Loading..!

ಐಸಿಎಸ್‌ಐಎಲ್ (ICSIL) ನೇಮಕಾತಿ 2025: ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:Aug. 12, 2025
not found

ಇಂಟೆಲಿಜೆಂಟ್ ಕಮ್ಯುನಿಕೇಶನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL) 2025 ನೇ ಸಾಲಿನಲ್ಲಿ ಡೇಟಾ ಎಂಟ್ರಿ ಆಪರೇಟರ್ (DEO) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಒಟ್ಟು 05 ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ2025ರ ಆಗಸ್ಟ್ 18ರಂದು ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.


ಹುದ್ದೆಯ ವಿವರಗಳು : 
ಸಂಸ್ಥೆ ಹೆಸರು : ಇಂಟೆಲಿಜೆಂಟ್ ಕಮ್ಯುನಿಕೇಶನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL)
ಹುದ್ದೆಯ ಹೆಸರು : ಡೇಟಾ ಎಂಟ್ರಿ ಆಪರೇಟರ್ (DEO)
ಹುದ್ದೆಗಳ ಸಂಖ್ಯೆ : 05
ಉದ್ಯೋಗ ಸ್ಥಳ : ದೆಹಲಿ – ನವದೆಹಲಿ


ವೇತನ ಶ್ರೇಣಿ : 
ಅಭ್ಯರ್ಥಿಗಳಿಗೆ ಪ್ರತಿ ದಿನ ₹937/- ರೂ ಗಳ ವೆರೆಗೆ ವೇತನವನ್ನು ನೀಡಲಾಗುತ್ತದೆ.


ಅರ್ಹತೆಗಳು :
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು.


ವಯೋಮಿತಿ : 
ಅಭ್ಯರ್ಥಿಗಳು ಕನಿಷ್ಠ 22 ವರ್ಷ ಮತ್ತು ಗರಿಷ್ಠ 42 ವರ್ಷ (18-08-2025ರ ದಿನಾಂಕಕ್ಕೆ ಅನುಗುಣವಾಗಿ) ಗಳ ವಯೋಮಿತಿಯನ್ನು ಹೊಂದಿರಬೇಕು.


ವಯೋಮಿತಿಯ ಸಡಿಲಿಕೆ: ಸಂಸ್ಥೆಯ ನಿಯಮಾನುಸಾರ


ಅರ್ಜಿ ಶುಲ್ಕ :
ಎಲ್ಲಾ ಅಭ್ಯರ್ಥಿಗಳು: ₹590/- (ಆನ್‌ಲೈನ್ ಪಾವತಿ)


ಆಯ್ಕೆ ವಿಧಾನ :
ಸಂದರ್ಶನ (Interview) ಮೂಲಕ ಆಯ್ಕೆ


ಸಂದರ್ಶನದ ವಿಳಾಸ :
Intelligent Communication Systems India Limited,
Administrative Building, 1st Floor,
Above Post Office, Okhla Industrial Estate, Phase-III,
New Delhi – 110020


ಪ್ರಮುಖ ದಿನಾಂಕಗಳು :
- ಅಧಿಸೂಚನೆ ಬಿಡುಗಡೆ ದಿನಾಂಕ: 08-08-2025
- ವಾಕ್-ಇನ್ ಸಂದರ್ಶನ ದಿನಾಂಕ: 18-08-2025


ಅಭ್ಯರ್ಥಿಗಳು ನಿರ್ದಿಷ್ಟ ದಿನಾಂಕದಲ್ಲಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕಿದೆ. ದೆಹಲಿ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ.

Comments