Loading..!

ಬ್ರೇಕಿಂಗ್ ನ್ಯೂಸ್ : ಶೀಘ್ರದಲ್ಲೇ ನಡೆಲಿದೆ 500 ಗ್ರಾಮ ಲೆಕ್ಕಾಧಿಕಾರಿ / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ, ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Yallamma G | Date:Oct. 14, 2025
Image not found

    ಶೀಘ್ರದಲ್ಲಿಯೇ 500 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ. ನಿರೀಕ್ಷಿಸಿ..!!


                 ಮೇಲಿನ ವಿಷಯಕ್ಕೆ ಸಂಬಂಧಿಸಿಂತೆ, ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಪುಕ್ರಿಯೆಯನ್ನು ತಡೆಹಿಡಿಯಲು ಸೂಚನೆಗಳನ್ನು ನೀಡಿ ಹೊರಡಿಸಲಾಗಿದ್ದ ಅಧಿಸೂಚನೆ/ಸುತ್ತೋಲೆಗಳನ್ನು ಹಿಂಪಡೆಯಲಾಗಿರುತ್ತದೆ. ಆದುದರಿಂದ 2025-26 ನೇ ಸಾಲಿನಲ್ಲಿ 500 ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಲುವಾಗಿ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುವಂತೆ ಉಲ್ಲೇಖದ ಪತ್ರದಲ್ಲಿ ಸೂಚಿಸಲಾಗಿರುತ್ತದೆ.


                   ಆದ್ದರಿಂದ ಉಲ್ಲೇಖದ ಪತ್ರವನ್ನು ಈ ಕೂಡ ಲಗತ್ತಿಸಿ ಕಳುಹಿಸುತ್ತಾ ಸದರಿ ಪತ್ರದಲ್ಲಿ ತಿಳಿಸಿರುವ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಿದ್ಧಪಡಿಸಿ ಸಮುಚ್ಚಿತ ಮಾರ್ಗದಲ್ಲಿ ಮೂರು ದಿನಗಳೊಳಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಕೋರಿದೆ.


        ಎಲ್ಲವೂ ಅಂದುಕೊಂಡಂತಾದರೆ & ಯಾವುದೇ ತೊಂದರೆ ಬಾರದೇ ಹೋದರೆ 2025 ನವೆಂಬರ್ ನಲ್ಲಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. PUC ವಿದ್ಯಾರ್ಹತೆ ಹೊಂದಿರುವವರು ಅಭ್ಯರ್ಥಿಗಳು ಗ್ರಾಮ ಲೆಕ್ಕಾಧಿಕಾರಿ / ಗ್ರಾಮ ಆಡಳಿತ ಅಧಿಕಾರಿ  ನೇಮಕಾತಿಗೆ ಅರ್ಜಿ ಸಲ್ಲಿಸಬಹುದು, ಲಿಖಿತ ಪರೀಕ್ಷೆ & ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.!!
👉 ಹುದ್ದೆಗಳ ವಿವರ


