ಆರೋಗ್ಯ ಇಲಾಖೆಯಲ್ಲಿ ನೇಮಕಾತಿ 2025 : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶ ಬಂದಿದೆ! ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿ 2025 ರಲ್ಲಿ ಆರೋಗ್ಯ ಇಲಾಖೆಯಲ್ಲಿ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಕರ್ನಾಟಕ ಸರ್ಕಾರಿ ಉದ್ಯೋಗ 2025 ರಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು, ವಿಶೇಷವಾಗಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಚಿನ್ನದ ಅವಕಾಶ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 35 ಪ್ರಾಜೆಕ್ಟ್ ಮ್ಯಾನೇಜರ್, ವೈದ್ಯರು, ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ, ಡೈರೆಕ್ಟ್ ಕೋಆರ್ಡಿನೇಟರ್ ಮತ್ತು ಟೀಮ್ ಲೀಡರ್ ಸೇರಿದಂತೆ ಅನೇಕ ಪ್ರಮುಖ ಹುದ್ದೆಗಳನ್ನು ಒಳಗೊಂಡಿದೆ. ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಉದ್ದೇಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸಂದರ್ಶನ ನಡೆಯುವ ದಿನಾಂಕ05/12/2025 ದಂದು ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ನಾವು ಈ ಲೇಖನದಲ್ಲಿ ಮುಖ್ಯವಾಗಿ ಲಭ್ಯವಿರುವ ಹುದ್ದೆಗಳ ವಿವರಗಳು ಮತ್ತು ಅವುಗಳ ಅರ್ಹತೆಗಳನ್ನು ವಿಸ್ತಾರವಾಗಿ ನೋಡುತ್ತೇವೆ. ಅರ್ಜಿ ಪ್ರಕ್ರಿಯೆ ಮತ್ತು ಅವಶ್ಯಕ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಅಲ್ಲದೆ ಯಶಸ್ವಿ ಅರ್ಜಿಗಾಗಿ ಮಾರ್ಗದರ್ಶಿ ಸಲಹೆಗಳನ್ನು ಸಹ ಹಂಚಿಕೊಳ್ಳುತ್ತೇವೆ, ಇದರಿಂದ ನೀವು ಈ ಸುವರ್ಣಾವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬಹುದು.
📌ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹುದ್ದೆಯ ಅಧಿಸೂಚನೆ
🏛️ಸಂಸ್ಥೆಯ ಹೆಸರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
🧾 ಹುದ್ದೆಗಳ ಸಂಖ್ಯೆ: 35
📍ಹುದ್ದೆಯ ಸ್ಥಳ: ಕರ್ನಾಟಕ
🔹ಹುದ್ದೆಯ ಹೆಸರು: ವಿವಿಧ ಹುದ್ದೆಗಳು
💰ಸ್ಟೈಫಂಡ್: ನೇಮಕಾತಿ ನಿಯಮಾನುಸಾರ
📌 ಹುದ್ದೆಗಳ ವಿವರ : 35
1. Project Manager-IT : 1
2. Doctors-In Office Quality Cell: 1
3. Senior Executive Doctors : 11
4. Regional Consultant : 3
5. Assistant Regional Consultants : 6
6. District Coordinator : 5
7. IEC Consultant : 1
8. Doctor-Assistant Project Manager AB-Ark & Other Schemes : 1
9. Executive (Doctor)-Jyothi Sanjeevini Scheme & 2A Claims : 4
10.Project Manager-KASS Scheme : 1
11. Team Leader-Doctor (Pre-auth)-KASS Scheme : 1
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
🎓ಅರ್ಹತಾ ಮಾನದಂಡ :
🔹Project Manager-IT : ಬಿಇ (ಕಂಪ್ಯೂಟರ್ ವಿಜ್ಞಾನ ಮತ್ತು /ಮಾಹಿತಿ ವಿಜ್ಞಾನಕ್ಕೆ ಆದ್ಯತೆ ನೀಡಲಾಗುವುದು)
🔹 Doctors-In Office Quality Cell: MBBS with PG Degree/Diploma
🔹 Senior Executive Doctors : MBBS with PG Degree/Diploma
🔹Regional Consultant : MBBS with PG Degree/Diploma
🔹 Assistant Regional Consultants : MBBS, BDS with MPH
🔹District Coordinator : MBBS, BDS
🔹IEC Consultant : PG in Mass Communication/Journalism from a Recognized University.
