Loading..!

ಆಳ್ವಾಸ್ ಪ್ರಗತಿ - ಉದ್ಯೋಗ ಮೇಳ: ದಿನಾಂಕ ಜೂನ್ 21 ಮತ್ತು 22 ನೇ ತಾರೀಕಿನಂದು ಮೂಡುಬಿದಿರೆಯಲ್ಲಿ ಬೃಹತ ಉದ್ಯೋಗ ಮೇಳ ಆಯೋಜನೆ ಈ ಕುರಿತ ಮಾಹಿತಿ
| Date:21 ಜೂನ್ 2019
not found
# ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪ್ರತೀ ವರ್ಷ ಆಯೋಜಿಸಲ್ಪಡುವ ಹನ್ನೊಂದನೆ ಆವೃತ್ತಿಯ ಈ ಉದ್ಯೋಗ ಮೇಳವನ್ನು ಈ ಸಲ ಜೂ.21 ಮತ್ತು 22ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ.
# ಉದ್ಯೋಗ ಮೇಳದಲ್ಲಿ ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್‌ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಹಾಸ್ಪಿಟಾಲಿಟಿ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಆರ್ಟ್ಸ್, ಕಾಮರ್ಸ್ ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್ ಸಯನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸೆಸೆಲ್ಸಿ ಮತ್ತು ಇತರ ವಿದ್ಯಾರ್ಹತೆಗಳುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ.
# ನರ್ಸ್, ವೈದ್ಯರು, ಫಿಸಿಯೋಥೆರಪಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಥೆರಪಿಸ್ಟ್‌ಗಳಿಗೆ ಆರೋಗ್ಯ ಕ್ಷೇತ್ರದ ಪ್ರತಿಷ್ಠಿತ ಆಸ್ಪತ್ರೆಗಳಾದ ಅಪೋಲೋ, ಕ್ಲೌಡ್‌ನೈನ್, ಎ.ಜೆ. ಜೊತೆಗೆ ನಾಡಿನ ಇನ್ನಿತರ 15 ಆಸ್ಪತ್ರೆಗಳಲ್ಲಿ ಉದ್ಯೋಗಾವಕಾಶಗಳಿವೆ.
# ಮಲ್ಟಿನ್ಯಾಷನಲ್ ಆಡಿಟ್ ಕಂಪೆನಿಗಳಾದ ಇವೈ ಹಾಗೂ ಥಾಮ್ಸನ್ ರಾಯಿಟರ್ಸ್‌ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.
# ಟೊಯೋಟೊ ಇಂಡಸ್ಟ್ರಿಸ್ ಇಂಜಿನ್ ಇಂಡಿಯಾ ಪ್ರೈ.ಲಿ., ಟಿಎಂಇಐಸಿ, ಸ್ಯಾನ್ರಿಯಾ ಇಂಜಿನಿಯರಿಂಗ್, ಸ್ವಿಚ್‌ಗೇರ್ ಎಕ್ಸಪರ್ಟೈಸ್ ಕಂಪೆನಿಗಳು ಮೆಕ್ಯಾನಿಕಲ್ ಕ್ಷೇತ್ರದ ಪ್ರಮುಖ 70 ಉದ್ಯೋಗಾವಕಾಶವನ್ನು ನೀಡಲಿದೆ.
# ಥಾಮ್ಸನ್ ರಾಯಿಟರ್ಸ್‌, ಎಂಫಸಿಸ್, ಮೆವಾಂಟಿಕ್, ಕೋಡ್‌ಕ್ರಾಫ್ಟ್ಟ್ ಹಾಗೂ ಇನ್ನಿತರ ಐಟಿ ಕಂಪೆನಿಗಳು ಕೋರ್ ಐಟಿ ಕ್ಷೇತ್ರದ 200ಕ್ಕೂ ಅಧಿಕ ಅವಕಾಶಗಳ ಜೊತೆಗೆ ಐಟಿಇಎಸ್ ಕ್ಷೇತ್ರದಲ್ಲ್ಲಿ 2000ಕ್ಕೂ ಮಿಕ್ಕಿದ ಉದ್ಯೋಗವಕಾಶಗಳಿವೆ.
# ಪ್ರತಿಷ್ಠಿತ ಕಂಪೆನಿಗಳಾದ ಲೇಖಾ ವೈಯರ್‌ಲೆಸ್, ಆರ್‌ಟಿಡಬ್ಲು ಹೆಲ್ತ್‌ಕೇರ್, ಕಿಡ್‌ವೆಂಟೋ ಕಂಪೆನಿಗಳು ಕೋರ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್‌ಗಳಿಗೆ ಅವಕಾಶ ನೀಡಲಿದೆ.
