Loading..!

KPTCL ನೇಮಕಾತಿ 2025: ಕಿರಿಯ ಸ್ಟೇಷನ್ ಪರಿಚಾರಕ ಹಾಗೂ ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ
Published by: Bhagya R K | Date:Aug. 30, 2025
not found

 ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತೊಂದು ಮಹತ್ವದ ಹಂತವನ್ನು ಮುಗಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ಅಭ್ಯರ್ಥಿಗಳು ಗಮನಿಸಿ, 


ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ದಲ್ಲಿನಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ 14/10/2024 ರಂದು ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದೀಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವು ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ) ಮತ್ತು ಕಿರಿಯ ಪವರ್‌ಮ್ಯಾನ್ (ಎನ್.ಕೆ.ಕೆ) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಟ್-ಆಫ್ ಅಂಕಗಳೊಂದಿಗೆ ಬಿಡುಗಡೆ ಮಾಡಲಾಗಿದೆ.


ಅಧಿಸೂಚನೆಯ ಪ್ರಕಾರ, ಎಸ್.ಎಸ್.ಎಲ್.ಸಿ (10ನೇ ತರಗತಿ) ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಜೇಷ್ಠತೆಯ ಆಧಾರದ ಮೇಲೆ, 2025ರ ಮೇ 05ರಿಂದ ಮೇ 08ರ ವರೆಗೆ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಅಭ್ಯರ್ಥಿಗಳ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ 2025ರ ಆಗಸ್ಟ್ 06ರಂದು ಅಂತಿಮ ಆಯ್ಕೆ ಪಟ್ಟಿ ಕಟ್-ಆಫ್ ಅಂಕಗಳೊಂದಿಗೆ ಪ್ರಕಟಿಸಲಾಗಿದೆ.


ಬ್ಯಾಕ್‌ಲಾಗ್ ಹುದ್ದೆಗಳ ಮಾಹಿತಿ : 
- ಅರ್ಹ ಅಭ್ಯರ್ಥಿಗಳ ಕೊರತೆಯಿಂದಾಗಿ ಕೆಲವು ಹುದ್ದೆಗಳು ಭರ್ತಿಯಾಗದೇ ಉಳಿದಿದ್ದು, ಅವುಗಳನ್ನು ನಿಯಮಾನುಸಾರ ಬ್ಯಾಕ್‌ಲಾಗ್ ಹುದ್ದೆಗಳೆಂದು ಪರಿಗಣಿಸಲಾಗಿದೆ. ಈ ಹುದ್ದೆಗಳ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ.


ಮುಖ್ಯ ಸೂಚನೆ :
- ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯನ್ನು ಕವಿಪ್ರನಿನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು:
https://kptcl.karnataka.gov.in/Recruitment


✅ಸೂಚನೆ: ಇಂತಹ ನವೀಕೃತ ಸರ್ಕಾರಿ ಉದ್ಯೋಗ ಮತ್ತು ನೇಮಕಾತಿ ಮಾಹಿತಿಗಾಗಿ ನಮ್ಮ ಚಾನೆಲ್‌ಗಳನ್ನು ಹಿಂಬಾಲಿಸಿ.

Comments