UPSC 2026 ಅಧಿಕೃತ ಅಧಿಸೂಚನೆ ಪ್ರಕಟ: IAS, IPS, IFS & Forest Service ಪರೀಕ್ಷೆಗೆ ಇಂದೇ ಅರ್ಜಿ ಸಲ್ಲಿಸಿ
Published by: Heena Sheregar | Date:Feb. 6, 2026

ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ಅರಣ್ಯ ಸೇವೆ (IFS) ಸೇರಿದಂತೆ ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ಯುವಜನತೆಗೆ ಕೇಂದ್ರ ಲೋಕಸೇವಾ ಆಯೋಗ (UPSC) ಭರ್ಜರಿ ಸಿಹಿ ಸುದ್ದಿ ನೀಡಿದೆ. UPSC 2026ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ (Civil Services Examination – CSE) ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆ (Indian Forest Service – IFS) ಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ್ದು, ಇಂದಿನಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶದ ಪ್ರತಿಷ್ಠಿತ ಸೇವೆಗಳಾದ IAS, IPS, IFS ಜೊತೆಗೆ ವಿವಿಧ ಗ್ರೂಪ್ ‘A’ ಹಾಗೂ ಗ್ರೂಪ್ ‘B’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆ ಪಡೆದು ದೇಶಸೇವೆ ಮಾಡುವ ಕನಸು ಹೊಂದಿರುವ ಪದವೀಧರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
UPSC ಪರೀಕ್ಷೆ ದೇಶದ ಅತ್ಯಂತ ಕಠಿಣ ಮತ್ತು ಗೌರವಾನ್ವಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಭಾಗವಹಿಸುತ್ತಾರೆ. 2026ನೇ ಸಾಲಿನ ಈ ಅಧಿಸೂಚನೆಯೊಂದಿಗೆ ಆಸಕ್ತ ಅಭ್ಯರ್ಥಿಗಳು ಈಗಿನಿಂದಲೇ ತಮ್ಮ ಸಿದ್ಧತೆಯನ್ನು ಗಂಭೀರವಾಗಿ ಆರಂಭಿಸಿ, ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಅರ್ಜಿ ಸಲ್ಲಿಸಬೇಕಾಗಿದೆ.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶದ ಪ್ರತಿಷ್ಠಿತ ಸೇವೆಗಳಾದ IAS, IPS, IFS ಜೊತೆಗೆ ವಿವಿಧ ಗ್ರೂಪ್ ‘A’ ಹಾಗೂ ಗ್ರೂಪ್ ‘B’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆ ಪಡೆದು ದೇಶಸೇವೆ ಮಾಡುವ ಕನಸು ಹೊಂದಿರುವ ಪದವೀಧರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
UPSC ಪರೀಕ್ಷೆ ದೇಶದ ಅತ್ಯಂತ ಕಠಿಣ ಮತ್ತು ಗೌರವಾನ್ವಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಭಾಗವಹಿಸುತ್ತಾರೆ. 2026ನೇ ಸಾಲಿನ ಈ ಅಧಿಸೂಚನೆಯೊಂದಿಗೆ ಆಸಕ್ತ ಅಭ್ಯರ್ಥಿಗಳು ಈಗಿನಿಂದಲೇ ತಮ್ಮ ಸಿದ್ಧತೆಯನ್ನು ಗಂಭೀರವಾಗಿ ಆರಂಭಿಸಿ, ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಅರ್ಜಿ ಸಲ್ಲಿಸಬೇಕಾಗಿದೆ.
👉 ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು, ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವುದು ಮತ್ತು ಪರೀಕ್ಷಾ ಮಾದರಿಯನ್ನು ಅರಿತುಕೊಳ್ಳುವುದು ಅತ್ಯಂತ ಮುಖ್ಯ.
📌 ನೇಮಕಾತಿಯ ಪ್ರಮುಖ ವಿವರಗಳು:
ಸಂಸ್ಥೆಯ ಹೆಸರು: ಕೇಂದ್ರ ಲೋಕಸೇವಾ ಆಯೋಗ (Union Public Service Commission - UPSC)
ಹುದ್ದೆಗಳ ಸಂಖ್ಯೆ: ಒಟ್ಟು 933 ಹುದ್ದೆಗಳು (ನಾಗರಿಕ ಸೇವೆಗಳು - CSE) ಮತ್ತು ಸುಮಾರು 80 ಹುದ್ದೆಗಳು (ಅರಣ್ಯ ಸೇವೆಗಳು - IFS).
ಸೇವೆಗಳು: IAS, IPS, IFS, IRS, IAAS ಮತ್ತು ಇತರ ಕೇಂದ್ರ ಸೇವೆಗಳು.
ಉದ್ಯೋಗ ಸ್ಥಳ: ಆಯ್ಕೆಯಾದ ಅಭ್ಯರ್ಥಿಗಳು ಭಾರತದಾದ್ಯಂತ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
🎓ಶೈಕ್ಷಣಿಕ ಅರ್ಹತೆ (Educational Qualification) :
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳೂ ಪ್ರಿಲಿಮ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
🎂 ವಯೋಮಿತಿ (Age Limit) (ಆಗಸ್ಟ್ 1, 2026ಕ್ಕೆ ಅನ್ವಯ) :
ಸಾಮಾನ್ಯ ವರ್ಗ: 21 ರಿಂದ 32 ವರ್ಷ.
OBC ಅಭ್ಯರ್ಥಿಗಳು: 3 ವರ್ಷಗಳ ಸಡಿಲಿಕೆ (ಗರಿಷ್ಠ 35 ವರ್ಷ).
SC/ST ಅಭ್ಯರ್ಥಿಗಳು: 5 ವರ್ಷಗಳ ಸಡಿಲಿಕೆ (ಗರಿಷ್ಠ 37 ವರ್ಷ).
ಅಂಗವಿಕಲ ಅಭ್ಯರ್ಥಿಗಳು (PwBD): ಗರಿಷ್ಠ 42 ವರ್ಷಗಳವರೆಗೆ ಅವಕಾಶ.
🔁 ಪ್ರಯತ್ನಗಳ ಸಂಖ್ಯೆ (Number of Attempts):
ಸಾಮಾನ್ಯ ಮತ್ತು EWS ವರ್ಗ: 6 ಬಾರಿ
OBC ವರ್ಗ: 9 ಬಾರಿ
SC/ST ವರ್ಗ: ಯಾವುದೇ ಮಿತಿ ಇಲ್ಲ (ವಯೋಮಿತಿ ಇರುವವರೆಗೆ).
PwBD (General/OBC): 9 ಬಾರಿ.
💰 ವೇತನ ಶ್ರೇಣಿ (Salary Details) :
ಆಯ್ಕೆಯಾದ ಅಧಿಕಾರಿಗಳಿಗೆ 7ನೇ ವೇತನ ಆಯೋಗದ ಅನ್ವಯ ವೇತನ ನೀಡಲಾಗುತ್ತದೆ.
💸ಅರ್ಜಿ ಶುಲ್ಕ :
ಸಾಮಾನ್ಯ/OBC/EWS ಪುರುಷ ಅಭ್ಯರ್ಥಿಗಳು: ₹100/-
ಮಹಿಳೆಯರು, SC, ST ಮತ್ತು ಅಂಗವಿಕಲ ಅಭ್ಯರ್ಥಿಗಳು: ಯಾವುದೇ ಶುಲ್ಕವಿಲ್ಲ
🎯ಆಯ್ಕೆ ಪ್ರಕ್ರಿಯೆ (Selection Process):
1. ಪೂರ್ವಭಾವಿ ಪರೀಕ್ಷೆ (Preliminary Examination - Prelims): ಇದು ಕೇವಲ ಅರ್ಹತಾ ಪರೀಕ್ಷೆಯಾಗಿದ್ದು (Screening Test), ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲು ನಡೆಸಲಾಗುತ್ತದೆ.
