Loading..!

ನಿಮ್ಹಾನ್ಸ್ ನೇಮಕಾತಿ 2025: ಸೀನಿಯರ್ ರೆಸಿಡೆಂಟ್ ಹುದ್ದೆಗೆ ಸಂದರ್ಶನ ಮೂಲಕ ಆಯ್ಕೆ
Published by: Bhagya R K | Date:Aug. 28, 2025
Image not found

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS) ಸಂಸ್ಥೆ 01 ಸೀನಿಯರ್ ರೆಸಿಡೆಂಟ್ ಹುದ್ದೆ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಪ್ರಸಿದ್ಧ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶ.


ಆಸಕ್ತ ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 03ರಂದು ಬೆಳಗ್ಗೆ 09:00 ಗಂಟೆಗೆ ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಹಾಜರಾಗಬಹುದು.


ಹುದ್ದೆಯ ವಿವರಗಳು :
ಸಂಸ್ಥೆ ಹೆಸರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS)
ಹುದ್ದೆ ಹೆಸರು: ಸೀನಿಯರ್ ರೆಸಿಡೆಂಟ್
ಒಟ್ಟು ಹುದ್ದೆಗಳು: 01
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ


ಅರ್ಹತೆಗಳು :
- NIMHANS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ M.D, DNB ಪೂರ್ಣಗೊಳಿಸಿರಬೇಕು.
- ಪದವಿ MCI/NMC ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜಿನಿಂದ ಇರಬೇಕು.


ವಯೋಮಿತಿ :
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 37 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.


ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ 67,700/- ರೂ ಗಳಿಂದ ₹2,08,700 /- ರೂ ಗಳ ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.


ಆಯ್ಕೆ ವಿಧಾನ:
- ಅಭ್ಯರ್ಥಿಗಳನ್ನು ವಾಕ್-ಇನ್ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.


ಸಂದರ್ಶನದ ವಿಳಾಸ ಮತ್ತು ದಿನಾಂಕ :
- ಸಂದರ್ಶನ ಸ್ಥಳ : ಸೆಮಿನಾರ್ ಹಾಲ್, 1ನೇ ಮಹಡಿ, ನಿರ್ದೇಶಕರ ಕಚೇರಿ, NIMHANS, ಬೆಂಗಳೂರು – 560029
- ಸಂದರ್ಶನ ದಿನಾಂಕ : 03-ಸೆಪ್ಟೆಂಬರ್-2025
- ಸಂದರ್ಶನ ಸಮಯ : ಬೆಳಗ್ಗೆ 09:00


ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಹಾಗೂ ಸಂಪೂರ್ಣ ಅಧಿಸೂಚನೆಗಾಗಿ ನಿಮ್ಹಾನ್ಸ್ ಅಧಿಕೃತ ವೆಬ್‌ಸೈಟ್ nimhans.ac.in ಗೆ ಭೇಟಿ ನೀಡಬೇಕು.


ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ! ವೈದ್ಯಕೀಯ ಕ್ಷೇತ್ರದಲ್ಲಿ ಬಯಸುವವರಿಗೆ ಇದು ಉತ್ತಮ ಸರ್ಕಾರಿ ಹುದ್ದೆಯ ಅವಕಾಶ.

Comments