🧾 ಹುದ್ದೆಯ ಹೆಸರು: ಗ್ರಾಮ ಲೆಕ್ಕಾಧಿಕಾರಿ (VA) / ಗ್ರಾಮ ಆಡಳಿತ ಅಧಿಕಾರಿ (VAO) 
🪄 ನೇಮಕಾತಿ ಸಂಸ್ಥೆ: ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ (KPSC) ಅಥವಾ ಸಂಬಂಧಿತ ಜಿಲ್ಲಾಡಳಿತ
🏢 ಹುದ್ದೆಗಳ ಸಂಖ್ಯೆ: 500 (ಪ್ರಾಥಮಿಕ ಹಂತದಲ್ಲಿ)
📅 ನಿರೀಕ್ಷಿತ ಅಧಿಸೂಚನೆ ದಿನಾಂಕ: ನವೆಂಬರ್ 2025.
👉 ಅರ್ಹತೆ 
* ಅಭ್ಯರ್ಥಿಗಳು ಕನಿಷ್ಠ PUC (Pre-University Course) ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು.
* ರಾಜ್ಯದ ಯಾವುದೇ ಜಿಲ್ಲೆಯ ನಿವಾಸಿಗಳು ಅರ್ಜಿ ಸಲ್ಲಿಸಬಹುದು.
👉 ನೇಮಕಾತಿ ಪ್ರಕ್ರಿಯೆ 
ಅಧಿಸೂಚನೆ ಬಿಡುಗಡೆ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ
ಲಿಖಿತ ಪರೀಕ್ಷೆ – ಕಡ್ಡಾಯ ಕನ್ನಡ ಪತ್ರಿಕೆ ಹೊರತುಪಡಿಸಿ ತಲಾ 100 ಅಂಕಗಳ ಎರಡು ಪತ್ರಿಕೆಗಳು ಇರಲಿವೆ.
Negative Marks ವ್ಯವಸ್ಥೆ ಅನ್ವಯವಾಗುತ್ತದೆ (ತಪ್ಪು ಉತ್ತರಗಳಿಗೆ ಅಂಕ ಕಡಿತ).
ದಾಖಲೆಗಳ ಪರಿಶೀಲನೆ (Document Verification)
ಅಂತಿಮ ಆಯ್ಕೆ ಮತ್ತು ನೇಮಕಾತಿ
👉 ಪರೀಕ್ಷಾ ವಿನ್ಯಾಸ:  
📘 ಕನ್ನಡ ಕಡ್ಡಾಯ ಪತ್ರಿಕೆ (Qualifying)
📝 ಎರಡು ಮುಖ್ಯ ಪತ್ರಿಕೆಗಳು – ತಲಾ 100 ಅಂಕಗಳು
⏳ ಸಮಯಾವಧಿ – ಪ್ರತಿಯೊಂದು ಪತ್ರಿಕೆಗೆ ನಿಗದಿತ ಸಮಯ
❌ ನೆಗೆಟಿವ್ ಮಾರ್ಕಿಂಗ್ – ತಪ್ಪು ಉತ್ತರಗಳಿಗೆ ಅಂಕ ಕಡಿತ 
👉 ಮುಖ್ಯ ಸೂಚನೆ: 
* ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳ ಕಚೇರಿಗೆ ಪ್ರತಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಕಳುಹಿಸಲು ಸೂಚನೆ ನೀಡಲಾಗಿದೆ.
* ಮುಂದಿನ ಮೂರು ದಿನಗಳಲ್ಲಿ ಈ ವಿವರಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು.
* ಎಲ್ಲಾ ಹಂತಗಳು ಸರಿಯಾಗಿ ನಡೆದರೆ, ನವೆಂಬರ್ 2025ರಲ್ಲಿ ಅಧಿಕೃತ ಅಧಿಸೂಚನೆ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
👉 ಅಭ್ಯರ್ಥಿಗಳಿಗೆ ಸಲಹೆ: 
*ಪರೀಕ್ಷೆಗೆ ತಕ್ಷಣದಿಂದಲೇ ಸಿದ್ಧತೆ ಆರಂಭಿಸುವುದು ಉತ್ತಮ.
* ಪಠ್ಯಕ್ರಮ, ಮಾದರಿ ಪ್ರಶ್ನೆಪತ್ರಿಕೆ ಹಾಗೂ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಸಹಾಯಕ.
* ಕನ್ನಡ ಕಡ್ಡಾಯ ಪತ್ರಿಕೆಯಲ್ಲಿ ಕನಿಷ್ಠ ಪಾಸ್ ಅಂಕಗಳನ್ನು ಪಡೆಯುವುದು ಅತ್ಯಗತ್ಯ.
* ನೆಗೆಟಿವ್ ಮಾರ್ಕಿಂಗ್ ಇರುವುದರಿಂದ ಉತ್ತರಿಸಲು ಮುನ್ನ ಸರಿಯಾಗಿ ಯೋಚಿಸಿ.  


ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಯ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಟ್ಯಾಪ್ ಮಾಡಿ. ✅

Comments