ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)ನಲ್ಲಿ ಖಾಲಿ ಇರುವ ವಿವಿಧ 8 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ. ನಿಗಮವು ಮೆಟ್ರೋ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಭದ್ರತೆ ಮತ್ತು ಇತರ ಸಂಬಂಧಿತ ಕೆಲಸಗಳನ್ನು ನಿರ್ವಹಿಸಲು ಒಟ್ಟು 8 ಸಹಾಯಕ ಮುಖ್ಯ ಭದ್ರತಾ ಅಧಿಕಾರಿ, ಉಪ ಮುಖ್ಯ ಜಾಗೃತ ಅಧಿಕಾರಿ, ತನಿಖಾಧಿಕಾರಿ ಮತ್ತು ಸಹಾಯಕ ತಾಂತ್ರಿಕ ಪರೀಕ್ಷಕರು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಬೆಂಗಳೂರು - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ
ಹುದ್ದೆಗಳ ವಿವರ :
ಸಹಾಯಕ ಮುಖ್ಯ ಭದ್ರತಾ ಅಧಿಕಾರಿ : 5
ಉಪ ಮುಖ್ಯ ಜಾಗೃತ ಅಧಿಕಾರಿ : 1
ತನಿಖಾಧಿಕಾರಿ : 1
ಸಹಾಯಕ ತಾಂತ್ರಿಕ ಪರೀಕ್ಷಕರು: 1
ವಿದ್ಯಾರ್ಹತೆ : ವಿದ್ಯಾರ್ಹತೆಯನ್ನು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ನೀಡಲಾಗಿದೆ.
- ಸಹಾಯಕ ಮುಖ್ಯ ಭದ್ರತಾ ಅಧಿಕಾರಿ : ಬಿಎಂಆರ್‌ಸಿಎಲ್ ಮಾನದಂಡಗಳ ಪ್ರಕಾರ
- ಉಪ ಮುಖ್ಯ ಜಾಗೃತ ಅಧಿಕಾರಿ ಮತ್ತು ತನಿಖಾಧಿಕಾರಿ : CA, CMA, BE ಅಥವಾ B.Tech, MBA, ಸ್ನಾತಕೋತ್ತರ ಪದವಿ
- ಸಹಾಯಕ ತಾಂತ್ರಿಕ ಪರೀಕ್ಷಕರು : ಡಿಪ್ಲೊಮಾ , ಬಿಇ ಅಥವಾ ಬಿ.ಟೆಕ್
- ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರಿಜ್ಞಾನ ಕಡ್ಡಾಯ.
- ಭಾರತೀಯ ಸೇನೆ/ಭಾರತೀಯ ನೌಕಾಪಡೆ/ಭಾರತೀಯ ವಾಯುಪಡೆ/ರಾಜ್ಯ ಪೊಲೀಸ್ ಇಲಾಖೆ/ಸಿಎಪಿಎಫ್/ಸಿಆರ್‌ಪಿಎಫ್/ಬಿಎಸ್‌ಎಫ್/ಸಿಐಎಸ್‌ಎಫ್/ರಾಜ್ಯ ಅಗ್ನಿಶಾಮಕ ಇಲಾಖೆ ಮತ್ತು ಇತರ ಸಂಬಂಧಿತ ಸಮಾನ ಸೇವೆಗಳಿಂದ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಸಿಬ್ಬಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ :
ಸಹಾಯಕ ಮುಖ್ಯ ಭದ್ರತಾ ಅಧಿಕಾರಿ : 60ವರ್ಷ
ಉಪ ಮುಖ್ಯ ಜಾಗೃತ ಅಧಿಕಾರಿ : 56ವರ್ಷ
ತನಿಖಾಧಿಕಾರಿ : 42ವರ್ಷ
ಸಹಾಯಕ ತಾಂತ್ರಿಕ ಪರೀಕ್ಷಕರು : 36ವರ್ಷ
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ: ಉಲ್ಲೇಖಿಸಲಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಳಾಸ :
ಜನರಲ್ ಮ್ಯಾನೇಜರ್ (HR) ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ ಶಾಂತಿನಗರ, ಬೆಂಗಳೂರು – 560027
ಪ್ರಮುಖ ದಿನಾಂಕಗಳು :
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಿಎಂಆರ್‌ಸಿಎಲ್ ಕೊನೆಯ ದಿನಾಂಕ ವಿವರಗಳು :
ಸಹಾಯಕ ಮುಖ್ಯ ಭದ್ರತಾ ಅಧಿಕಾರಿ : ಆಗಸ್ಟ್ 12, 2025
ಉಪ ಮುಖ್ಯ ಜಾಗೃತ ಅಧಿಕಾರಿ, ತನಿಖಾಧಿಕಾರಿ ಮತ್ತು ಸಹಾಯಕ ತಾಂತ್ರಿಕ ಪರೀಕ್ಷಕರು : ಆಗಸ್ಟ್ 14, 2025
- ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಿಎಂಆರ್‌ಸಿಎಲ್ ಕೊನೆಯ ದಿನಾಂಕ ವಿವರಗಳು
ಸಹಾಯಕ ಮುಖ್ಯ ಭದ್ರತಾ ಅಧಿಕಾರಿ : ಆಗಸ್ಟ್ 18, 2025
ಉಪ ಮುಖ್ಯ ಜಾಗೃತ ಅಧಿಕಾರಿ, ತನಿಖಾಧಿಕಾರಿ ಮತ್ತು ಸಹಾಯಕ ತಾಂತ್ರಿಕ ಪರೀಕ್ಷಕರು : ಆಗಸ್ಟ್ 20, 2025
Comments