# ಜೆಎಸ್‌ಡಬ್ಲು, ಎಸ್ ಮ್ಯಾನುಫ್ಯಾಕ್ಚರಿಂಗ್, ಅಜಕ್ಸ್ ಇಂಜಿನಿಯರಿಂಗ್ ಪ್ರೈ. ಲಿಚ, ನೆಕ್ಸ್ಟೀರ್, ಜೆಕೆ ಟಯರ್ಸ್‌, ಕೆಯಿನ್ ಫೈ, ಟಫೆ ಹಾಗೂ ಇನ್ನಿತರ ಪ್ರಮುಖ ಕಂಪೆನಿಗಳು ಡಿಪ್ಲೊಮಾ ವಿದ್ಯಾರ್ಥಿಗಳಿಗೆ 500 ಕ್ಕೂ ಅಧಿಕ ಉದ್ಯೋಗಾವಕಾಶವನ್ನು ನೀಡಲಿವೆ.
# ಐಟಿಐನ ವಿವಿಧ ಅಂಗಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ವಲಯದ ಉದ್ಯೋಗಾಕಾಂಕ್ಷಿಗಳಿಗೆ ವಿಫುಲ ಅವಕಾಶಗಳಿವೆ.
# ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದ ಪದವೀಧರರಿಗೆ ವಿವಿಧ ವಲಯಗಳಲ್ಲಿ 5000ಕ್ಕೂ ಅಧಿಕ ಉದ್ಯೋಗಾವಕಾಶಗಳಿವೆ.
# ಪ್ರತಿಷ್ಠಿತ ಮಲ್ಟಿನ್ಯಾಷನಲ್ ಕಂಪೆನಿ ಹಾಗೂ ನಾಡಿನ ಪ್ರಮುಖ ಬ್ಯಾಂಕ್‌ಗಳಲ್ಲಿ ಎಂ.ಬಿ.ಎ. ಮತ್ತು ಎಂ.ಕಾಂ ಪದವೀಧರರಿಗೆ ಕ್ರಮವಾಗಿ 300 ಹಾಗೂ 100 ಉದ್ಯೋಗಾವಕಾಶಗಳಿವೆ.
 # ಅಮೆಝಾನ್ ಕಂಪೆನಿ, ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಟಿಆರ್‌ಎಂಎಸ್ ಹಾಗೂ ಪ್ರೊಫೈಲ್ ಕಂಟೆಂಟ್ ರೈಟಿಂಗ್ ಕ್ಷೇತ್ರದಲ್ಲಿ ಅರ್ಹ 150 ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಲಿದೆ.
# ಐಬಿಎಂ, ಟೆಕ್ ಮಹೀಂದ್ರಾ, ಎಚ್‌ಜಿಎಸ್, ಫಿಡ್‌ಲಿಸ್ ಹಾಗೂ ಇನ್ನಿತರ ಕಂಪೆನಿಗಳು ಟೆಕ್ ಸಪೋರ್ಟನಂತಹ ಉದ್ಯೋಗಾವಕಾಶವಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ.
# ಮಂಗಳೂರು, ಉಡುಪಿ, ಬೆಂಗಳೂರು ಹಾಗೂ ಮೈಸೂರು ಭಾಗದ ಸ್ಟಾರ್ಟಅಪ್ ಕಂಪೆನಿಗಳು ಯುವ ಸಮುದಾಯಕ್ಕೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಅವಕಾಶವನ್ನು ನೀಡಲಿವೆ.
# ಆಳ್ವಾಸ್ ಪ್ರಗತಿ- 2019ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.alvaspragati.com ವೆಬ್‌ಸೈಟ್‌ನ್ನು ಲಾಗಿನ್ ಆಗಬಹುದು. ಐಟಿಐ, ಪಿಯುಸಿ, ಎಸೆಸೆಲ್ಸಿ ಹಾಗೂ ಇನ್ನೂ ಕಡಿಮೆ ವಿದ್ಯಾಭ್ಯಾಸದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಆನ್‌ಲೈನ್ ನೋಂದಣಿ ಕಡ್ಡಾಯವಾಗಿರುತ್ತದೆ.
ನೋಂದಣಿ ಪ್ರಕ್ರಿಯೆಯು ಮುಕ್ತವಾಗಿದ್ದು, ಜೂ.21 ಹಾಗೂ 22ರಂದು ನೋಂದಣಿ ಮಾಡಿಕೊಳ್ಳಬಹುದು.
# ಹೊರಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9611686148, 9663190590, 8494934852, 9008907716 ಅನ್ನು ಸಂಪರ್ಕಿಸಬಹುದು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments