ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ UIIC ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಯುನೈಟೆಡ್ ಇಂಡಿಯಾ ಇನ್ಷುರನ್ಸ್ ಕಂಪನಿ ಲಿಮಿಟೆಡ್ (UIIC) ತನ್ನ ಅಧಿಕೃತ ವೆಬ್‌ಸೈಟ್ [uiic.co.in](http://uiic.co.in) ನಲ್ಲಿ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಮೂಲಕ ದೇಶದಾದ್ಯಾಂತ 145 ಶಿಷ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2025ರ ಏಪ್ರಿಲ್ 28 ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
- ಹುದ್ದೆ ಹೆಸರು : ಶಿಷ್ಯರು (Apprentices)
- ಒಟ್ಟು ಹುದ್ದೆಗಳು : 145
- ಸ್ಥಳ : ಭಾರತದಾದ್ಯಾಂತ
- ಮಾಸಿಕ ಭತ್ಯೆ : ₹9,000
ರಾಜ್ಯವಾರು ಹುದ್ದೆಗಳ ವಿವರ :
- ದೆಹಲಿ – 15
- ಚಂಡೀಗಢ – 3
- ಹರಿಯಾಣ – 2
- ಪಂಜಾಬ್ – 2
- ರಾಜಸ್ಥಾನ – 25
- ಉತ್ತರ ಪ್ರದೇಶ – 10
- ಉತ್ತರಾಖಂಡ – 5
- ಮಹಾರಾಷ್ಟ್ರ – 30
- ಗೋವಾ – 2
- ಮಧ್ಯಪ್ರದೇಶ – 10
- ಗುಜರಾತ್ – 10
- ಬಿಹಾರ – 3
- ಜಾರ್ಖಂಡ್ – 2
- ಪಶ್ಚಿಮ ಬಂಗಾಳ – 9
- ಅಸ್ಸಾಂ – 7
- ಛತ್ತೀಸ್‌ಗಢ – 5
- ಒಡಿಶಾ – 5
ಅರ್ಹತಾ ಮಾನದಂಡ:
- ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರೈಸಿರಬೇಕು.
- ವಯೋಮಿತಿ : ಕನಿಷ್ಠ 21 ವರ್ಷ ಮತ್ತು ಗರಿಷ್ಠ 28 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿ (Shortlisting) ಹಾಗೂ ಡಾಕ್ಯುಮೆಂಟ್ ವೆರಿಫಿಕೇಶನ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಅಭ್ಯರ್ಥಿಗಳು [uiic.co.in](http://uiic.co.in) ನಲ್ಲಿ 2025ರ ಏಪ್ರಿಲ್ 15 ರಿಂದ ಏಪ್ರಿಲ್ 28ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮುಖ್ಯ ದಿನಾಂಕಗಳು :
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 15-04-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-04-2025
ಆಸಕ್ತರು ಅರ್ಜಿಯನ್ನು ಸಲ್ಲಿಸುವ ಮುನ್ನ ಎಲ್ಲಾ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ತಯಾರಿಸಿಟ್ಟುಕೊಳ್ಳಬೇಕು. ಭವಿಷ್ಯದ ಸಂಪರ್ಕಕ್ಕಾಗಿ ಕಾರ್ಯನಿರತ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ [www.uiic.co.in](http://www.uiic.co.in) ಗೆ ಭೇಟಿ ನೀಡಿ.
Comments