Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ Group-C ವೃಂದದ ಹುದ್ದೆಗಳ ಪರೀಕ್ಷೆಯ ದಿನಾಂಕಗಳ ಪಟ್ಟಿ ಇದೀಗ ಪ್ರಕಟ
Published by: Yallamma G | Date:June 17, 2025
Image not found

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ಇಲಾಖೆಯಗಳ Group-C ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ. ಇದೀಗ ಇಲಾಖೆಯು ತನ್ನ ಜಾಲತಾಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲು ನಿಗದಿಪಡಿಸಲಾದ ಸಂಭವನೀಯ ದಿನಾಂಕಗಳ ವಿವರಗಳ ಪಟ್ಟಿಯನ್ನು ಪ್ರಕಟಿಸಿದೆ. 


  ಪದವಿ ಮಟ್ಟದ ವಿವಿಧ ಇಲಾಖೆಗಳಲ್ಲಿನ 'ಸಿ' 60 ಉಳಿಕೆ ಮೂಲವೃಂದದ ಹುದ್ದೆಗಳಿಗೆ ಜು.12ರಂದು ಕನ್ನಡ ಭಾಷಾ 3 ಪರೀಕ್ಷೆ ಹಾಗೂ 13ರಂದು ಸಾಮಾನ್ಯ ಅಂತೆಯೇ ಹೈದರಾಬಾದ್ ಕರ್ನಾಟಕ ವೃಂದದ 16 ಹುದ್ದೆಗಳಿಗೆ ಸೆ.2 ಹಾಗೂ 3ರಂದು ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. ಪದವಿ ಪೂರ್ವ ವಿದ್ಯಾರ್ಹತೆಯ ಗ್ರೂಪ್ ಸಿ ವೃಂದದ 97 ಹುದ್ದೆಗಳಿಗೆ ಸೆ.18 ಹಾಗೂ 19ರಂದು ಪರೀಕ್ಷೆ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಡಾ. ಆರ್. ವಿಶಾಲ್ ತಿಳಿಸಿದ್ದಾರೆ.

* ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.

Comments