ಪತ್ರಿಕೆ 1 (General Studies - GS): 200 ಅಂಕಗಳು (ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡಿರುತ್ತದೆ). ಇದರಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಕಟ್-ಆಫ್ ನಿರ್ಧರಿಸಲಾಗುತ್ತದೆ.
ಪತ್ರಿಕೆ 2 (CSAT): 200 ಅಂಕಗಳು. ಇದು ಕೇವಲ ಅರ್ಹತಾ ಪತ್ರಿಕೆಯಾಗಿದ್ದು, ಅಭ್ಯರ್ಥಿಗಳು ಕನಿಷ್ಠ 33% (66 ಅಂಕ) ಪಡೆಯುವುದು ಕಡ್ಡಾಯ.
ಗಮನಿಸಿ: ಎರಡೂ ಪತ್ರಿಕೆಗಳು ಬಹು ಆಯ್ಕೆಯ ಮಾದರಿಯಲ್ಲಿದ್ದು (MCQs), ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕ (Negative Marking) ಇರುತ್ತದೆ.
2. ಮುಖ್ಯ ಪರೀಕ್ಷೆ (Main Examination - Mains): ಪ್ರಿಲಿಮ್ಸ್‌ನಲ್ಲಿ ಉತ್ತೀರ್ಣರಾದವರು ಈ ಹಂತಕ್ಕೆ ಅರ್ಹರಾಗುತ್ತಾರೆ. ಇದು ವಿವರಣಾತ್ಮಕ (Descriptive) ಪರೀಕ್ಷೆಯಾಗಿದೆ.
- ಅರ್ಹತಾ ಪತ್ರಿಕೆಗಳು: ಪ್ರಾದೇಶಿಕ ಭಾಷೆ (ಕನ್ನಡ ಸೇರಿದಂತೆ) ಮತ್ತು ಇಂಗ್ಲಿಷ್ (ತಲಾ 300 ಅಂಕಗಳು). ಇವುಗಳಲ್ಲಿ ಕನಿಷ್ಠ ಅಂಕ ಪಡೆಯುವುದು ಕಡ್ಡಾಯ, ಆದರೆ ಇವುಗಳ ಅಂಕಗಳನ್ನು ರ‍್ಯಾಂಕ್ ಪಟ್ಟಿಗೆ ಸೇರಿಸುವುದಿಲ್ಲ.
- ರ‍್ಯಾಂಕ್ ನಿರ್ಧರಿಸುವ ಪತ್ರಿಕೆಗಳು (ಒಟ್ಟು 7 ಪತ್ರಿಕೆಗಳು): ಪ್ರಬಂಧ (Essay) - 250 ಅಂಕಗಳು, ಸಾಮಾನ್ಯ ಅಧ್ಯಯನ (GS 1, 2, 3, 4) - ತಲಾ 250 ಅಂಕಗಳು (ಒಟ್ಟು 1000 ಅಂಕಗಳು), ಐಚ್ಛಿಕ ವಿಷಯ (Optional Subject - Paper 1 & 2) - ತಲಾ 250 ಅಂಕಗಳು (ಒಟ್ಟು 500 ಅಂಕಗಳು). grand total ಅಂಕಗಳು - 1750 ಅಂಕಗಳು.
3. ವ್ಯಕ್ತಿತ್ವ ಪರೀಕ್ಷೆ / ಸಂದರ್ಶನ (Personality Test / Interview): ಅಂತಿಮ ಹಂತವಾದ ವ್ಯಕ್ತಿತ್ವ ಪರೀಕ್ಷೆಯು ದೆಹಲಿಯ UPSC ಕಚೇರಿಯಲ್ಲಿ ಒಟ್ಟು 275 ಅಂಕಗಳಿಗೆ ನಡೆಯಲಿದ್ದು, ಇದರಲ್ಲಿ ಅಭ್ಯರ್ಥಿಯ ವ್ಯಕ್ತಿತ್ವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ದೇಶದ ಪ್ರಚಲಿತ ಸಮಸ್ಯೆಗಳ ಬಗ್ಗೆ ಅವರಿಗಿರುವ ತಿಳುವಳಿಕೆಯನ್ನು ಸಮಗ್ರವಾಗಿ ಪರೀಕ್ಷಿಸಲಾಗುತ್ತದೆ.
