ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 44 ಜೂನಿಯರ್ ಪ್ರೋಗ್ರಾಮರ್ (ಗ್ರೂಪ್ ಬಿ), ಸಹಾಯಕ ಎಂಜಿನಿಯರ್ (ಸಿವಿಲ್), ಸಹಾಯಕ ಗ್ರಂಥಪಾಲಕ, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪ್ರಾರಂಭ ದಿನಾಂಕ 26 ಮಾರ್ಚ್ 2024 ಹಾಗೂ ಕೊನೆಯ ದಿನಾಂಕ 25- ಏಪ್ರಿಲ್ -2024 ರೊಳಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 44
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್ ಬಿ) - 05
ಸಹಾಯಕ ಎಂಜಿನಿಯರ್ (ಸಿವಿಲ್) (ಗ್ರೂಪ್ ಬಿ) - 01
ಸಹಾಯಕ ಗ್ರಂಥಪಾಲಕ (ಗ್ರೂಪ್ ಸಿ) - 01
ಸಹಾಯಕ (ಗ್ರೂಪ್ ಸಿ) - 12
ಕಿರಿಯ ಸಹಾಯಕ (ಗ್ರೂಪ್ ಸಿ) - 25
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಗುಣವಾಗಿ PUC, ಇಂಜಿನಿಯರಿಂಗ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗಿನಂತೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- OBC ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 750/-
- ಅಭ್ಯರ್ಥಿಗಳು ಎಸ್‍ಸಿ/ ಎಸ್‍ಟಿ/ ಮಾಜಿ ಸೈನಿಕ/ ಮಹಿಳೆಯರು ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.500/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಈ ಕೆಳಕಂಡ ವಯೋಮಿತಿಗಳನ್ನು ಮೀರಿರಬಾರದು
* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
* 2A/2B/3A/3B ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
* SC/ST/CAT-1 ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್ ಬಿ) ಮತ್ತು ಸಹಾಯಕ ಎಂಜಿನಿಯರ್ (ಸಿವಿಲ್) (ಗ್ರೂಪ್ ಬಿ) - 43100/- 83900/-
ಸಹಾಯಕ ಗ್ರಂಥಪಾಲಕ (ಗ್ರೂಪ್ ಸಿ) - 30350/- 58250/-
ಸಹಾಯಕ (ಗ್ರೂಪ್ ಸಿ) - 37900/- 70850/-
ಕಿರಿಯ ಸಹಾಯಕ (ಗ್ರೂಪ್ ಸಿ) - 21400/- 42000/- ರೂ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments