Others 27 ಜನವರಿ 2025 1 year ago
Published by Yallamma G

ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ

ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ

ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ನಲ್ಲಿ ಖಾಲಿ ಇರುವ 49 ಮ್ಯಾನೇಜ್ಮೆಂಟ್ ಟ್ರೇನಿ  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. 

ವಿದ್ಯಾರ್ಹತೆ:
ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ, BE/B.Tech, CA/ICWAI, LLB, MCA, MBA ಅಥವಾ MA ಪೂರ್ಣಗೊಳಿಸಿರಬೇಕು.

ವಯೋಮಿತಿ:
ಗರಿಷ್ಠ ವಯಸ್ಸು 50 ವರ್ಷ.
ವಯೋಮಿತಿ ಸಡಿಲಿಕೆ:
OBC: 03 ವರ್ಷಗಳು
SC/ST: 05 ವರ್ಷಗಳು
PwBD: 10 ವರ್ಷಗಳು

ಅರ್ಜಿಶುಲ್ಕ:
SC/ST/PwBD/ಮಾಜಿ ಸೈನಿಕ/ಆಂತರಿಕ ಖಾಯಂ ಉದ್ಯೋಗಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ 
UR/OBC (NCL)/EWS: ₹500
ಪಾವತಿ ವಿಧಾನ: ಆನ್ಲೈನ್ ಮೂಲಕ

ವೇತನ ಶ್ರೇಣಿ: ₹40,000-2,20,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿಸಲ್ಲಿಸುವ ಕ್ರಮಗಳು:
ಅಧಿಕೃತ ವೆಬ್‌ಸೈಟ್: https://bdl-india.in/ ಗೆ ಭೇಟಿ ನೀಡಿ.
ವೃತ್ತಿ ಅಧಿಸೂಚನೆ ಪರಿಶೀಲಿಸಿ.
ಅರ್ಹತೆ ದೃಢಪಡಿಸಿ.
ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
ಕೊನೆಯ ದಿನಾಂಕದ ಒಳಗೆ ಸಲ್ಲಿಸಿ.
ಅರ್ಜಿ ಸ್ವೀಕಾರ ಸಂಖ್ಯೆಯನ್ನು ಸುರಕ್ಷಿತವಾಗಿಡಿ.

ಪ್ರಮುಖ ದಿನಾಂಕಗಳು :
ಪ್ರಾರಂಭ ದಿನಾಂಕ: 30-01-2025
ಕೊನೆಯ ದಿನಾಂಕ: 21-02-2025

ಈ ಅಪೂರ್ವ ಅವಕಾಶವನ್ನು ಬಳಸಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನೊಂದಿಗೆ ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಿರಿ. 

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments