Loading..!

NIT ಸುರತ್ಕಲ್ ನಲ್ಲಿ ಗ್ರೂಪ್ ಬಿ ಮತ್ತು ಸಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
| Date:June 24, 2019
not found
ಮಂಗಳೂರಿನ ಸುರತ್ಕಲ್ ನಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ವಿವಿಧ ಬೋಧಕೇತರ ಹುದ್ದೆಗಳ ನೇಮಕಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ:
* ಗ್ರೂಪ್ ಡಿ ಹುದ್ದೆಗಳಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್/ ಜೂನಿಯರ್ ಎಂಜಿನಿಯರ್ / ಲೈಬ್ರರಿ ಅಂಡ್ ಇನ್ ಫಾರ್ಮೆಷನ್ ಅಸಿಸ್ಟೆಂಟ್/ ಎಸ್ಎಎಸ್ ಅಸಿಸ್ಟೆಂಟ್ - 32
* ಸುಪರಿಂಟೆಂಡೆಂಟ್ - 9 ಹುದ್ದೆಗಳಿವೆ.
*ಗ್ರೂಪ್ - ಸಿ ಹುದ್ದೆಗಳಲ್ಲಿ ಸೀನಿಯರ್ ಟೆಕ್ನಿಷಿಯನ್ - 17
* ಟೆಕ್ನಿಷಿಯನ್ -32
* ಸೀನಿಯರ್ ಅಸಿಸ್ಟೆಂಟ್ -10
* ಜೂನಿಯರ್ ಅಸಿಸ್ಟೆಂಟ್ - 19
* ಆಫೀಸ್ ಅಟೆಂಡೆಂಟ್ / ಲ್ಯಾಬ್ ಅಟೆಂಡೆಂಟ್ - 19

ಅರ್ಜಿ ಸಲ್ಲಿಸುವ ವಿಧಾನ :
ಮೊದಲು ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಬಳಿಕ ಭರ್ತಿ ಮಾಡಿದ ಆನ್ಲೈನ್ ಅರ್ಜಿ ಪ್ರತಿಯ ಪ್ರಿಂಟ್ ಔಟ್ ತೆಗೆದು, ಸಂಬಂಧಪಟ್ಟ ದಾಖಲೆಪತ್ರಗಳನ್ನು ಸ್ವಯಂ ದೃಢೀಕರಿಸಿ ಲಗತ್ತಿಸಿ, ಸ್ಪೀಡ್ ಪೋಸ್ಟ್/ ರಿಜಿಸ್ಟಾರ್ಡ್ ಪೋಸ್ಟ್ ಮೂಲಕ ಎನ್ಐಟಿ ಕಳುಹಿಸಬೇಕು.
ಸೂಚನೆ :ಹಾರ್ಡ್ ಕಾಪಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 19,2019
ಅರ್ಜಿ ಸಲ್ಲಿಸುವ ವಿಳಾಸ:
the Register,National Institute of Technology Kamataka -Surathkal
Post:Srinivasanagar,Mangaluru -575 025
No. of posts:  83
Application Start Date:  June 21, 2019
Application End Date:  July 17, 2019
Last Date for Payment:  July 19, 2019
Work Location:  Surathkal
Qualification: ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಬಿಇ/ ಬಿಟೆಕ್/ ಎಂಸಿಎ ಅಥವಾ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ವಿಜ್ಞಾನ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೂನಿಯರ್ ಎಂಜಿನಿಯರಿಂಗ್ ಹುದ್ದೆಗೆ ಸಿವಿಲ್ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಿಇ/ ಬಿಟೆಕ್ ಅಥವಾ ಡಿಪ್ಲೊಮಾ ಪಡೆದಿರಬೇಕು.ಎಸ್ಎಎಸ್ ಅಸಿಸ್ಟಂಟ್ ಹುದ್ದೆಗೆ ಫಿಸಿಕಲ್ ಎಜುಕೇಶನ್ ನಲ್ಲಿ ಪದವಿ,ಲೈಬ್ರರಿ ಅಸಿಸ್ಟಂಟ್ ಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಸೂಪರಿಂಟೆಂಡೆಂಟ್ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಸೀನಿಯರ್ ಟೆಕ್ನಿಷಿಯನ್, ಟೆಕ್ನೀಷಿಯನ್ ಹುದ್ದೆಗಳಿಗೆ ಪಿಯುಸಿ (ವಿಜ್ಞಾನ)ಅಥವಾ ಪಿಯುಸಿ (ವಿಜ್ಞಾನ ) ಮತ್ತು ಐಟಿಐ (1 ವರ್ಷದ) ಅಥವಾ 10 ನೇ ತರಗತಿ ಮತ್ತು ಸಂಬಂಧಪಟ್ಟ ಟ್ರೇಡ್ ಗಳಲ್ಲಿ 2 ವರ್ಷದ ಐಟಿಐ ಕೋರ್ಸ್ ಪೂರ್ಣಗೊಳಿಸಿರಬೇಕು.
ಎಂಜಿನಿಯರಿಂಗ್ ಡಿಪ್ಲೊಮಾ ಪಡೆದವರು ಅರ್ಜಿಸಲ್ಲಿಸಬಹುದು. ಸೀನಿಯರ್ ಅಸಿಸ್ಟೆಂಟ್, ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಮತ್ತು ನಿಮಿಷಕ್ಕೆ 35 ಪದ ಟೈಪಿಂಗ್ ಮತ್ತು ಕಂಪ್ಯೂಟರ್ ವರ್ಡ್ ಪ್ರೊಸೆಸಿಂಗ್,ಸ್ಪ್ರಿಡ್ ಶಿಟ್ ಟ್ರೈನ್ ಶೀಟ್ ಜ್ಞಾನ ಬಯಸಲಾಗಿದೆ.ಆಫೀಸ್ ಅಟೆಂಡೆಂಟ್ ಗೆ ದ್ವಿತೀಯ ಪಿಯುಸಿ ಮತ್ತು ಲ್ಯಾಬ್ ಅಟೆಂಡೆಂಟ್ ಗೆ ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಬಯಸಲಾಗಿದೆ.
Fee: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500/- ರೂ. ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ(ಇಡಬ್ಲೂಎಸ್) 250/-ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments