Loading..!

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನೇಮಕಾತಿ 2025 – 300 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: SSLC
Published by: Bhagya R K | Date:Oct. 2, 2025
not found

ITI ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ, ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ 300 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ತಮ್ಮ ವೃತ್ತಿ ಜೀವನವನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ ನಲ್ಲಿ ಪ್ರಾರಂಭಿಸಬಹುದಾಗಿದೆ.


          ಈ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ ನಲ್ಲಿ ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ಟರ್ನರ್, ಯಂತ್ರಶಿಲ್ಪಿ, ಫೌಂಡ್ರಿಮ್ಯಾನ್ ಮತ್ತು ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿಯು ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ರಿಯಾಯಿತಿ ನೀಡಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಈ ನೇಮಕಾತಿಯು ITI ಪಾಸಾದ ಅಭ್ಯರ್ಥಿಗಳಿಗೆ ಮಹತ್ವದ ಅವಕಾಶವಾಗಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದವರಿಗೆ ಇದು ಉತ್ತಮ ಚಾನ್ಸ್ ಆಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ 03-ಅಕ್ಟೋಬರ್-2025ರೊಳಗೆ ಅರ್ಜಿ ಸಲ್ಲಿಸಬಹುದು.


      ಇದು ಕೇವಲ ನೌಕರಿ ಮಾತ್ರವಲ್ಲ, ಸ್ಥಿರ ವೇತನ, ಪಿಂಚಣಿ ಸೌಲಭ್ಯಗಳು ಮತ್ತು ಉಜ್ವಲ ಭವಿಷ್ಯದ ಅವಕಾಶವಾಗಿದೆ. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಆಯ್ಕೆಯ ಪ್ರಕ್ರಿಯೆಯ ಕುರಿತು ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮ ಕನಸಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಿದ್ಧರಾಗಿ! 


📌ಬಿಎಚ್‌ಇಎಲ್ ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
ಹುದ್ದೆಗಳ ಸಂಖ್ಯೆ: 300
ಉದ್ಯೋಗ ಸ್ಥಳ: ಹೈದರಾಬಾದ್ - ತೆಲಂಗಾಣ
ಹುದ್ದೆ ಹೆಸರು: ಟ್ರೇಡ್ ಅಪ್ರೆಂಟಿಸ್
ಸಂಬಳ: ತಿಂಗಳಿಗೆ ರೂ. 9,700 – 10,000/-

Application End Date:  Oct. 4, 2025
Selection Procedure:

SSC, KAS, PSI, FDA, SDA, RRB, PC ಮತ್ತು ವಿವಿಧ ಪರೀಕ್ಷೆಗಳ PDF ಕನ್ನಡದಲ್ಲಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.  
ಹುದ್ದೆಗಳ ವಿವರ
 
ಎಲೆಕ್ಟ್ರಿಷಿಯನ್ : 25
ಫಿಟ್ಟರ್ : 90
ಮಶಿನಿಸ್ಟ್ : 75
ಟರ್ನರ್ : 45
ವೆಲ್ಡರ್ : 40
ಕಾರ್ಪೆಂಟರ್ : 5
ಎಲೆಕ್ಟ್ರಾನಿಕ್ ಮೆಕಾನಿಕ್ : 10
ಫೌಂಡ್ರಿಮ್ಯಾನ್ : 10


ಅರ್ಹತೆಗಳು:
ಅಭ್ಯರ್ಥಿಗಳು 10ನೇ ತರಗತಿ ಹಾಗೂ ಐಟಿಐ (ITI) ಪಾಸಾಗಿರಬೇಕು.

ವಯೋಮಿತಿ (01-09-2025ರ ಪ್ರಕಾರ):
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 27 ವರ್ಷ


ವಯೋಮಿತಿ ಸಡಿಲಿಕೆ:
- OBC: 3 ವರ್ಷ
- SC/ST: 5 ವರ್ಷ
- PWD: 10 ವರ್ಷ


ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಆಫ್‌ಲೈನ್ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ವಿಳಾಸ : 
HR-Recruitment Section, 
BHEL, Hyderabad


ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 13-ಸೆಪ್ಟೆಂಬರ್-2025
ಅಂತಿಮ ದಿನಾಂಕ (ಆನ್‌ಲೈನ್/ಆಫ್‌ಲೈನ್): 03-ಅಕ್ಟೋಬರ್-2025
ಆಫ್‌ಲೈನ್ ಅರ್ಜಿ ಕಳುಹಿಸಲು ಕೊನೆಯ ದಿನಾಂಕ: 04-ಅಕ್ಟೋಬರ್-2025


👉 ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು BHEL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ.


ಇದು ಹೈದರಾಬಾದ್‌ನಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ತಾಂತ್ರಿಕ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.

To Download Official Notification
BHEL ನೇಮಕಾತಿ 2025,
ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು,
BHEL ನೇರ ಸಂದರ್ಶನ,
ಅಪ್ರೆಂಟಿಸ್ ಅರ್ಜಿ ಪ್ರಕ್ರಿಯೆ,
BHEL ಉದ್ಯೋಗಾವಕಾಶಗಳು,
ಅಪ್ರೆಂಟಿಸ್‌ಶಿಪ್ ಪ್ರಯೋಜನಗಳು,
BHEL ಅರ್ಹತಾ ಮಾನದಂಡಗಳು,
ಅಪ್ರೆಂಟಿಸ್‌ಶಿಪ್ ವಿದ್ಯಾರ್ಹತೆಗಳು,
BHEL ಮೀಸಲಾತಿ ವಿವರಗಳು

Comments