ಭಾರತೀಯ ರೈಲ್ವೆ ಸಚಿವಾಲಯದ ನೈರುತ್ಯ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Bhagya R K | Date:Aug. 11, 2023

ಭಾರತೀಯ ರೈಲ್ವೆ ಸಚಿವಾಲಯದಡಿಯಲ್ಲಿ ಬರುವ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 713 ಅಸಿಸ್ಟಂಟ್ ಲೋಕೋ ಪೈಲಟ್, ಟೆಕ್ನಿಷಿಯನ್, ಮತ್ತು ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 02-09-2023 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 713
ಅಸಿಸ್ಟಂಟ್ ಲೋಕೋ ಪೈಲಟ್ - 588
ಟೆಕ್ನಿಷಿಯನ್ (ಸಿಗ್ನಲ್) - 14
ಜೂನಿಯರ್ ಎಂಜಿನಿಯರ್ / ಪಿ.ವೇ - 38
ಜೂನಿಯರ್ ಎಂಜಿನಿಯರ್ / ವರ್ಕ್ಸ್ - 18
ಜೂನಿಯರ್ ಎಂಜಿನಿಯರ್ / ಕ್ಯಾರೇಜ್ - 13
ಜೂನಿಯರ್ ಎಂಜಿನಿಯರ್ /ಟ್ರ್ಯಾಕ್ ಮೆಷಿನ್ - 19
ಇತರ - 23
No. of posts: 713
Comments