🔹Doctor-Assistant Project Manager AB-Ark & Other Schemes : MBBS, BDS
🔹Executive (Doctor)-Jyothi Sanjeevini Scheme & 2A Claims : MBBS, BDS
🔹Project Manager-KASS Scheme : MBBS with PG
🔹Team Leader-Doctor (Pre-auth)-KASS Scheme : MBBS
⏳ ವಯಸ್ಸಿನ ಮಿತಿ: ನೇಮಕಾತಿ ನಿಯಮಾನುಸಾರವಾಗಿ ಅಭ್ಯರ್ಥಿಗಳು ಗರಿಷ್ಠ 55 ವರ್ಷಗಳ ವಯೋಮಿತಿಯನ್ನು ಮೀರಿರಬಾರದು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಿದೆ.
💼 ಆಯ್ಕೆ ಪ್ರಕ್ರಿಯೆ :ನೇರ ಸಂದರ್ಶನ
💰 ವೇತನ:
=>Project Manager-IT : 1,50,000
=>Doctors-In Office Quality Cell: 1,00,000
=>Senior Executive Doctors : 65,000
=>Regional Consultant : 60,000
=>Assistant Regional Consultants : 50,000
=>District Coordinator : 45,000
=>IEC Consultant : 58,000
=>Doctor-Assistant Project Manager AB-Ark & Other Schemes : 50,000
=>Executive (Doctor)-Jyothi Sanjeevini Scheme & 2A Claims : 50,000
=>Project Manager-KASS Scheme : 85,000
=>Team Leader-Doctor (Pre-auth)-KASS Scheme : 70,000
📝 ಸಂದರ್ಶನದ ವಿವರ :
✅ಸಂದರ್ಶನದ ಸ್ಥಳ : 'ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಸೌಧ, 7ನೇ ಮಹಡಿ, ಮಾಗಡಿ ರಸ್ತೆ, ಬೆಂಗಳೂರು-560023
✅ಸಂದರ್ಶನ ದಿನಾಂಕ : 05-12-2025
✅ನೋಂದಣಿ ಅವಧಿ : ಬೆಳಿಗ್ಗೆ 10.30 ರಿಂದ 12.30 ಗಂಟೆಯೊಳಗೆ (12.30 ಗಂಟೆ ನಂತರ ನೋಂದಣಿಗೆ ಅವಕಾಶವಿರುವುದಿಲ್ಲ)
✅ಕಂಪ್ಯೂಟರ್ ಪರೀಕ್ಷೆ & ಮೂಲ ದಾಖಲಾತಿ ಪರಿಶೀಲನೆ : ಬೆಳಿಗ್ಗೆ 10.45 ರಿಂದ 01.30 ಗಂಟೆಯವರೆಗೆ
✅ಸಂದರ್ಶನದ ಅವಧಿ : ಮಧ್ಯಾಹ್ನ 2.30 ರಿಂದ ಸಂಜೆ 5.00 ಗಂಟೆಯವರೆಗೆ