💻 ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಮೊದಲು UPSCಯ ಅಧಿಕೃತ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡಿ, ಮೊದಲು ಏಕಕಾಲಿಕ ನೋಂದಣಿ (One Time Registration - OTR) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು; ನಂತರವಷ್ಟೇ ಲಾಗಿನ್ ಆಗುವ ಮೂಲಕ ಇತ್ತೀಚಿನ ಫೋಟೋ (ಹೆಸರು ಮತ್ತು ದಿನಾಂಕವಿರುವ), ಸಹಿ ಮತ್ತು ಗುರುತಿನ ಚೀಟಿಯನ್ನು ಅಪ್‌ಲೋಡ್ ಮಾಡಿ, ತಮ್ಮ ಆದ್ಯತೆಯ ಪರೀಕ್ಷಾ ಕೇಂದ್ರವನ್ನು ಆರಿಸಿ ಅರ್ಜಿ ಶುಲ್ಕ ಪಾವತಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
📅 ಪ್ರಮಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 24, 2026 (ಸಂಜೆ 6:00 ಗಂಟೆಯವರೆಗೆ)
ಪ್ರಾಥಮಿಕ ಪರೀಕ್ಷೆ (Prelims) ದಿನಾಂಕ: ಮೇ 24, 2026 (ಭಾನುವಾರ)
ಮುಖ್ಯ ಪರೀಕ್ಷೆ (Mains) ಆರಂಭ: ಆಗಸ್ಟ್ 21, 2026
🆕 ಹೊಸ ಬದಲಾವಣೆಗಳು ಮತ್ತು ಪ್ರಮುಖ ಸೂಚನೆಗಳು:
ಫೋಟೋ ನಿಯಮ: ಅಪ್‌ಲೋಡ್ ಮಾಡುವ ಫೋಟೋ ಇತ್ತೀಚಿನದಾಗಿರಬೇಕು. ಫೋಟೋದ ಮೇಲೆ ಅಭ್ಯರ್ಥಿಯ ಹೆಸರು ಮತ್ತು ಫೋಟೋ ತೆಗೆದ ದಿನಾಂಕ ಸ್ಪಷ್ಟವಾಗಿರಬೇಕು.
ಲೈವ್ ಫೋಟೋ ಕ್ಯಾಪ್ಚರ್: ಈ ಬಾರಿ ಅರ್ಜಿ ಸಲ್ಲಿಸುವಾಗ ಲೈವ್ ಫೋಟೋ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪರಿಚಯಿಸಲಾಗಿದೆ.
ಕೇಂದ್ರದ ಆಯ್ಕೆ: "ಮೊದಲು ಬಂದವರಿಗೆ ಆದ್ಯತೆ" ಆಧಾರದ ಮೇಲೆ ಪರೀಕ್ಷಾ ಕೇಂದ್ರ ಹಂಚಿಕೆಯಾಗುವುದರಿಂದ, ನಿಮ್ಮ ಇಷ್ಟದ ನಗರಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಿ.
ನಿರ್ಬಂಧ: ಈಗಾಗಲೇ IAS ಅಥವಾ IFS ಅಧಿಕಾರಿಯಾಗಿ ಕೆಲಸ ಮಾಡುತ್ತಿರುವವರು 2026ರ ಪರೀಕ್ಷೆಗೆ ಹಾಜರಾಗಲು ಅರ್ಹರಲ್ಲ.
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಿರಂತರವಾಗಿ KPSCVaani ವೆಬ್‌ಸೈಟ್ ಮತ್ತು ಆಪ್ ಅನ್ನು ಗಮನಿಸುತ್ತಿರಿ.
Application End Date: Feb. 24, 2026





Comments