
- ಅರ್ಜಿಯ ಮುದ್ರಿತ ಪ್ರತಿಯನ್ನು ಕಳುಹಿಸಲು ಕೊನೆಯ ದಿನಾಂಕ: 30-09-2025


ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಇದು ಬೆಂಗಳೂರು ಆಧಾರಿತ ಸರ್ಕಾರಿ ಉದ್ಯೋಗವನ್ನು ಬಯಸುವ ವೃತ್ತಿಪರ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ.

Comments