Loading..!

ನಿಮ್ಹಾನ್ಸ್ (NIMHANS) ನೇಮಕಾತಿ 2025: ಕ್ಷೇತ್ರ ಸಂಪರ್ಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:Aug. 30, 2025
Image not found

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) 2025ನೇ ಸಾಲಿನಲ್ಲಿ ಕ್ಷೇತ್ರ ಸಂಪರ್ಕ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 05 ಹುದ್ದೆಗಳನ್ನು ಭರ್ತಿ ಮಾಡಲು ಸಂಸ್ಥೆಯು ನಿರ್ಧರಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


ಹುದ್ದೆಯ ವಿವರಗಳು :
ಹುದ್ದೆಯ ಹೆಸರು: ಕ್ಷೇತ್ರ ಸಂಪರ್ಕ ಅಧಿಕಾರಿ
ಒಟ್ಟು ಹುದ್ದೆಗಳು: 05
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಅಧಿಕೃತ ವೆಬ್‌ಸೈಟ್: https://www.nimhans.ac.in/


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 25-08-2025
ನೇರ ಸಂದರ್ಶನ ದಿನಾಂಕ: 08-09-2025


ಶೈಕ್ಷಣಿಕ ಅರ್ಹತೆ : 
NIMHANS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ, MBBS, MPH, MD, MSW, M.Phil, PSW, Ph.D ಪೂರ್ಣಗೊಳಿಸಿರಬೇಕು .


ವಯೋಮಿತಿ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 40 ವರ್ಷಗಳು (01-07-2025ರ ಪ್ರಕಾರ) ವಯೋಮಿತಿಯನ್ನು ಹೊಂದಿರಬೇಕು.


ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ₹30,000/- ರಿಂದ ₹40,000/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.


ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.


ಆಯ್ಕೆ ವಿಧಾನ :
- ನೇರ ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.nimhans.ac.in/
- NIMHANS ವಿಭಾಗದಲ್ಲಿ ಕ್ಷೇತ್ರ ಸಂಪರ್ಕ ಅಧಿಕಾರಿ ಹುದ್ದೆಯ ಅಧಿಸೂಚನೆಯನ್ನು ಓದಿ.
- ಅರ್ಹತೆ ಪರಿಶೀಲಿಸಿ, ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಅರ್ಜಿ ಸಲ್ಲಿಸಿ.
- ಅರ್ಜಿಯ ಪ್ರತಿ ಮುದ್ರಿಸಿ, ಸಂದರ್ಶನಕ್ಕೆ ಹಾಜರಾಗುವಾಗ ತೆಗೆದುಕೊಂಡು ಹೋಗಿ.


ಸಂದರ್ಶನದ ವಿಳಾಸ:
Lecture Hall-1, 1st Floor, 
adjacent to the Department of Neurophysiology, 
Old Administrative Building NIMHANS, 
Bengaluru – 560 029 


ಸರ್ಕಾರಿ ಹುದ್ದೆಗೆ ಆಸಕ್ತರಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಸಮಯಮಿತಿ ತಪ್ಪಿಸದೇ ಅರ್ಜಿ ಸಲ್ಲಿಸಿ ಮತ್ತು ಸಂದರ್ಶನಕ್ಕೆ ಹಾಜರಾಗಲು ಅಗತ್ಯ ಸಿದ್ಧತೆ ಮಾಡಿಕೊಂಡಿರಲಿ.

Comments