Loading..!

03 ಮೇ 2025 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ ಉದ್ಯೋಗ ಮೇಳ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:28 ಎಪ್ರಿಲ್ 2025
not found

ಬೆಂಗಳೂರಿನ ಖಾಸಗಿ ಆಚಾರ್ಯ ಪಾಠ ಶಾಲಾ ಎಜುಕೇಷನ್ ಟ್ರಸ್ಟ್ (ಎಪಿಎಸ್) ಅರ್ಹ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ಮೇ 3ರಂದು ಎನ್.ಆರ್.ಕಾಲೋನಿಯಲ್ಲಿರುವ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ಮತ್ತು ಎಜುಕೇಷನ್ ಎಕ್ಸ್‌ಪೋ ಆಯೋಜಿಸಿದೆ. 100ಕ್ಕೂ ಹೆಚ್ಚಿನ ಕಂಪನಿಗಳು ಇದರಲ್ಲಿ ಭಾಗವಹಿಸಲಿದ್ದು, 28 ಸಾವಿರ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಇನ್ಫೋಸಿಸ್, ಕಿರ್ಲೋಸ್ಕರ್ ಸೇರಿದಂತೆ 100ಕ್ಕೂ ಅಧಿಕ ಪ್ರತಿಷ್ಠಿತ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಐಟಿ, ಉತ್ಪಾದನಾ ವಲಯ, ಬ್ಯಾಂಕಿಂಗ್ ಕ್ಷೇತ್ರ ಒಳಗೊಂಡಂತೆ ಹಲವು ಕ್ಷೇತ್ರಗಳ ಕಂಪನಿಗಳು ಪಾಲ್ಗೊಳ್ಳಲಿವೆ. 


                          - ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ ಸೇರಿ ಆಯಾ ವಿದ್ಯಾರ್ಹತೆಗೆ ತಕ್ಕಂತೆ ಸುಮಾರು 26ರಿಂದ 28 ಸಾವಿರ ಉದ್ಯೋಗ ಕಲ್ಪಿಸುವ ಸಂಬಂಧ ಈಗಾಗಲೇ ಮಾತುಕತೆ ನಡೆದಿದೆ. ಸ್ಥಳದಲ್ಲಿಯೇ ಸಂದರ್ಶನಗಳನ್ನು ನಡೆಸಿ ಆಫ‌ರ್ ಲೆಟರ್‌ಗಳನ್ನು ಸಹ ವಿತರಣೆ ಮಾಡಲು ನಿರ್ಧರಿಸಲಾಗಿದೆ.


- ಉಚಿತ ಪ್ರವೇಶ : 
ಮೇಳಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ನೋಂದಣಿ ಕಾರ್ಯಕ್ರಮ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ 86605 99140 / 8123696310 ಸಂಪರ್ಕಿಸಬಹುದು.

Comments