ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC) ನೇಮಕಾತಿ 2025: ಸಹಾಯಕ ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ! ಕರ್ನಾಟಕದ ಉದ್ಯೋಗಿಯ ರಾಜ್ಯ ವಿಮಾ ನಿಗಮ (ESIC Karnataka) 2025 ರ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಒಟ್ಟು 07 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಇದು ನಿಮ್ಮ ಜೀವನವನ್ನೇ ಬದಲಾಯಿಸಬಹುದಾದ ಅವಕಾಶವಾಗಿದೆ.
ಈ ನೇಮಕಾತಿಯಡಿಯಲ್ಲಿ ಕರ್ನಾಟಕ ಪ್ರಾದೇಶಿಕ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ (ಸಿವಿಲ್ ಮತ್ತು ಎಲೆಕ್ಟ್ರಿಕಲ್) ಮತ್ತು ಕಿರಿಯ ಎಂಜಿನಿಯರ್ (ಸಿವಿಲ್ ಮತ್ತು ಎಲೆಕ್ಟ್ರಿಕಲ್) ಹುದ್ದೆಗಳನ್ನು ಒಪ್ಪಂದ ಆಧಾರದಲ್ಲಿ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉತ್ಸಾಹಿಗಳು ಮತ್ತು ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ವಯೋಮಿತಿ, ಉದ್ಯೋಗ ಪರಿಣಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಓದಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಲ್ಲಿ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರಿ ಸೇವೆಯಲ್ಲಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು2025ರ ಸೆಪ್ಟೆಂಬರ್ 15ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
📌ನೇಮಕಾತಿ ವಿವರಗಳು :
🏛️ಸಂಸ್ಥೆ ಹೆಸರು : ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC)
📍 ಉದ್ಯೋಗ ಸ್ಥಳ : ಕಲಬುರಗಿ, ಕರ್ನಾಟಕ
🧾 ಒಟ್ಟು ಹುದ್ದೆಗಳು : 7
👨💼ಹುದ್ದೆಗಳ ಹೆಸರು : ಸಹಾಯಕ ಮತ್ತು ಕಿರಿಯ ಎಂಜಿನಿಯರ್
📌ಹುದ್ದೆಗಳ ವಿವರ :
- ಸಹಾಯಕ ಎಂಜಿನಿಯರ್ (ಸಿವಿಲ್) – 01 ಹುದ್ದೆ
- ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) – 01 ಹುದ್ದೆ
- ಕಿರಿಯ ಎಂಜಿನಿಯರ್ (ಸಿವಿಲ್) – 04 ಹುದ್ದೆಗಳು
- ಕಿರಿಯ ಎಂಜಿನಿಯರ್ (ಎಲೆಕ್ಟ್ರಿಕಲ್) – 01 ಹುದ್ದೆ
📍ಉದ್ಯೋಗ ಸ್ಥಳ :
- ಸಹಾಯಕ ಎಂಜಿನಿಯರ್ (ಸಿವಿಲ್) – ESIC ಮಾದರಿ ಆಸ್ಪತ್ರೆ, ರಾಜಾಜಿನಗರ)
- ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) – (ಪ್ರಾದೇಶಿಕ ಕಚೇರಿ, ಬೆಂಗಳೂರು)
- ಕಿರಿಯ ಎಂಜಿನಿಯರ್ (ಸಿವಿಲ್) – (ರಾಜಾಜಿನಗರ, ಪೀನ್ಯಾ, ಗುಲ್ಬರ್ಗಾ ಸೇರಿದಂತೆ)
- ಕಿರಿಯ ಎಂಜಿನಿಯರ್ (ಎಲೆಕ್ಟ್ರಿಕಲ್) – (ESIC ಆಸ್ಪತ್ರೆ, ಪೀನ್ಯಾ)
🎓ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು.
1. ಸಹಾಯಕ ಎಂಜಿನಿಯರ್ (ಸಿವಿಲ್) - ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿ / ಡಿಪ್ಲೊಮಾ.
2. ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) - ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ / ಡಿಪ್ಲೊಮಾ.
3. ಜೂನಿಯರ್ ಎಂಜಿನಿಯರ್ (ಸಿವಿಲ್) - ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿ / ಡಿಪ್ಲೊಮಾ.
4. ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) - ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ / ಡಿಪ್ಲೊಮಾ.
🔹ಅನುಭವ : ರಾಜ್ಯ/ಕೇಂದ್ರ ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ ಅಥವಾ ಪಿಎಸ್‌ಯುಗಳಲ್ಲಿ ಇದೇ ಹುದ್ದೆಯಲ್ಲಿ ಕೆಲಸ ಮಾಡಿದ ನಿವೃತ್ತ ಎಂಜಿನಿಯರ್‌ಗಳಿಗೆ ಆದ್ಯತೆ. ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ.
🎂 ವಯೋಮಿತಿ:
ಅಭ್ಯರ್ಥಿಗಳು ಗರಿಷ್ಠ 64 ವರ್ಷ (15.09.2025 ರಂದು) ಗಳ ವಯೋಮಿತಿಯನ್ನು ಹೊಂದಿರಬೇಕು.
💰ವೇತನ:
- ಸಹಾಯಕ ಎಂಜಿನಿಯರ್: ₹45,000/- ಪ್ರತಿ ತಿಂಗಳು.
- ಕಿರಿಯ ಎಂಜಿನಿಯರ್: ₹33,630/- ಪ್ರತಿ ತಿಂಗಳು.
(ಪಿಂಚಣಿ ಹೊಂದಿರುವವರಿಗೆ ಸರ್ಕಾರದ ನಿಯಮಾನುಸಾರ ಲೆಕ್ಕ ಮಾಡಲಾಗುತ್ತದೆ)
📥ಆಯ್ಕೆ ವಿಧಾನ :
ಸಂದರ್ಶನದ ಮೂಲಕ ಮಾತ್ರ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.09.2025
- ಅರ್ಜಿಯನ್ನು ಹಸ್ತಾಂತರ / ಸ್ಪೀಡ್ ಪೋಸ್ಟ್ / ಇಮೇಲ್ ಮೂಲಕ ಕಳುಹಿಸಬೇಕು:
🔍ಇಮೇಲ್: pmd-ro.kar@esic.gov.in
🔍ವಿಳಾಸ:
ಕಾರ್ಯನಿರ್ವಹಣಾ ಎಂಜಿನಿಯರ್ (PMD),
ESIC ಪ್ರಾದೇಶಿಕ ಕಚೇರಿ,
ಟ್ಯಾಂಕ್ ಬಂಡ್ ರಸ್ತೆ, ಬಿನ್ನಿಪೇಟೆ, ಬೆಂಗಳೂರು – 560023.
✅ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
🔗 https://esic.gov.in/recruitments
Comments