ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (All India Institute of Speech and Hearing - AIISH) ತನ್ನ ಸಂಸ್ಥೆಯ ಎಸ್ಎಸ್ಎಸ್ಎಫ್ ವಿಭಾಗದಲ್ಲಿ ಖಾಲಿ ಇರುವ ಉದ್ಯೋಗ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಅಧಿಸೂಚನೆಯು ಅಡಿಯೋಲಾಜಿಸ್ಟ್ – 3 ಹುದ್ದೆಗಳು ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪಾಥಾಲಜಿಸ್ಟ್ – 2 ಹುದ್ದೆಗಳಿಗೆ ಸಂಬಂಧಿಸಿದ್ದು, ತಾತ್ಕಾಲಿಕ ಆಧಾರದ ಮೇಲೆ ಮೇ 26ರಂದು ನಡೆಯುವ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.
ಅರ್ಹತೆ :
ಬಿಎಸ್ಸಿ ಪದವೀಧರರು, ಸಂಬಂಧಿತ ವಿಷಯದಲ್ಲಿ ಒಂದು ವರ್ಷದ ಅನುಭವ ಅಗತ್ಯ.
ಯುಜಿಸಿ ನೆಟ್ ಪಾಸಾದ ಅಭ್ಯರ್ಥಿಗಳಿಗೆ ಆದ್ಯತೆ.
ಅಭ್ಯರ್ಥಿಗಳ ಅಧಿಕೃತ ಗರಿಷ್ಟ ವಯಸ್ಸು 45 ವರ್ಷವಾಗಿರಬೇಕು.
ವೇತನ :
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 40,000/- ಭತ್ಯೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ :
* ಆಸಕ್ತ ಅಭ್ಯರ್ಥಿಗಳು [https://bit.ly/457jdYC](https://bit.ly/457jdYC) ಲಿಂಕ್ನಲ್ಲಿ ಅರ್ಜಿ ನಮೂನೆ ಪಡೆಯಬಹುದಾಗಿದೆ.
* ಅರ್ಜಿ ಭರ್ತಿ ಮಾಡಿದ ನಂತರ, ಮೇ 15ರೊಳಗೆ "The Office of the Chief Administrative Officer, All India Institute of Speech and Hearing, Manasagangothri, Mysuru – 570006" ವಿಳಾಸಕ್ಕೆ ಸಲ್ಲಿಸಬೇಕು.
ಅರ್ಜಿ ಶುಲ್ಕ :
* ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 118
* ಎಸ್ಸಿಸಿ/ಎಸ್ಟಿ/ವಿಕಲಚೇತನ ಅಭ್ಯರ್ಥಿಗಳಿಗೆ ರೂ. 48
* ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಲಿಂಕ್ : [https://bit.ly/3RXACLS](https://bit.ly/3RXACLS)
📌 ಸೂಚನೆ : ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ನಿಗದಿತ ದಿನಾಂಕಕ್ಕೆ ಮುನ್ನ ಅರ್ಜಿ ಸಲ್ಲಿಸಿ.
Comments