ಭಾರತೀಯ ಹಡಗು ನಿರ್ಮಾಣ ಸಂಸ್ಥೆ ಮಜಗಾನ್ ಡಾಕ್ ಶಿಪ್‌ಬ್ಯುಲ್ಡರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ನೌಕಾಪಡೆಯ ಭಾರತದ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯಗಳಲ್ಲಿ ಒಂದಾಗಿರುವ ಹಾಗೂ "ಶಿಪ್ ಬಿಲ್ಡರ್ ಟು ದಿ ನೇಷನ್" ಎಂದು ಸೂಕ್ತವಾಗಿ ಕರೆಯಲ್ಪಡುವ ಭಾರತೀಯ ಹಡಗು ನಿರ್ಮಾಣ ಸಂಸ್ಥೆ ಮಜಗಾನ್ ಡಾಕ್ ಶಿಪ್‌ಬ್ಯುಲ್ಡರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 518 ಡ್ರಾಫ್ಟ್ಸ್ ಮನ್, ಎಲೆಕ್ಟ್ರಿಷಿಯನ್, ಪೈಪ್ ಫಿಟ್ಟರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ವೆಲ್ದರ್, ಕೋಪ, ಕಾರ್ಪೆಂಟರ್ ಮತ್ತು ವೆಲ್ದರ್ (ಗ್ಯಾಸ್ & ಎಲೆಕ್ಟ್ರಿಕ್) ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಆಯೇಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02 ಜುಲೈ 2024 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸುವ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಹುದ್ದೆಗಳ ವಿವರ : 518
1. ಗ್ರೂಪ್ A : 218
2. ಗ್ರೂಪ್ B : 240
3. ಗ್ರೂಪ್ C : 60
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 8th / SSLC / ITI ವಿದ್ಯಾರ್ಹತೆಯನ್ನು ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳು ರೂಪಾಯಿ 100/- ಅರ್ಜಿ ಶುಲ್ಕವನ್ನು ಪಾವತಿಸಬೇಕು.
SC, ST, PwD, ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯತಿ ಇರುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ
ಗ್ರೂಪ್ A ಹುದ್ದೆಗಳಿಗೆ 15-19 ವರ್ಷ
ಗ್ರೂಪ್ B ಹುದ್ದೆಗಳಿಗೆ 16-21 ವರ್ಷ
ಗ್ರೂಪ್ C ಹುದ್ದೆಗಳಿಗೆ 14-18 ವರ್ಷ ವಯೋಮಿತಿ ನೀಡಲಾಗಿದೆ.
- ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನೀಡಲಾಗುವುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.




Comments