ಶ್ರೀ ಜಯದೇವ್ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:Sept. 4, 2023

ಕರ್ನಾಟಕ ಸರ್ಕಾರವು ನಡೆಸುತ್ತಿರುವ ತೃತೀಯ ಆರೈಕೆ ಸ್ವಾಯತ್ತ ಸಂಸ್ಥೆಯಾಗಿರುವ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು ಮೈಸೂರು ಮತ್ತು ಕಲಬುರಗಿಯಲ್ಲಿ ಶಾಖೆ ಹೊಂದಿರುವ ಶ್ರೀ ಜಯದೇವ್ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ 33 ಸಹಾಯಕ ಪ್ರಾದ್ಯಾಪಕರು, ಸಹಾಯಕ ಪ್ರಾದ್ಯಾಪಕರು ಸಿ ಟಿ ಸರ್ಜರಿ ಮತ್ತು ಸಹಾಯಕ ಪ್ರಾದ್ಯಾಪಕರು ಅರವಳಿಕೆ ಶಾಸ್ತ್ರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
- ದಿನಾಂಕ :07/09/2023 ರಂದು ಬೆಳ್ಳಿಗೆ 11:30 ಘಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.
ಸಂದರ್ಶನ ನಡೆಯುವ ಸ್ಥಳ :
ಶ್ರೀ ಜಯದೇವ್ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ,
ಬನ್ನೇರುಘಟ್ಟ ರಸ್ತೆ, ಬೆಂಗಳೂರಿನಲ್ಲಿ ಮೊದಲನೇ ಮಹಡಿಯಲ್ಲಿರುವ
ಬೋರ್ಡ್ ರೂಮ್ ನಲ್ಲಿ ಸಂದರ್ಶನ ನಡೆಯಲಿದೆ.
No. of posts: 33
Comments