ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ 2025 ರ ಅಡಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು, ಈ ನೇಮಕಾತಿ ಪ್ರಕ್ರಿಯೆ ಆಗಸ್ಟ್ 8 ರಿಂದ 25ರವರೆಗೆ ರಾಯಚೂರು ಜಿಲ್ಲೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶ್ರೀ ಸಿದ್ದಾರಾಮೇಶ್ವರ ಅವರು ತಿಳಿಸಿದ್ದಾರೆ.
ಈ ನೇಮಕಾತಿಯು ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ಆಯೋಜಿಸಲಾಗುತ್ತಿದ್ದು, ಇದಕ್ಕೆ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಪಾತ್ರಗಳ ಪರೀಕ್ಷೆಗೆ 14 ದಿನಗಳ ಮೊದಲು ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತವೆ. ಅರ್ಹ ಅಭ್ಯರ್ಥಿಗಳು ತಮ್ಮ Join Indian Army Admit Card 2025 ಅನ್ನು ಈ ಕೆಳಗಿನ ಹೆಜ್ಜೆಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಮುಖ್ಯಾಂಶಗಳು :
- ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್ [https://joinindianarmy.nic.in](https://joinindianarmy.nic.in) ನಲ್ಲಿ ಪ್ರಕಟಿಸಲಾಗಿದೆ.
- ಅರ್ಹ ಅಭ್ಯರ್ಥಿಗಳ ಪ್ರವೇಶ ಪತ್ರಗಳು ಕೂಡ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆಗೆ ಹಾಜರಾಗಬೇಕು.
- ನೇಮಕಾತಿ ಸ್ಥಳ: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಮೈದಾನ, ರಾಯಚೂರು
- ನೇಮಕಾತಿ ದಿನಾಂಕಗಳು : 08-08-2025 ರಿಂದ 25-08-2025 ರವರೆಗೆ
🔰 1. ಅಗ್ನಿವೀರ್ ರ‍್ಯಾಲಿ ಪ್ರವೇಶ ಪತ್ರ ಡೌನ್‌ಲೋಡ್ ವಿಧಾನ:
ಹಂತ 1: ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಗೆ ಭೇಟಿ ನೀಡಿ.
ಹಂತ 2: ಲಾಗಿನ್ ಪುಟದಲ್ಲಿ ನಿಮ್ಮ ಇಮೇಲ್ ಐಡಿ (Username) ಮತ್ತು ಪಾಸ್ವರ್ಡ್ ನಮೂದಿಸಿ.
ಹಂತ 3: ಲಾಗಿನ್ ಆದ ನಂತರ, ಎಡ ಭಾಗದಲ್ಲಿ "Admit Card" ಟ್ಯಾಬ್ ಕಾಣಿಸುತ್ತದೆ – ಅದನ್ನು ಕ್ಲಿಕ್ ಮಾಡಿ.
ಹಂತ 4: ಪ್ರವೇಶ ಪತ್ರ PDF ರೂಪದಲ್ಲಿ ಲಭ್ಯವಾಗುತ್ತಿದ್ದು, ಅದನ್ನು ಸೇವ್ ಅಥವಾ ಪ್ರಿಂಟ್ ಮಾಡಬಹುದು.
ಅಭ್ಯರ್ಥಿಗಳಿಗೆ ಸಲಹೆ :
ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದ ಪ್ರತಿಯನ್ನು ಮುದ್ರಿಸಿಕೊಂಡು, ಅದರೊಂದಿಗೆ ಗುರುತಿನ ದಾಖಲೆಗಳು ಹಾಗೂ ಅಗತ್ಯ ದಾಖಲೆಗಳನ್ನು ಜೊತೆಗೆ ತರಬೇಕು. ನೇಮಕಾತಿ ಸ್ಥಳಕ್ಕೆ ನಿರ್ದಿಷ್ಟ ದಿನಾಂಕಕ್ಕೆ reporting ಆಗುವುದು ಅಗತ್ಯವಾಗಿದೆ. ಆಸಕ್ತರು ನೇಮಕಾತಿ ಸಂಬಂಧಿತ ನವೀನ ಮಾಹಿತಿಗಾಗಿ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿನೀಡಬಹುದು.
-ಭಾರತ ಸೇನೆಯ ಸೇವೆಗೆ ಹೆಮ್ಮೆಯಿಂದ ಸೇರಲು ಇದು ಉತ್ತಮ ಅವಕಾಶ. ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಈ ನೇಮಕಾತಿಯನ್ನು ಸದುಪಯೋಗಪಡಿಸಿಕೊಳ್ಳಿ!
Comments