ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ(KLC)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಇದೀಗ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯವು ಅಭ್ಯರ್ಥಿಗಳ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ನಲ್ಲಿ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ(KLC)ವು ಸೀನಿಯರ್ ಪ್ರೋಗ್ರಾಮರ್ , ಜೂನಿಯರ್ ಪ್ರೋಗ್ರಾಮರ್, ಜೂನಿಯರ್ ಕನ್ಸೋಲ್ ಆಪರೇಟರ್, ಕಂಪ್ಯೂಟರ್ ಆಪರೇಟರ್, ಸಹಾಯಕರು ಮತ್ತು ಮತ್ತು ಕಿರಿಯ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿಯ ಎಲ್ಲ ಹಂತಗಳನ್ನು ಪೂರ್ಣಗೊಳಿಸಿ ಇದೀಗ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ(KLC)ವು ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮಗಳು, 2021ರ ನಿಯಮ 6(ii)ರ ರೀತ್ಯಾ ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶವನ್ನು ಹೊರಡಿಸಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಯ್ಕೆಪಟ್ಟಿಯಲ್ಲಿ ಪ್ರಕಟಿಸಲಾದ ಹುದ್ದೆಗಳ ವಿವರ :
=> ಸೀನಿಯರ್ ಪ್ರೋಗ್ರಾಮರ್
=> ಜೂನಿಯರ್ ಪ್ರೋಗ್ರಾಮರ್
=> ಜೂನಿಯರ್ ಕನ್ಸೋಲ್ ಆಪರೇಟರ್
=> ಕಂಪ್ಯೂಟರ್ ಆಪರೇಟರ್
=> ಸಹಾಯಕರು
=> ಕಿರಿಯ ಸಹಾಯಕರು
=> ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು
ಮೇಲಿನ ನೇಮಕಾತಿ ಆದೇಶವು ಈ ಕೆಳಗೆ ನಮೂದಿಸಿರುವ ಷರತ್ತಿಗೆ ಒಳಪಟ್ಟು ನೇಮಕಾತಿ ಆದೇಶ ನೀಡಲಾಗಿರುತ್ತದೆ.
1. ಅಭ್ಯರ್ಥಿಗಳು ಈ ಆದೇಶ ಹೊರಡಿಸಿದ 15 (ಹದಿನೈದು) ದಿನಗಳೊಳಗಾಗಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.
2. ಒಂದು ವೇಳೆ ನಿಗಧಿತ ಅವಧಿಯೊಳಗೆ ಈ ನೇಮಕಾತಿ ಆದೇಶದ ಪ್ರಕಾರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ತಪ್ಪಿದ್ದಲ್ಲಿ, ಸದರಿಯವರ ನೇಮಕಾತಿ ಆದೇಶ ತಕ್ಷಣದಿಂದ ಜಾರಿಗೆ ಬರುವಂತೆ ರದ್ದಾಗುತ್ತದೆ ಎಂದು ತಿಳಿಸುವುದು ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದ ಇರುವುದಿಲ್ಲ.
3. ಈ ನೇಮಕಾತಿಯು ದಿನಾಂಕ 12/03/2024 ರಂದು ಹೊರಡಿಸಿರುವ ನೇಮಕಾತಿ ನೇಮಕಾತಿಯು ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ: 7 ರಲ್ಲಿ ನಮೂದಿಸಿರುವ ಅರ್ಹತಾ ಷರತ್ತುಗಳಿಗೊಳಪಟ್ಟು ಈ ಆದೇಶ ನೀಡಲಾಗಿರುತ್ತದೆ.
4. ಆಯ್ಕೆಯಾದ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ/ಪೊಲೀಸ್ ಪರಿಶೀಲನೆ/ಸಿಂಧುತ್ವ (ಜಾತಿ) ಪ್ರಮಾಣ ಪತ್ರ ದಾಖಲೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪರಿಶೀಲನೆಯಾದ ನಂತರವೇ ನೇಮಕಾತಿಯನ್ನು ಮಾನ್ಯಗೊಳಿಸಲಾಗುವುದು. ಸದರಿ ಪರಿಶೀಲನೆಯಲ್ಲಿ ದೋಷಗಳೇನಾದರು ಕಂಡುಬಂದಲ್ಲಿ ಸದರಿ ನೇಮಕಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗುವುದು ಮತ್ತು ಯಾವುದೇ ಸೂಚನೆ ನೀಡದೆ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು.
5. ಕಲ್ಯಾಣ-ಕರ್ನಾಟಕ ಪ್ರದೇಶ (371-ಜೆ) ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಸಿಂಧುತ್ವ ಪ್ರಮಾಣ ಪತ್ರ ಪರಿಶೀಲನೆಯಾದ ನಂತರವೇ ನೇಮಕಾತಿಯನ್ನು ಮಾನ್ಯಗೊಳಿಸಲಾಗುವುದು. ಸದರಿ ಪರಿಶೀಲನೆಯಲ್ಲಿ ದೋಷಗಳೇನಾದರು ಕಂಡುಬಂದಲ್ಲಿ ಸದರಿ ನೇಮಕಾತಿಯನ್ನು ರದ್ದುಗೊಳಿಸಲಾಗುವುದು.
6. ಅಭ್ಯರ್ಥಿಗಳು ಶಾರೀರಿಕ ಸುಸ್ಥಿತಿ ಪ್ರಮಾಣ ಪತ್ರವನ್ನು ವೈದ್ಯಾಧಿಕಾರಿಯವರಿಂದ ಪಡೆದು ಹಾಜರುಪಡಿಸತಕ್ಕದ್ದು.
7. ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಕಾಲ ಖಾಯಂಪೂರ್ವ ಸೇವಾವಧಿಯಲ್ಲಿರುತ್ತಾರೆ, ಈ ನಿಬಂಧನೆಗಳಲ್ಲದೆ ಸರ್ಕಾರಿ ನೌಕರರಿಗೆ ಅನ್ವಯವಾಗುವ ಇತರ ಸೇವಾ ನಿಯಮಗಳಿಗೂ ಸಹ ಬದ್ಧರಾಗಿರುತ್ತಾರೆ.
8. ಅಭ್ಯರ್ಥಿಯು ಸೇವೆಗೆ ವರದಿ ಮಾಡಿಕೊಳ್ಳಲು ಬರುವಾಗ ಪ್ರಯಾಣ ಭತ್ಯೆ ಮತ್ತು ಇತರೆ ಯಾವುದೇ ಭತ್ಯೆಗೆ ಅರ್ಹರಾಗಿರುವುದಿಲ್ಲ.






Comments