Loading..!

ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA)ದಲ್ಲಿ ಖಾಲಿ ಇರುವ ಆಡಳಿತ ಸಹಾಯಕರು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:Nov. 20, 2025
Image not found

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು (DLSA) ಕಚೇರಿಯಲ್ಲಿ ಖಾಲಿಯಿರುವ ಆಡಳಿತ ಸಹಾಯಕ (ತಾತ್ಕಾಲಿಕ/ಗುತ್ತಿಗೆ ಆಧಾರಿತ) ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಉತ್ತಮ ಟೈಪಿಂಗ್ ಕೌಶಲ್ಯ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವ ಪದವೀಧರರಿಗೆ ತುಮಕೂರು ಜಿಲ್ಲಾ ನ್ಯಾಯಾಲಯದ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಉತ್ತಮ ಅವಕಾಶ ಇದಾಗಿದೆ.

📅 ಪ್ರಮುಖ ದಿನಾಂಕಗಳು (Important Dates)
* ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 11.11.2025 
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.11.2025 ಸಂಜೆ 5.00 ಘಂಟೆಯವರೆಗೆ 
* ಹುದ್ದೆ ಖಾಲಿಯಾದ ದಿನಾಂಕ (ಪ್ರಾರಂಭಿಕ): 31.10.2025 


📋 ಹುದ್ದೆಯ ವಿವರಗಳು (Vacancy Details)
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಛೇರಿ, ತುಮಕೂರು ಇಲ್ಲಿ ನೇಮಕಾತಿ ನಡೆಯುತ್ತಿದೆ. 
ಕ್ರಮ ಸಂಖ್ಯೆ | ಹುದ್ದೆ ಹೆಸರು                        | ಹುದ್ದೆಗಳ ಸಂಖ್ಯೆ |
01 |         ಆಡಳಿತ ಸಹಾಯಕ (ತಾತ್ಕಾಲಿಕ/ಗುತ್ತಿಗೆ)      | 01 


ಗಮನಿಸಿ: ಈ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಕೇವಲ 06 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸೀಮಿತವಾಗಿರುತ್ತದೆ. 


💰 ವೇತನ ಮತ್ತು ಅರ್ಹತೆಗಳು (Salary and Eligibility)ವೇತನ ವಿವರ (Salary) ಹುದ್ದೆಗೆ ಮಾಹೆಯಾನ ₹18,935/- (ಕನಿಷ್ಠ ವೇತನ ಕಾಯ್ದೆ ಅಡಿಯಲ್ಲಿ) ನಿಗದಿಪಡಿಸಲಾಗಿದೆ.

📝 ಅರ್ಜಿ ಸಲ್ಲಿಸುವ ವಿಧಾನ (How to Apply)
1. ಅರ್ಜಿ ನಮೂನೆ ಪಡೆಯುವುದು: 
    * ಅರ್ಜಿಯ ನಮೂನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನೆಲಮಹಡಿ, ಹೊಸ ನ್ಯಾಯಾಲಯಗಳ ಸಂಕೀರ್ಣ, ತುಮಕೂರು ಇಲ್ಲಿ ಖುದ್ದಾಗಿ (ರಜೆ ದಿನಗಳನ್ನು ಹೊರತುಪಡಿಸಿ) ದಿನಾಂಕ 11.11.2025 ರಿಂದ ಬೆಳಗ್ಗೆ 10.30 ರಿಂದ ಸಂಜೆ 5.00 ಘಂಟೆ ಸಮಯದಲ್ಲಿ ಪಡೆದುಕೊಳ್ಳಬಹುದು.

    * ಅಥವಾ, ತುಮಕೂರು ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್ ಮೂಲಕವೂ ಪಡೆದುಕೊಳ್ಳಬಹುದು.

2. ಅರ್ಜಿ ಸಲ್ಲಿಸಬೇಕಾದ ವಿಳಾಸ:

    ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:



ವಿದ್ಯಾರ್ಹತೆ : 
- ಯಾವುದೇ ಪದವಿ
- ಮೂಲಪದ ಸಂಸ್ಕರಣ ಕೌಶಲ್ಯಗಳು ಮತ್ತು ಕಾರ್ಯ ನಿರ್ವಹಿಸುವ ಸಾಮರ್ಥ್ಯ,
- ಕಂಪ್ಯೂಟರ್ ಮತ್ತು ಡೇಟಾವನ್ನು ಫೀಡ್ ಮಾಡುವ ಕೌಶಲ್ಯಗಳು,
- ಅರ್ಜಿಯ ಸರಿಯಾದ ಸೆಟ್ಟಿಂಗ್ ನೊಂದಿಗೆ ಉತ್ತಮ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ವೇಗ ನುಡಿ ಬೆರಳಚ್ಚು (ಗಣಕಯಂತ್ರದಲ್ಲಿ),
- ಡಿಕ್ಷೇಷನ್ ತೆಗೆದುಕೊಳ್ಳುವ ಮತ್ತು ನ್ಯಾಯಾಲಯ ಗಳಲ್ಲಿ ಪ್ರಸ್ತುತಿಗಾಗಿ ಕಡತಗಳನ್ನು ಸಿದ್ಧಪಡಿಸುವ ಸಾಮಾರ್ಥ್ಯ, ಕಡತ ನಿರ್ವಹಣೆ ಪ್ರಕ್ರಿಯೆ ಜ್ಞಾನ.


