ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನಲ್ಲಿ (ಎಸ್ ಐಡಿಬಿಐ) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:April 24, 2025
Image not found

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ ಐಡಿಬಿಐ) ನಲ್ಲಿ ಮೂಲಕ ಖಾಲಿ ಇರುವ 6 ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.


ಹುದ್ದೆಗಳ ವಿವರ : 
Associate Manager - Environment and Social Safeguard : 01
Associate Manager – Monitoring and Evaluation : 01
Associate Manager - Energy : 02
Associate Manager - Climate : 02 


ವಿದ್ಯಾರ್ಹತೆ : 
- ಅಸೋಸಿಯೇಟ್ ಮ್ಯಾನೇಜರ್ (ಪರಿಸರ ಮತ್ತು ಸಾಮಾಜಿಕ ಸುರಕ್ಷತೆ)
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಅಥವಾ ಸಮಾನ ಮಟ್ಟದ ಶಿಕ್ಷಣ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. ಕನಿಷ್ಠ 3 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.
- ಅಸೋಸಿಯೇಟ್ ಮ್ಯಾನೇಜರ್ (ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ) - ಎಂಜಿನಿಯರಿಂಗ್/ ತಂತ್ರಜ್ಞಾನ, ಅರ್ಥಶಾಸ್ತ್ರ, ಹವಾಮಾನ/ ಪರಿಸರ ವಿಜ್ಞಾನ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 
- ಅಸೋಸಿಯೇಟ್ ಮ್ಯಾನೇಜರ್ (ಇಂಧನ) - ವಿದ್ಯುತ್/ ಇಂಧನ/ ಯಾಂತ್ರಿಕ ಎಂಜಿನಿಯರಿಂಗ್/ ಇಂಧನ ಅರ್ಥಶಾಸ್ತ್ರ/ ಯೋಜನೆ ಮತ್ತು ನೀತಿ ಅಥವಾ ವ್ಯವಹಾರ ಅಥವಾ ಸಂಬಂಧಿತ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪಡೆದಿರಬೇಕು. 
- ಅಸೋಸಿಯೇಟ್ ಮ್ಯಾನೇಜರ್ (ಹವಾಮಾನ) - ಯಾವುದೇ ವಿಭಾಗದಲ್ಲಿ ಪದವಿ. ಪರಿಸರ, ಇಂಧನ, ಹವಾಮಾನ ಬದಲಾವಣೆ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 


ವಯೋಮಿತಿ : 45 ವರ್ಷ 


ಅರ್ಜಿ ಸಲ್ಲಿಸುವ ವಿಧಾನ : 
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 14/05/2025 ರೊಳಗಾಗಿ ಈ ಕೆಳಗಿನ ಇ-ಮೇಲ್ ವಿಳಾಸದ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಇ-ಮೇಲ್ ವಿಳಾಸ : 
• gcfv@sidbi.in
• neerajverma@sidbi.in

Comments