ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪೋಲೀಸ್ ಸಬ್-ಇನ್ಸ್ಪೆಕ್ಟರ್ (PSI)) ಹುದ್ದೆಗಳ ನೇಮಕಾತಿಗಾಗಿ SC ಅಭ್ಯರ್ಥಿಗಳಿಗೆ ಮಾತ್ರ ಸಮಾಜ ಕಲ್ಯಾಣ ವತಿಯಿಂದ ಉಚಿತ ತರಬೇತಿ ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯ ವಿವರ : ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಉತ್ತರ (ಬೆಳಗಾವಿ ಮತ್ತು ಕಲಬುರಗಿ) ಹಾಗೂ ದಕ್ಷಿಣ (ಬೆಂಗಳೂರು ಮತ್ತು ಮೈಸೂರು) ವಿಭಾಗಗಳಲ್ಲಿ ಪ್ರತ್ಯೇಕವಾಗಿ 90 ದಿನಗಳ Police Sub-Inspector ಪರೀಕ್ಷಾ ಪೂರ್ವ ವಸತಿಯುತ ತರಬೇತಿ ನೀಡಲಾಗುತ್ತದೆ.
ಈ ಕೆಳಗಿನ ತರಬೇತಿಗಳು ಒಳಗೊಂಡಿದೆ:
1. ದೈಹಿಕ ಚಟುವಟಿಕೆಗಳು - ಓಟ, ಎತ್ತರ ಜಿಗಿತ, ಶಾಟ್‌ಪುಟ್
2. ಡ್ರಿಲ್
3. ತರಗತಿಯ ತರಬೇತಿ
4. ದಿನಕ್ಕೆ 3 ಬಾರಿ ಊಟದ ವ್ಯವಸ್ಥೆ
ವಯಸ್ಸು :
ಕನಿಷ್ಠ 21 ವರ್ಷ
ಗರಿಷ್ಠ 31 ವರ್ಷ
ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಯು.ಜಿ.ಸಿ. ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಉತೀರ್ಣರಾಗಿರಬೇಕು.
ಅಭ್ಯರ್ಥಿಯ ಸಾಮಾನ್ಯ ಅರ್ಹತೆ
1. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ. ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
3. ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 5.00 ಲಕ್ಷ ಮೀರಿರಬಾರದು
4. ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು.
ತರಬೇತಿಯ ನಿಯಮಗಳು ಮತ್ತು ಷರತ್ತುಗಳು:
=> ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯು ಆಯ್ಕೆ ಮಾಡಿದ ವಿಭಾಗದ ಪ್ರಕಾರ ತರಬೇತಿ ವಿಭಾಗವನ್ನು ನಿಯೋಜಿಸಲಾಗುತ್ತದೆ.
=> ಅಭ್ಯರ್ಥಿಯ ತರಬೇತಿ ವಿಭಾಗವನ್ನು ಬದಲಾಯಿಸವ ಹಕ್ಕುಗಳನ್ನು ಇಲಾಖೆಯು ಹೊಂದಿರುತ್ತದೆ.
=> ಅಭ್ಯರ್ಥಿಯು ತರಬೇತಿಯ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕು ಮತ್ತು ತರಬೇತಿಯ ವೇಳಾಪಟ್ಟಿಯನ್ನು ನಿರ್ವಹಿಸಬೇಕು. ತರಬೇತಿಯ ನಿಯಮಗಳನ್ನು ಪಾಲಿಸದಿದ್ದರೆ ಅಭ್ಯರ್ಥಿಯನ್ನು ಅನರ್ಹಗೊಳಿಸುವ ಹಕ್ಕನ್ನು ಇಲಾಖೆಯು ಹೊಂದಿರುತ್ತದೆ.
=> ತರಬೇತಿ ಸಂಸ್ಥೆ, ಅಧ್ಯಾಪಕ ಸದಸ್ಯರು ಅಥವಾ ಬೋಧಕರ ಕಡೆಗೆ ಅವಿಧೇಯತೆ ಅಥವಾ ದುರ್ನಡತೆ ಪ್ರದರ್ಶಿಸುವ ಯಾವುದೇ ಅಭ್ಯರ್ಥಿಯನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ.
=> ಅಭ್ಯರ್ಥಿಯು 90 ದಿನಗಳ ಪೂರ್ಣ ತರಬೇತಿಯನ್ನು ಪೂರ್ಣಗೊಳಿಸಬೇಕು ಹಾಗೂ ತರಬೇತಿ ಆವರಣದಿಂದ ಹೊರಗೆ ಹೋಗಲು ಅವಕಾಶವಿರುದಿಲ್ಲ.
=> ತರಬೇತಿ ಅವಧಿಯಲ್ಲಿ ಯಾವುದೇ ಗಾಯಗಳು ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ತರಬೇತಿ ಸಂಸ್ಥೆ ಅಥವಾ ಇಲಾಖೆಯು ಜವಾಬ್ದಾರರಾಗಿರುವುದಿಲ್ಲ.
Comments