ಅರ್ಜಿ ಸಲ್ಲಿಸಬೇಕಾದ ವಿಳಾಸ :
ಸದಸ್ಯ ಕಾರ್ಯದರ್ಶಿಗಳು, 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ 
ಆಡಳಿತ ಸಹಾಯಕ ಹುದ್ದೆಯ ನೇಮಕಾತಿ ಸಮಿತಿ, 
ನೆಲ ಮಹಡಿ, ಹೊಸ ನ್ಯಾ ಯಾಲಯಗಳ ಸಂಕೀರ್ಣ, 
ತುಮಕೂರು ಜಿಲ್ಲೆ, ತುಮಕೂರು.
 ಅರ್ಜಿಯ ನಮೂನೆಯನ್ನು ಪಡೆಯುವ ವಿವರ :  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನೆಲಮಹಡಿ, ಹೊಸ ನ್ಯಾಯಾಲಯಗಳ ಸಂಕೀರ್ಣ, ತುಮಕೂರು ನಲ್ಲಿ ಖುದ್ದಾಗಿ (ರಜೆ ದಿನಗಳನ್ನು ಹೊರತುಪಡಿಸಿ) ದಿನಾಂಕ: 11.11.2025 ಬೆಳಗ್ಗೆ 10.30 ರಿಂದ ಸಂಜೆ 5.00 ಘಂಟೆ ಸಮಯದಲ್ಲಿ ಅಥವಾ ತುಮಕೂರು ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್ ರ ಮೂಲಕ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 
ದೂರವಾಣಿ ಸಂಖ್ಯೆ: 0816-2255133 
ಇ-ವೋಲ್ ಪತ್ರ ವ್ಯವಹಾರಕ್ಕಾಗಿ E-mail -dlsatumkur1@gmail.com.
ಷರತ್ತುಗಳು : 
1. ಹುದ್ದೆಯ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು 06 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಾತ್ರ ಸೀಮಿತವಾಗಿರುತ್ತದೆ. ಕರ್ತವ್ಯಕ್ಕೆ ವರದಿ ಮಾಡಿಕೊಂಡ ನಂತರ ಅಶಿಸ್ತು, ದುರ್ನಡತೆ, ಆಯ್ಕೆ ಸಮಿತಿ ಗಮನಕ್ಕೆ ಬಂದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುವುದು ಹಾಗೂ ಅಭ್ಯರ್ಥಿಯು ಯಾವುದೇ ತರಹದ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಆಯ್ಕೆ ಸಮಿತಿಗೆ ಮಾಹಿತಿ ಇದ್ದಲ್ಲಿ ಅಂತಹ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗುವುದು.
2. ಶೈಕ್ಷಣಿಕ ಅರ್ಹತೆಯ, ಕಂಪ್ಯೂಟರ್ ಜ್ಞಾನದ ದಾಖಲೆ ಪ್ರತಿಗಳು, ಆಧಾರ್ ಕಾರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿಗಳನ್ನು ಅರ್ಜಿಗೆ ಲಗತ್ತಿಸುವುದು. ನೇಮಕಾತಿ ಪ್ರಾಧಿಕಾರ ಕೋರಿದಾಗ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು, ಅಪೂರ್ಣ ಅರ್ಜಿಯನ್ನು ತಿರಸ್ಕರಿಸಲಾಗುವುದು.
3. ಆಡಳಿತ ಸಹಾಯಕ ಹುದ್ದೆಯ ನೇಮಕಾತಿ ಸಂಪೂರ್ಣವಾಗಿ 06 ತಿಂಗಳ ಅವಧಿಗೆ ತಾತ್ಕಾಲಿಕ ಗುತ್ತಿಗೆ ಆಧಾರದ ಹುದ್ದೆಯಾಗಿದ್ದು, ರಾಜ್ಯ ಸರ್ಕಾರವು ನಿಗದಿಪಡಿಸಿರುವ ಕನಿಷ್ಠ ವೇತನ ಕಾಯ್ದೆ ಅಡಿಯಲ್ಲಿ ಮಾಹೆಯಾನ ರೂ.18,935/-ಗಳ ವೇತನವನ್ನು ಹುದ್ದೆಗೆ ನಿಗದಿಪಡಿಸಲಾಗಿರುತ್ತದೆ.
4. ಹುದ್ದೆಯ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು ಅವರ ವಿವೇಚನೆಗೆ ಒಳಪಟ್ಟಿರುತ್ತದೆ. 

Comments