Loading..!

ಬಿಎಇಎಲ್ (BEL) ನೇಮಕಾತಿ 2025: ಮ್ಯಾನೇಜ್‌ಮೆಂಟ್ ಇಂಡಸ್ಟ್ರಿಯಲ್ ಟ್ರೈನೀ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ
Published by: Bhagya R K | Date:1 ಸೆಪ್ಟೆಂಬರ್ 2025
Image not found

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯಿಂದ 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಬಂದಿದೆ. ಮ್ಯಾನೇಜ್‌ಮೆಂಟ್ ಇಂಡಸ್ಟ್ರಿಯಲ್ ಟ್ರೈನೀ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ ಅಧಿಕೃತ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿಲ್ಲ. ಬೆಂಗಳೂರು – ಕರ್ನಾಟಕದಲ್ಲಿ ಸರ್ಕಾರಿ ವಲಯದಲ್ಲಿ ಉದ್ಯೋಗ ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.


ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 03 ರಂದು ಬೆಳಿಗ್ಗೆ 08:30ಕ್ಕೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.


ಮುಖ್ಯ ವಿವರಗಳು :
ಸಂಸ್ಥೆಯ ಹೆಸರು : ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆ ಹೆಸರು : ಮ್ಯಾನೇಜ್‌ಮೆಂಟ್ ಇಂಡಸ್ಟ್ರಿಯಲ್ ಟ್ರೈನೀ
ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ
ಸ್ಟೈಪೆಂಡ್: ₹25,000 ರಿಂದ ₹30,000 ಪ್ರತಿಮಾಸ


ಅರ್ಹತೆಗಳು :
ಅಭ್ಯರ್ಥಿಗಳು CA ಅಥವಾ CMA ಅರ್ಹತೆ ಹೊಂದಿರಬೇಕು (ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್‌ನಿಂದ).


ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ ವಯಸ್ಸು: 25 ವರ್ಷ (01-ಸೆಪ್ಟೆಂಬರ್-2025ರಂತೆ)ಗಳ ವಯೋಮಿತಿಯನ್ನು ಹೊಂದಿರಬೇಕು.


ವಯೋಮಿತಿ ಸಡಿಲಿಕೆ :
- OBC ಅಭ್ಯರ್ಥಿಗಳಿಗೆ: 03 ವರ್ಷ
- SC/ST ಅಭ್ಯರ್ಥಿಗಳಿಗೆ: 05 ವರ್ಷ
- PWD ಅಭ್ಯರ್ಥಿಗಳಿಗೆ: 10 ವರ್ಷ


ಆಯ್ಕೆ ವಿಧಾನ :
- ಶೈಕ್ಷಣಿಕ ಸಾಧನೆ ಆಧಾರದ ಮೇಲೆ ಶಾರ್ಟ್ ಲಿಸ್ಟಿಂಗ್
- ವೈಯಕ್ತಿಕ ಸಂದರ್ಶನ
ಸಂದರ್ಶನ ಸ್ಥಳ ಮತ್ತು ಸಮಯ:
ದಿನಾಂಕ ಮತ್ತು ಸಮಯ: 03-ಸೆಪ್ಟೆಂಬರ್-2025, ಬೆಳಿಗ್ಗೆ 08:30
ಸ್ಥಳ: 
ಸೆಂಟರ್ ಫಾರ್ ಲರ್ನಿಂಗ್ ಅಂಡ್ ಡೆವಲಪ್‌ಮೆಂಟ್,
ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಲಹಳ್ಳಿ,
ಬೆಂಗಳೂರು – 560090


ಅಗತ್ಯ ದಾಖಲೆಗಳು :
- ಶೈಕ್ಷಣಿಕ ಪ್ರಮಾಣಪತ್ರಗಳು
- ಗುರುತಿನ ಚೀಟಿ
- ವಯೋಮಿತಿಯ ದಾಖಲೆಗಳು
- ಇತರೆ ಅಗತ್ಯ ದಾಖಲೆಗಳು (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ)


ಮುಖ್ಯ ದಿನಾಂಕಗಳು :
- ಅಧಿಸೂಚನೆ ಬಿಡುಗಡೆಯ ದಿನಾಂಕ: 28-ಆಗಸ್ಟ್-2025
- ವಾಕ್-ಇನ್ ಸಂದರ್ಶನ ದಿನಾಂಕ: 03-ಸೆಪ್ಟೆಂಬರ್-2025


ಇದು ಕರ್ನಾಟಕದಲ್ಲಿ ಸರ್ಕಾರಿ ವಲಯದಲ್ಲಿ ವೃತ್ತಿಜೀವನ ಆರಂಭಿಸಲು ಚಿನ್ನದ ಅವಕಾಶ. ಆಸಕ್ತ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಸಂದರ್ಶನದಲ್ಲಿ ಭಾಗವಹಿಸಲು ಸಿದ್ಧರಾಗಿರಿ.

Comments