Loading..!

ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Yallamma G | Date:June 14, 2024
not found

ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯದಲ್ಲಿ ಖಾಲಿ ಇರುವ ಫೈನಾನ್ಸ್ & ಅಡಿಟ್ ಆಫೀಸರ್, ಬ್ಯಾಂಕಿಂಗ್ ಆಫೀಸರ್ ಮತ್ತು ಡೇಟಾ ಸೈಂಟಿಸ್ಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.  


- ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.

No. of posts:  3
Application Start Date:  June 14, 2024
Application End Date:  June 21, 2024
Work Location:  ಭಾರತದಾದ್ಯಂತ
Selection Procedure:

ಈ ಹುದ್ದೆಗಳನ್ನು ನೇಮಕಾತಿ ನಿಯಮಾನುಸಾರ ನೇಮಕ ಮಾಡಿಕೊಳ್ಳಲಾಗುತ್ತದೆ.

ಈ ಹುದ್ದೆಗಳನ್ನು ಒಂದು ವರ್ಷದ ಅವಧಿಯ ವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳ ಕಾಯಂ ಸರಕಾರಿ ಹುದ್ದೆಗಳಾಗಿರುವುದಿಲ್ಲ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 21/06/2024 ದೊಳಗಾಗಿ ರೆಸೂಮ್ (Resme) ಅನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದಾಗಿರುತ್ತದೆ. 
Resume ಕಳುಹಿಸುವ ವಿಳಾಸ :
ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ,
ಪೋಡಿಯಂ ಬ್ಲಾಕ್, 3ನೇ ಮಹಡಿ, ವಿಶ್ವೇಶ್ವರಯ್ಯ ಗೋಪುರ, ಬೆಂಗಳೂರು-560001.     


ಹುದ್ದೆಗಳ ವಿವರ : 3
ಫೈನಾನ್ಸ್ & ಅಡಿಟ್ ಆಫೀಸರ್ : 1
ಡೇಟಾ ಸೈಂಟಿಸ್ಟ್ : 1
ಬ್ಯಾಂಕಿಂಗ್ ಆಫೀಸರ್ : 1

Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು  ಸಂಬಂಧಪಟ್ಟ ವಿಷಯದಲ್ಲಿ M.Com/ CA/ BE/ CSE/ LLB ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ  ವಿಶ್ವವಿದ್ಯಾಲಯದಿಂದ ಹೊಂದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು. 
Pay Scale:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. 

ಫೈನಾನ್ಸ್ & ಅಡಿಟ್ ಆಫೀಸರ್ : 50000/- ರಿಂದ 55000/- ವರೆಗೆ 

ಡೇಟಾ ಸೈಂಟಿಸ್ಟ್ : 80000/- ರಿಂದ 100000/- ವರೆಗೆ 

ಬ್ಯಾಂಕಿಂಗ್ ಆಫೀಸರ್ : 75000/- ರಿಂದ 100000/- ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
To Download Official Notification

Comments