ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಖಾಲಿ ಇರುವ 168 ಸಹಾಯಕ ಫೋರ್‌ಮನ್ (ಗಣಿ), ಸಹಾಯಕ ಫೋರ್‌ಮನ್ (ಲೋಹಶಾಸ್ತ್ರ), ಲ್ಯಾಬ್ ಸಹಾಯಕ, ಸಹಾಯಕ ಫೋರ್‌ಮ್ಯಾನ್ (ಭೂವಿಜ್ಞಾನ), ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್), ITI ಫಿಟ್ಟರ್ (ಗಣಿಗಾರಿಕೆ), ITI ಫಿಟ್ಟರ್ (ಲೋಹ) ಮತ್ತು ಸಹಾಯಕ ಫೋರ್‌ಮನ್ (ಸಿವಿಲ್) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 15/06/2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 168
ಸಹಾಯಕ ಫೋರ್‌ಮನ್ (ಗಣಿ) - 16
ಸಹಾಯಕ ಫೋರ್‌ಮನ್ (ಲೋಹಶಾಸ್ತ್ರ) - 7
ಲ್ಯಾಬ್ ಸಹಾಯಕ - 1
ಸಹಾಯಕ ಫೋರ್‌ಮ್ಯಾನ್ (ಭೂವಿಜ್ಞಾನ) - 3
ಸಹಾಯಕ ಫೋರ್‌ಮನ್ (ಡೈಮಂಡ್ ಡ್ರಿಲ್ಲಿಂಗ್/ಅಂಡರ್‌ಗ್ರೌಂಡ್) - 2
ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್) - 19
ITI ಫಿಟ್ಟರ್ (ಗಣಿಗಾರಿಕೆ) - 56
ITI ಫಿಟ್ಟರ್ (ಲೋಹ) - 26
ಐಟಿಐ ಎಲೆಕ್ಟ್ರಿಕಲ್ - 4
ಸಹಾಯಕ ಫೋರ್‌ಮನ್ (ಸಿವಿಲ್) - 1
ಸಹಾಯಕ ಫೋರ್‌ಮ್ಯಾನ್ (ಎಲೆಕ್ಟ್ರಿಕಲ್) - 1
ಭದ್ರತಾ ನಿರೀಕ್ಷಕ - 6
ITI ಫಿಟ್ಟರ್ (ಸಮೀಕ್ಷೆ) - 2
ಭದ್ರತಾ ಸಿಬ್ಬಂದಿ - 24
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ ITI, 12th, ಡಿಪ್ಲೊಮಾ, B.Sc, ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪಡೆದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಮೀಸಲಾತಿ ಅಭ್ಯರ್ಥಿಗಳು 300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ₹100/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು ಹಾಗೂ ಸಾಮಾನ್ಯ ಅಭ್ಯರ್ಥಿಗಳು 600/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 20,920/- ರೂ ಗಳ ವೆರೆಗೆ 48,020/- ರೂ ಗಳವರೆಗೆ ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments