ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (NCL) ನೇಮಕಾತಿ 2025 – 100 ಪ್ಯಾರಾಮೆಡಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

NCL ಪ್ಯಾರಾಮೆಡಿಕಲ್ ಅಪ್ರೆಂಟಿಸ್ ಹುದ್ದೆಗಳ ಈ ಸುನ್ನಿತ ಸಂದರ್ಭವನ್ನು ಬಿಟ್ಟುಬಿಡಬೇಡಿ. ಸರಿಯಾದ ಅರ್ಹತೆಗಳೊಂದಿಗೆ ಮತ್ತು ಸೂಕ್ತ ತಯಾರಿಯೊಂದಿಗೆ, ನೀವು ದೇಶದ ಪ್ರಮುಖ ಕಲ್ಲಿದ್ದಲು ಕಂಪನಿಯಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಅವಕಾಶವನ್ನು ಪಡೆಯಬಹುದು. ಅಪ್ರೆಂಟಿಸ್‌ಶಿಪ್ ಅವಧಿ ನಿಮಗೆ ಅಮೂಲ್ಯವಾದ ಪ್ರಾಯೋಗಿಕ ಅನುಭವ ಮತ್ತು ಭವಿಷ್ಯದಲ್ಲಿ NCL ಯಲ್ಲಿ ಖಾಯಂ ಉದ್ಯೋಗದ ಮಾರ್ಗವನ್ನು ತೆರೆಯುತ್ತದೆ.
ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (NCL) ನೇಮಕಾತಿ ಅಡಿಯಲ್ಲಿ ಒಟ್ಟು 100 ಬ್ಯಾಚುಲರ್ ಆಫ್ ಫಿಸಿಯೋಥೆರಪಿ, ನರ್ಸಿಂಗ್ ಪದವಿ, ಬ್ಯಾಚುಲರ್ ಆಫ್ ಆಪ್ಟೋಮೆಟ್ರಿ, ಆಹಾರ ಪದ್ಧತಿಯಲ್ಲಿ ಪದವಿ, ಇಸಿಜಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ, ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ ಡಿಪ್ಲೊಮಾ, ನೇತ್ರ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಮತ್ತು ಫಾರ್ಮಸಿಯಲ್ಲಿ ಡಿಪ್ಲೊಮಾ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ 1 ಈ ವರ್ಷದ ಅವಧಿಯವರೆಗೆ ತರಭೇತಿಯನ್ನು ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು 18-ಅಕ್ಟೋಬರ್-2025 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಸರಿಯಾಗಿ ತಯಾರಿಸಿ ಮತ್ತು ಅರ್ಹತಾ ಮಾನದಂಡಗಳನ್ನು ಎರಡು ಬಾರಿ ಪರಿಶೀಲಿಸಿ. NCL ನ ಈ ಅವಕಾಶವು ಪ್ಯಾರಾಮೆಡಿಕಲ್ ಕ್ಷೇತ್ರದಲ್ಲಿ ಆರಂಭಿಸಲು ಬಯಸುವ ಯುವಕರಿಗೆ ಒಂದು ಚಿನ್ನದ ಅವಕಾಶ. ಈ ಸಂದರ್ಭದ ಸದುಪಯೋಗ ಮಾಡಿಕೊಂಡು ನಿಮ್ಮ ಕನಸಿನ ಉದ್ಯೋಗದ ಕಡೆಗೆ ಮೊದಲ ಹೆಜ್ಜೆ ಇಡಿ.
KPSCVaani ಸೆಪ್ಟೆಂಬರ್ ತಿಂಗಳ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಒತ್ತಿ.
📌NCL ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು : ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ( ಎನ್‌ಸಿಎಲ್ )
ಹುದ್ದೆಗಳ ಸಂಖ್ಯೆ: 100
ಉದ್ಯೋಗ ಸ್ಥಳ: ಉತ್ತರ ಪ್ರದೇಶ - ಮಧ್ಯಪ್ರದೇಶ
ಹುದ್ದೆಯ ಹೆಸರು: ಪ್ಯಾರಾಮೆಡಿಕಲ್ ಅಪ್ರೆಂಟಿಸ್ ಟ್ರೈನೀಸ್
ಸ್ಟೈಫಂಡ್: ತಿಂಗಳಿಗೆ ರೂ.12700-13700/-
Comments