Loading..!

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಯ ಭರ್ತಿ ಮಾಡಲು ITI ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: ITI
Published by: Yallamma G | Date:Jan. 6, 2024
not found

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ133 ಆಟೋ ಎಲೆಕ್ಟ್ರಿಷಿಯನ್, ಆಟೋ ವೆಲ್ಡರ್, ಮೆಕ್ಯಾನಿಕ್ ಹಾಗೂ ಆಟೋ ಪೇಂಟರ್, ಆಟೋ ಮೆಷಿನಿಸ್ಟ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 
- ಈ ಹುದ್ದೆಗಳಿಗೆ ದಿನಾಂಕ 11/01/2023 ರಂದು ಬೆಳ್ಳಿಗೆ 10:00 ಗೆ ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಹಾಜರಾಗುವ ಮೂಲಕ ಹುದ್ದೆಗಳಿಗೆ  ಆಯ್ಕೆಯಾಗಬಹುದಾಗಿದೆ.   
ಸಂದರ್ಶನ ನಡೆಯುವ ಸ್ಥಳ : 
ಕ.ಕ.ರ.ಸಾ.ನಿಗಮ, ವಿಭಾಗೀಯ ಕಛೇರಿ, ರಾಯಚೂರು ವಿಭಾಗ,
ರಾಯಚೂರು.


ಹುದ್ದೆಗಳ ವಿವರ : 133
• ಆಟೋ ಮೆಕ್ಯಾನಿಕ್ : 46 
• ಆಟೋ ಎಲೆಕ್ನಿಷಿಯನ್ : 28
• ಆಟೋ ವೆಲ್ಡರ್ : 20
• ಆಟೋ ಬಾಡಿ ಫಿಟ್ಟರ್ : 20
• ಆಟೋ ಪೇಂಟರ್ : 10  
• ಆಟೋ ಮೆಷಿನಿಸ್ಟ್ : 9

No. of posts:  133
Application Start Date:  Jan. 6, 2024
Application End Date:  Jan. 11, 2024
Work Location:  ಭಾರತದಾದ್ಯಂತ
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ITI ವಿದ್ಯಾರ್ಹತೆಯನ್ನು ಸರಕಾರದಿಂದ ಮಾನ್ಯತೆಪಡೆದ ಸಂಸ್ಥೆಯಲ್ಲಿ ಹೊಂದಿರಬೇಕು.
Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಯಮಾನುಸಾರವಾಗಿ ಹುದ್ದೆಗಳಿಗೆ ಅನುಗುಣವಾಗುವಂತೆ ವೇತನ ನಿಗದಿಪಡಿಸಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

To Download Official Notification

Comments

P Laxmana Jan. 6, 2024, 8:06 p.m.