⭐ ಸೂಚನೆ :ಅಭ್ಯರ್ಥಿಯು ನೇರ ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಯ ವಿವರವನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಿರುವ ನಿಗದಿತ ನಮೂನೆಯಲ್ಲಿ ಭರ್ತಿಮಾಡಿ, ಭಾವಚಿತ್ರವನ್ನು ಲಗತ್ತಿಸಿ ಈ ಕೆಳಗಿನ ಎಲ್ಲಾ ದಾಖಲಾತಿಗಳ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸುವುದು. ಇಲ್ಲದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
1. ಅಭ್ಯರ್ಥಿಯ ಸ್ವಯಂ ವಿವರ
2. ಎಸ್.ಎಸ್.ಎಲ್.ಸಿ ಅಂಕಪಟ್ಟಿ (ಸ್ವಯಂ ದೃಢೀಕರಿಸುವುದು)
3. ಪದವಿ ಮತ್ತು ಸ್ನಾತಕೋತ್ತರ ಪದವಿಯ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿ (ಸ್ವಯಂ ದೃಢೀಕರಿಸುವುದು)
4. Karnataka Medical Council/Karnataka Dental Council ಪ್ರಮಾಣ ಪತ್ರ (ದೃಢೀಕರಿಸುವುದು)
5. ಅನುಭವ ಪ್ರಮಾಣ ಪತ್ರ (ಸಂಬಂಧಿಸಿದ ಸಂಸ್ಥೆಗಳಿಂದ ಪಡೆದು ಸ್ವಯಂ ದೃಢೀಕರಿಸುವುದು)
6. ಅಭ್ಯರ್ಥಿಯ ಗುರುತಿನ ಪ್ರಮಾಣ ಪತ್ರ (ಆಧಾರ ಕಾರ್ಡ್/ವೋಟರ್ ಐಡಿ/ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ)
7. ಅಭ್ಯರ್ಥಿಗಳು 2 ಭಾವಚಿತ್ರ ಹಾಗೂ ಎಲ್ಲಾ ಮೂಲ ದಾಖಲಾತಿಗಳನ್ನು (Original Documents) ಪರಿಶೀಲನೆಗಾಗಿ ಸಲ್ಲಿಸುವುದು.
8. ಮೀಸಲಾತಿ ಸೌಲಭ್ಯ ಪಡೆಯಲು ಇಚ್ಚಿಸಿದಲ್ಲಿ ಸಕ್ಷಮ ಪ್ರಾಧಿಕಾರ ನೀಡಿದ ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸುವುದು.
9. ಸಮತಳ ಮೀಸಲಾತಿಯಲ್ಲಿ ಅರ್ಹ ಅಭ್ಯರ್ಥಿ ಲಭ್ಯವಿಲ್ಲದ ಸಂದರ್ಭದಲ್ಲಿ ಅದೇ ವರ್ಗದ ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆಗೆ ಪರಿಗಣಿಸಲಾಗುವುದು.
10. ಹಾರ್ಡ್ ಕಾಪಿ ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
11. ನಮೂನೆ ಹಾಗೂ ಹುದ್ದೆಗಳ ಹೆಚ್ಚಿನ ವಿವರಗಳಿಗಾಗಿ ಕಛೇರಿ ವೆಬ್‌ಸೈಟ್ http://arogya.karnataka.gov.in/sast ನಲ್ಲಿ ವೀಕ್ಷಿಸಬಹುದು.
To Download Official Notification
ಆರೋಗ್ಯ ಇಲಾಖೆ ಚಾಕರಿ,
ಕರ್ನಾಟಕ ಸರ್ಕಾರಿ ಉದ್ಯೋಗ 2025,
ಆರೋಗ್ಯ ಸೇವೆ ಹುದ್ದೆಗಳು,
ಸುವರ್ಣ ಟ್ರಸ್ಟ್ ಅರ್ಜಿ ಅಧಿಸೂಚನೆ,
ಆರೋಗ್ಯ ಇಲಾಖೆ ಚಾಕರಿ 2025,
ಕರ್ನಾಟಕ ಸ್ವಾಸ್ಥ್ಯ ಇಲಾಖೆ ನೇಮಕಾತಿ,
ಆರೋಗ್ಯ ಕಾರ್ಯಕರ್ತ ಹುದ್ದೆಗಳು,
ಸುವರ್ಣ ಆರೋಗ್ಯ ಯೋಜನೆ ಚಾಕರಿ





Comments