Loading..!

ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree SSLC
Published by: Yallamma G | Date:July 27, 2024
not found

ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘ, ಮುಗಳಖೋಡ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಅನುದಾನಿತ ಬಾ.ನೀ.ಕೂಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮುಗಳಖೋಡದಲ್ಲಿ ಖಾಲಿ ಇರುವ ವೃತ್ತಿ ಶಿಕ್ಷಕರು, ಸಹಶಿಕ್ಷಕರು, ದೈಹಿಕ ಶಿಕ್ಷಕರು, ದ್ವಿತೀಯ ದರ್ಜೆ ಸಹಾಯಕರು, ಗ್ರಂಥಾಲಯ ಸಹಾಯಕರು, ಅಟೆಂಡರ್ ಮತ್ತು ಜವಾನ ಸೇರಿದಂತೆ ವಿವಿಧ ಹುದ್ದೆಗಳನ್ನು ತುಂಬಿಕೊಳ್ಳಲು ಮಾನ್ಯ ಉಚ್ಚ ನ್ಯಾಯಾಲಯ, ಕರ್ನಾಟಕ ಇವರ ಆದೇಶದ ಮೇರೆಗೆ ದಿನಾಂಕ : 08/12/2023 ರ ಪ್ರಕಾರ ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 


ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆಯನ್ನು ಈ ಕೆಳೆಗೆ ನೀಡಲಾಗಿದೆ.


 

No. of posts:  10
Application Start Date:  July 27, 2024
Application End Date:  Aug. 18, 2024
Work Location:  ಬೆಳಗಾವಿ ಜಿಲ್ಲಾ
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆನೇರ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. 


ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 18/08/2024.
ಅರ್ಜಿ ಸಲ್ಲಿಸುವ ವಿಳಾಸ : 
ಮಾನ್ಯ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, 
ಚಿಕ್ಕೋಡಿ.   


ಹುದ್ದೆಗಳ ವಿವರ : 10 
01. ವೃತ್ತಿ ಶಿಕ್ಷಕರು : 1
02. ಸಹಶಿಕ್ಷಕರು (ಹಿಂದಿ ಭಾಷೆ) : 1
03. ದೈಹಿಕ ಶಿಕ್ಷಕರು : 1
04. ಸಹಶಿಕ್ಷಕರು ವಿಜ್ಞಾನ (ಪಿಸಿಎಂ) : 1
05. ದ್ವಿತೀಯ ದರ್ಜೆ ಸಹಾಯಕರು : 1
06. ಗ್ರಂಥಪಾಲಕ/ ಸಹಾಯಕರು : 1
07. ಅಟೆಂಡರ : 1
08. ಸೇವಕ/ಜವಾನ : 1
09. ಸೇವಕ/ಕಾವಲುಗಾರ : 1
10. ಸೇವಕ/ಶುಚಿಗಾರ : 1

Qualification: ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ MA, BPED, B.Sc, B.ed, PUC, SSLC ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ತಾತ್ಕಾಲಿಕವಾಗಿ ಸೇವೆಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
Fee: ಬೋಧಕ ಹುದ್ದೆಯ ಅಭ್ಯರ್ಥಿಗಳು ರೂ.2000/- ಹಾಗೂ ಬೋಧಕೇತರ ಹುದ್ದೆಯ ಅಭ್ಯರ್ಥಿಗಳು ರೂ.1000/- ಗಳ ಬ್ಯಾಂಕ ಹುಂಡಿಯನ್ನು ಚೇರಮನ್ನರು ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘ, ಮುಗಳಖೋಡ ಇವರ ಹೆಸರಿನಲ್ಲಿ ಪಡೆದು ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಅದರ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಚಿಕ್ಕೋಡಿ ಇವರಿಗೆ ಸಲ್ಲಿಸಬೇಕು.
Pay Scale:

- ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ನೇಮಕಾತಿ ನಿಯಮಾನುಸಾರ ಮಾಸಿಕವಾಗಿ ವೇತನ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

To Download Official Notification

Comments