ಅಗ್ನಿಪಥ ಯೋಜನೆಯಡಿ ನೌಕಾಪಡೆಯಲ್ಲಿ ಅಗ್ನಿವೀರರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರ ಘೋಷಿಸಿದ್ದ ಅಗ್ನಿಪಥ ಯೋಜನೆಯಡಿ ಸೀನಿಯರ್ ಸೆಕೆಂಡರಿ ರಿಕ್ರೂಟ್(SSR) ಮತ್ತು ಮೆಟ್ರಿಕ್ ರಿಕ್ರೂಟ್(MR) ಅಗ್ನಿವೀರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ನೌಕಾಪಡೆಯಲ್ಲಿ ಅಗ್ನಿವೀರರ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅವಿವಾಹಿತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 27/05/2024ದೊಳಗಾಗಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳನ್ನು ನಾಲ್ಕು ವರ್ಷದ ಅವಧಿಯ ವರೆಗೆ ಆಯ್ಕೆ ಮಾಡಲಾಗುತ್ತದೆ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆಳಗಿನಂತೆ ಮಾಸಿಕ ಗೌರವಧನವನ್ನು ನೀಡಲಾಗುತ್ತದೆ.
ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments