ಐಟಿಐ ಲಿಮಿಟೆಡ್ ನೇಮಕಾತಿ 2025: ಸಲಹೆಗಾರರು ಮತ್ತು ಯುವ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (ITI Limited) ತನ್ನ ಅಧಿಕೃತ ಅಧಿಸೂಚನೆಯ ಮೂಲಕ 43 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಸಲಹೆಗಾರರು (Consultant) ಮತ್ತು ಯುವ ವೃತ್ತಿಪರರು (Young Professionals) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿ ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್‌ನ ವಿವಿಧ ಯೋಜನೆಗಳಿಗಾಗಿ ಆಗಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
ಇದು ಕೇವಲ ನೌಕರಿ ಮಾತ್ರವಲ್ಲ, ಸ್ಥಿರ ವೇತನ, ಪಿಂಚಣಿ ಸೌಲಭ್ಯಗಳು ಮತ್ತು ಉಜ್ವಲ ಭವಿಷ್ಯದ ಅವಕಾಶವಾಗಿದೆ. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಆಯ್ಕೆಯ ಪ್ರಕ್ರಿಯೆಯ ಕುರಿತು ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮ ಕನಸಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಿದ್ಧರಾಗಿ!
ಹುದ್ದೆಗಳ ವಿವರ :
ಸಲಹೆಗಾರ (Advisor) : 2
ಕನ್ಸಲ್ಟಂಟ್ (Consultant) : 7
ಅಸೋಸಿಯೇಟ್ ಕನ್ಸಲ್ಟಂಟ್ : 14
ಯುವ ವೃತ್ತಿಪರ (ಪದವೀಧರರು) : 5
ಯುವ ವೃತ್ತಿಪರ (ಟೆಕ್ನಿಷಿಯನ್) : 15
ವೇತನ ಶ್ರೇಣಿ :
ಸಲಹೆಗಾರ (Advisor) : 1,25,000/-
ಕನ್ಸಲ್ಟಂಟ್ (Consultant) : ₹75,000/-
ಅಸೋಸಿಯೇಟ್ ಕನ್ಸಲ್ಟಂಟ್ : ₹35,000/-
ಯುವ ವೃತ್ತಿಪರ (ಪದವೀಧರರು) : 60,000/-
ಯುವ ವೃತ್ತಿಪರ (ಟೆಕ್ನಿಷಿಯನ್) : 35,000/-
ಶೈಕ್ಷಣಿಕ ಅರ್ಹತೆ :
ಅಡ್ವೈಸರ್/ಕನ್ಸಲ್ಟಂಟ್/ಅಸೋಸಿಯೇಟ್ ಕನ್ಸಲ್ಟಂಟ್ ಹುದ್ದೆಗಳಿಗೆ : ITI ಲಿಮಿಟೆಡ್ ನ ನಿಯಮಾವಳಿಯ ಪ್ರಕಾರ
ಯುವ ವೃತ್ತಿಪರ (ಪದವೀಧರರು) ಹುದ್ದೆಗಳಿಗೆ : B.E ಅಥವಾ B.Tech
ಯುವ ವೃತ್ತಿಪರ (ಟೆಕ್ನಿಷಿಯನ್) ಹುದ್ದೆಗಳಿಗೆ : ಡಿಪ್ಲೊಮಾ
ಆಯ್ಕೆ ಪ್ರಕ್ರಿಯೆ :
ಕೌಶಲ್ಯ ಪರೀಕ್ಷೆ (Skill Test)
ಗುಂಪು ಚರ್ಚೆ (Group Discussion)
ವೈಯಕ್ತಿಕ ಸಂದರ್ಶನ (Interview)
ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
2. ಅರ್ಜಿ ಸಲ್ಲಿಸುವ ಮೊದಲು ಇಮೇಲ್ ಐಡಿ, ಮೊಬೈಲ್ ನಂಬರ್, ಗುರುತಿನ ದಾಖಲೆಗಳು, ಶಿಕ್ಷಣ ಪ್ರಮಾಣಪತ್ರ, ಫೋಟೋ ಇತ್ಯಾದಿಗಳನ್ನು ಸಿದ್ಧಪಡಿಸಿಕೊಳ್ಳಿ.
3. ಐಟಿಐ ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಲಿಂಕ್ ಮೂಲಕ ಫಾರ್ಮ್ ಭರ್ತಿ ಮಾಡಿ.
4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5. ಅರ್ಜಿ ಸಲ್ಲಿಸಿ ಮತ್ತು ಅಪ್ಲಿಕೇಶನ್ ನಂಬರ್ ಅನ್ನು ಭದ್ರಪಡಿಸಿಕೊಳ್ಳಿ.
ಪ್ರಮುಖ ದಿನಾಂಕಗಳು :
ಅರ್ಜಿ ಪ್ರಾರಂಭ ದಿನಾಂಕ : 11-ಜುಲೈ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-ಜುಲೈ-2025
- ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ಸರಕಾರಿ ಉದ್ಯೋಗದಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ITI ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
Comments