ಬಳ್ಳಾರಿ ಜಿಲ್ಲೆಯ ಶಿಕ್ಷಣ ಸಂಸ್ಥೆಯಲ್ಲಿ ಖಾಲಿಯಿರುವ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Yallamma G | Date:April 22, 2025
not found

ಮೊಳಕಾಲ್ಕೂರು ತಾಲೂಕಿನ ಚಿತ್ರದುರ್ಗ ಜಿಲ್ಲೆಯಲ್ಲಿರುವ ಶ್ರೀ ಸಿದ್ದೇಶ್ವರ ವಿದ್ಯಾ ಸಂಸ್ಥೆ (ರಿ) ಸಿದ್ದಾಪುರ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಪದವಿ ಪೂರ್ವ ಕಾಲೇಜ್‌ನಲ್ಲಿ ಖಾಲಿ ಇರುವ ಇತಿಹಾಸ ಉಪನ್ಯಾಸಕರು, ಅರ್ಥಶಾಸ್ತ್ರ ಉಪನ್ಯಾಸಕರು, ಸಮಾಜಶಾಸ್ತ್ರ ಉಪನ್ಯಾಸಕರು ಮತ್ತು ಇಂಗ್ಲೀಷ ಉಪನ್ಯಾಸಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.


ಹುದ್ದೆಗಳ ವಿವರ : 
1. ಇತಿಹಾಸ ಉಪನ್ಯಾಸಕರು : 1
2. ಅರ್ಥಶಾಸ್ತ್ರ ಉಪನ್ಯಾಸಕರು : 1
3. ಸಮಾಜಶಾಸ್ತ್ರ ಉಪನ್ಯಾಸಕರು : 1
4. ಇಂಗ್ಲಿಷ್ ಉಪನ್ಯಾಸಕರು : 1


ವಿದ್ಯಾರ್ಹತೆ : ಎಂ.ಎ.ಬಿ.ಎಡ್. 


ಇಚ್ಚೆಯುಳ್ಳ ಅಭ್ಯರ್ಥಿಗಳು ದಿನಾಂಕ: 11/05/2025 ರ ಒಳಗೆ ಅಂಚೆ ಕಚೇರಿಯ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ : 
ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ನೂತನ ಜಿಲ್ಲಾಡಳಿತ ಭವನ, 'ಎ' ಬ್ಲಾಕ್, ಮೊದಲನೇ ಮಹಡಿ, ಕೊಠಡಿ ಸಂಖ್ಯೆ 31, ಡಾ|| ರಾಜ್‌ ಕುಮಾರ ರಸ್ತೆ, ಬಳ್ಳಾರಿ.


ಅಭ್ಯರ್ಥಿಗಳು ಬಳ್ಳಾರಿ ಯಲ್ಲಿ ಅರ್ಜಿ ಸಲ್ಲಿಸಿ ಸ್ವೀಕೃತಿ ಅರ್ಜಿಯನ್ನು ಸಂದರ್ಶನ ಸಮಯದಲ್ಲಿ ಈ ಕಛೇರಿಗೆ ಸಲ್ಲಿಸತಕ್ಕದ್ದು. ಸಂದರ್ಶನವು ದಿನಾಂಕ: 12/05/2025 ರಂದು ಬೆಳಿಗ್ಗೆ 10:30 ರಿಂದ ಮದ್ಯಾಹ್ನ 2:00 ಗಂಟೆ ವರೆಗೆ ನಡೆಯಲಿದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗತಕ್ಕದ್ದು.
ಸಂದರ್ಶನ ನಡೆಯುವ ವಿಳಾಸ : 
ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ನೂತನ ಜಿಲ್ಲಾಡಳಿತ ಭವನ, 'ಎ' ಬ್ಲಾಕ್, ಮೊದಲನೇ ಮಹಡಿ, ಕೊಠಡಿ ಸಂಖ್ಯೆ 31, ಡಾ|| ರಾಜ್‌ ಕುಮಾರ ರಸ್ತೆ, ಬಳ್ಳಾರಿ.

Comments